30.9 C
ಪುತ್ತೂರು, ಬೆಳ್ತಂಗಡಿ
October 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರಿ ಸಂಘ ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ 115ನೇ ಉಚಿತ ನೇತ್ರ ತಪಾಸಣಾ ಶಿಬಿರ

ಮಂಗಳೂರು: ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ವತಿಯಿಂದ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಗಾಂಧಿನಗರ ಮಂಗಳೂರು, ನೇಶನಲ್ ಸರ್ವೀಸ್‌ ಸ್ಕೀಮ್‌, ಯೂತ್ ರೆಡ್‌ ಕ್ರಾಸ್‌, ಲಯನ್ಸ್ ಮತ್ತು ಲಿಯೋ ಕ್ಲಬ್‌ ಮಂಗಳೂರು ಇದರ ಸಹಭಾಗಿತ್ವದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರವು ಕಾಲೇಜಿನ ಸಭಾಂಗಣದಲ್ಲಿ ಕಣಚೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ವೈದ್ಯಕೀಯ ತಂಡದ ಸಹಕಾರದೊಂದಿಗೆ ನಡೆಯಿತು.

ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ ಉದ್ಘಾಟಿಸಿ ಮಾತನಾಡಿ “ಜೀವನದಲ್ಲಿ ಪ್ರತಿಯೊಬ್ಬರಿಗೂ ಕಣ್ಣು ಅತೀ ಅಮೂಲ್ಯವಾದ ಅಂಗ. ಅದಕ್ಕೆ ತೊಂದರೆ ಬಂದಾಗ ಕೂಡಲೇ ವೈದ್ಯರನ್ನು ಕಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗಿದೆ. ಕಣ್ಣಿನ ಬಗ್ಗೆ ನಾವು ಯಾವತ್ತೂ ಜಾಗೃತರಾಗಿರಬೇಕು” ಎಂದರು. ಸಂಘವು ಎಲ್ಲಾ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸುತ್ತ ಬರುತ್ತಿದೆ. ಇದು ಸಂಘದ ವತಿಯಿಂದ ಆಯೋಜಿಸಿರುವ 115ನೇ ಉಚಿತ ಕಣ್ಣಿನ ತಪಾಸಾಣೆ ಶಿಬಿರ” ಎಂದರು.

ಲಯನ್ಸ್ ಕ್ಲಬ್‌ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಹೇಮಾ ರಾವ್‌ ಮಾತನಾಡಿ, “ಲಯನ್ಸ್‌ನಿಂದ ಈಗಾಗಲೇ ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಹಲವು ಶಿಬಿರಗಳನ್ನು ನಾವು ಆಯೋಜನೆ ಮಾಡಿದ್ದೇವೆ. ಈ ಬಾರಿ ಕಾಲೇಜಿನಲ್ಲಿ ಆಯೋಜನೆ ಮಾಡುವ ಮೂಲಕ ಶಿಬಿರದ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಶು0ಪಾಲರಾದ ಡಾ ಜಯಪ್ರಕಾಶ್ ರವರು ಮಾತನಾಡಿ ” ಆರೋಗ್ಯದ ಕಾಳಜಿಯು ತುಂಬ ಮುಖ್ಯವಾದ ವಿಷಯ. ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಇವತ್ತಿನ ಶಿಬಿರವನ್ನು ಆಯೋಜಿಸಲು ಸಂಪೂರ್ಣ ಸಹಕಾರ ನೀಡಿದ ಆತ್ಮಶಕ್ತಿ ವಿವಿದ್ಧೋದ್ದೇಶ ಸಹಕಾರಿ ಸಂಘ ಮಂಗಳೂರು, ಲಯನ್ಸ್ ಹಾಗೂ ಲಿಯೋ ಕ್ಲಬ್ ಮಂಗಳೂರು ಇವರಿಗೆ ಧನ್ಯವಾದಗಳನ್ನು ಅರ್ಪಿಸುವುದರೊಂದಿಗೆ ಇನ್ನು ಮುಂದಿನ ದಿನಗಳಲ್ಲಿಯೂ ಇದೇ ರೀತಿ ಸಹಕಾರವಿರಲಿ. ಹಾಗೆಯೇ ಇಂದಿನ ಈ ಶಿಬಿರವು ವಿದ್ಯಾರ್ಥಿ ಗಳಿಗೆ ಉಪಯುಕ್ತವಾಗಲಿ” ಎಂದು ಶುಭ ಹಾರೈಸಿದರು…

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಜಿ.ಪರಮೇಶ್ವರ ಪೂಜಾರಿ, ರಮಾನಾಥ್ ಸನಿಲ್, ದಿವಾಕರ ಬಿಪಿ, ಗೋಪಾಲ್ ಎಮ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್, ಲಯನ್ ಕ್ಲಬ್ ಜಿಲ್ಲೆ 317ಡಿ ಯ ನಿಕಟ ಪೂರ್ವ ವಲಯಾಧ್ಯಕ್ಷ ರಾದ ಲಯನ್ ಶೀನಾ ಪೂಜಾರಿ, ಕಣಚೂರು ಮೆಡಿಕಲ್‌ ಕಾಲೇಜಿನ ವೈದ್ಯರಾದ ಡಾ. ಸಿಮ್ರಾನ್‌, ಗೋಕರ್ಣನಾಥೇಶ್ವರ ಕಾಲೇಜಿನ ನೇಶನಲ್ ಸರ್ವೀಸ್‌ ಸ್ಕೀಮ್‌, ಯೂತ್ ರೆಡ್‌ ಕ್ರಾಸ್‌ ನ ಸಂಯೋಜನಾಧಿಕಾರಿಯಾದ ಕುಮಾರಿ ಪ್ರತೀಕ್ಷಾ, ಮೊದಲಾದವರಿದ್ದರು.

ಸುಮಾರು 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

ಗೋಕರ್ಣನಾಥೇಶ್ವರ ಕಾಲೇಜಿನ ನೇಶನಲ್ ಸರ್ವೀಸ್‌ ಸ್ಕೀಮ್‌, ಯೂತ್ ರೆಡ್‌ ಕ್ರಾಸ್‌ ನ ಸಂಯೋಜನಾಧಿಕಾರಿ ಬಾಲಚಂದ್ರ ಸ್ವಾಗತಿಸಿ, ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಕುಮಾರಿ ಅನುಷಾ ವಂದಿಸಿದರು. ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಮಿಥುನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯ ನೇತೃತ್ವದಲ್ಲಿ ಆಟಿ ಕೂಟ

Suddi Udaya

ನಿವೃತ್ತ ಸೇನಾನಿ ಅನೀಶ್ ಡಿ.ಎಲ್‌ ರವರಿಗೆ ಬೆಳ್ತಂಗಡಿಯಲ್ಲಿ ಅದ್ದೂರಿಯ ಸ್ವಾಗತ

Suddi Udaya

ಪಡಂಗಡಿ ಕಾರ್ಯನ ಮುಟ್ಟಿಯವರಿಗೆ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿ ವಿತರಣೆ

Suddi Udaya

ನೆರಿಯ: ಅಣಿಯೂರು ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ: ಕಾಟಾಜೆ ರಸ್ತೆಗೆ ನೀರು ಪ್ರವೇಶಿಸಿ ಮುಳುಗಿದ ಕಾರು

Suddi Udaya

9/11 ಪ್ರಮಾಣ ಪತ್ರವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಆದೇಶವನ್ನು ರದ್ದುಪಡಿಸಿ ಗ್ರಾ.ಪಂ. ನಲ್ಲಿಯೇ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನವಿ

Suddi Udaya

ಸುದ್ದಿಉದಯ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ, ಹೇ ಶಾರದೇ, ಕೃಷ್ಣ ವೇಷ ಸ್ಪರ್ಧೆಗಳ ಬಹುಮಾನ ವಿತರಣೆ

Suddi Udaya
error: Content is protected !!