November 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಸಿಎ ಫೌಂಡೇಶನ್ ತರಬೇತಿ

ಉಜಿರೆ: ಎಸ್‌ಡಿಎಂ ಪಿಯು ಕಾಲೇಜು, ಉಜಿರೆಯ ವಾಣಿಜ್ಯ ವಿಭಾಗದ ವತಿಯಿಂದ ಸಿಎ ಫೌಂಡೇಶನ್ ತರಬೇತಿ ತರಗತಿಯನ್ನು ಉದ್ಘಾಟಿಸಲಾಯಿತು.

ಪರೀಕ್ಷಾ ಅಕಾಡೆಮಿಯ ಸಿಎಸ್ ಹರ್ಷಿಳಾ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪರಿಕಲ್ಪನಾ ಜ್ಞಾನ, ನಿರಂತರ ಅಭ್ಯಾಸ ಹಾಗೂ ಶಿಸ್ತುಬದ್ಧ ತಯಾರಿಯ ಮಹತ್ವವನ್ನು ತಿಳಿಸಿದರು.

ಮುಖ್ಯ ಅತಿಥಿ ಡಾ. ರತ್ನಾವತಿ, ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ, ಮಾತನಾಡಿ, ವಾಣಿಜ್ಯ ಶಿಕ್ಷಣದ ಮಹತ್ವವನ್ನು ವಿವರಿಸಿದರು. ತೆರಿಗೆ, ಹಣಕಾಸು ಲೆಕ್ಕಶಾಸ್ತ್ರ ಹಾಗೂ ವೆಚ್ಚ ಲೆಕ್ಕಶಾಸ್ತ್ರದಂತಹ ವಿಷಯಗಳಲ್ಲಿ ಉತ್ತಮ ಜ್ಞಾನ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಪ್ರಮೋದ್ ಕುಮಾರ್ ಅವರು, ಕಾಲೇಜಿನಲ್ಲಿ ಆಧುನಿಕ ಹಾಗೂ ಭವಿಷ್ಯಮುಖಿ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಲಾಗುತ್ತಿದೆ ಎಂದು ಹೇಳಿದರು.

ಶ್ರೇಷ್ಠಾ ಸ್ವಾಗತಿಸಿ, ವೈಷ್ಣವಿ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬೇಬಿ ಎನ್. ವಂದನಾರ್ಪಣೆ ಸಲ್ಲಿಸಿದರು. ಶೋಭಾ, ಸವಿತಾ ಹಾಗೂ ಪ್ರಭಾವತಿ ಸಹಕರಿಸಿದರು.

Related posts

ಕುಕ್ಕೇಡಿ: ಪಂಡಿಜೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಚತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ವೇಣೂರು ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್ ವತಿಯಿಂದ ಎನ್.ಎಸ್.ಎಸ್ ದಿನಾಚರಣೆ: ಪ್ರಾಣಾಯಾಮ, ಧ್ಯಾನ ಮತ್ತು ಪೌಷ್ಟಿಕಾಂಶ ಸಲಹೆ

Suddi Udaya

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ಉಜಿರೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

Suddi Udaya

ಕಳೆಂಜ: ಮಾಪಳದಡ್ಡ ಚಂದ್ರಾವತಿರಿಗೆ ಶ್ರೀ ಕ್ಷೇ. ಧ.ಗ್ರಾ. ಯೋಜನೆಯಿಂದ ಮಾಶಾಸನ ಮಂಜೂರು ಪತ್ರ ವಿತರಣೆ

Suddi Udaya
error: Content is protected !!