ತಣ್ಣೀರುಪಂತ: ಗ್ರಾಮದ ಅಭಿನಂದನಾ ಸಮಿತಿ ವತಿಯಿಂದ ಪ್ರತಿಷ್ಟಿತ ಕರ್ನಾಟಕ ಟಿವಿ ಕೊಡಮಾಡುವ ಕರಾವಳಿ ಹಾಗೂ ಮದ್ಯ ಕರ್ನಾಟಕ ವಿಭಾಗದಲ್ಲಿ “ಉತ್ತಮ ಶಾಸಕ ಪ್ರಶಸ್ತಿ” ಪುರಸ್ಕೃತರಾದ ಶಾಸಕ ಹರೀಶ್ ಪೂಂಜಾರವರಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಗೌರವಾಭಿನಂದನೆ-2026 ಕಾರ್ಯಕ್ರಮ ಅ. 04 ರಂದು ಕಲ್ಲೇರಿ ಸಿ. ಎ ಬ್ಯಾಂಕ್ ರೈತ ಸಭಾಭವನದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ’ರವರು, ನನಗೆ ನೀವು ಕೊಟ್ಟಂತಹ ಪ್ರೀತಿಯ ಸನ್ಮಾನವನ್ನು ಅತ್ಯಂತ ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ. ಆದರೆ, ಈ ಸನ್ಮಾನ ನನಗಲ್ಲ, ಇದು ತಣ್ಣೀರುಪಂತ, ಕರಾಯ, ಬಾರ್ಯ,ಉರುವಾಲು,ತೆಕ್ಕಾರು, ಪುತ್ತಿಲ, ಇಳಂತಿಲ ಗ್ರಾಮದ ಗ್ರಾಮಸ್ಥರಿಗೆ ಅರ್ಪಿತವಾಗಿದೆ. ನಾನು ನಿಮ್ಮೆಲ್ಲರ ಆಶಿರ್ವಾದದಿಂದ ಶಾಸಕನಾದ ಬಳಿಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಸದ್ಯ, ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನಗಳು ಬರ್ತಾ ಇಲ್ಲ. ಆದರೂ, ನಾನು ನನ್ನ ತಾಲೂಕಿನ ಜನರಿಗಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ತಾಲೂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಹಿರಿಯ ವಕೀಲರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ರವರು ಅಭಿನಂದನಾ ಭಾಷಣ ಮಾಡುತ್ತಾ, ನವ ಬೆಳ್ತಂಗಡಿ ನಿರ್ಮಾಣದ ಶಿಲ್ಪಿ ನಮ್ಮ ಶಾಸಕರು. ಇಡೀ ದೇಶವೇ ಇಂದು ಬೆಳ್ತಂಗಡಿಯತ್ತ ತಿರುಗಿ ನೋಡುವಂತೆ ಮಾಡಿದ್ದು, ಹೆಮ್ಮೆಯ ಶಾಸಕ ಹರೀಶ್ ಪೂಂಜಾರವರು. ತಾಲೂಕಿನಲ್ಲಿ ಹಾಗೂ ನಮ್ಮ ಊರಿನಲ್ಲಿ ಅಭಿವೃದ್ಧಿ ಅನ್ನೋದು ಹಿಂದೆ ಹೇಗಿತ್ತು ಈವಾಗ ಹೇಗಿದೆ ಅನ್ನೋದಕ್ಕೆ ಮೊದಲ ಭಾರಿ ಶಾಸಕರಾದ ಸಮಯದಲ್ಲಿ ನೀಡಿದ ಅನುದಾನವೇ ನಮಗೆ ಸಾಕ್ಷಿಯಾಗಿದೆ. ಇನ್ನಷ್ಟು ಬೆಳ್ತಂಗಡಿ ಪ್ರಗತಿಯ ಚಿತ್ರಣ ಬದಲಾವಣೆ ಹರೀಶ್ ಪೂಂಜಾರಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

ಗೌರವಾಭಿನಂದನೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ ಕರಾಯ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದ್ಯಮಿಗಳಾದ ಹಲೇಜಿ ಅತುಲ್ ಕುಮಾರ್ ರವರು ಶಾಸಕರ ಮಾದರಿ ಕಾರ್ಯವೈಖರಿ,ಸಾಮಾಜಿಕ, ಸೇವಾ ಮನೋಭಾವನೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿ ದೃಷ್ಟಿಯಲ್ಲಿ ಯೋಚನೆ, ಯೋಜನೆ ಹಾಗೂ ತಾಲೂಕಿನಲ್ಲಾಗಿರುವ ಅಭಿವೃದ್ಧಿ ವಿಚಾರದ ಜೊತೆಗೆ ಹರೀಶ್ ಪೂಂಜಾರವರು ಮುಂದೆ ಅದ್ಬುತ ಗೆಲುವಿನೊಂದಿಗೆ ಶಾಸಕರಾಗಿ ಸಚಿವರಾಗಿ ಬರಲಿ ತಾಲೂಕಿನ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲೆಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಸುದರ್ಶನ್ ಕೊಲ್ಲಿ ಸುಪ್ರಭಾತ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಾಸಪ್ಪ ಗೌಡ, ಕರಾಯ ಆನಂದ ಟೈಲರ್ ಪೂಂಜಾಳ, ಬಾರ್ಯ ಬಿಜೆಪಿ ಹಿರಿಯ ಕಾರ್ಯಕರ್ತರಾದ ಸೀತಾರಾಮ ಶೆಟ್ಟಿ ಸುರಿಯ, ತೆಕ್ಕಾರು ಸಮಾಜ ಸೇವಕರು, ಪ್ರಗತಿ ಪರ ಕೃಷಿಕರಾದ ಸಂದೇಶ್ ಕುಮಾರ್ ಜೈನ್, ಪುತ್ತಿಲ ಬಿಜೆಪಿ ಹಿರಿಯ ಕಾರ್ಯಕರ್ತರಾದ ಜನಾರ್ಧನ ಶೆಟ್ಟಿ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಅನಂತಕೃಷ್ಣ ಕುದ್ದಣ್ಣಾಯ, ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೇಸಪ್ಪ ಸಾಲ್ಯಾನ್, ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಜಯಾನಂದ ಕಲ್ಲಾಪು, ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಹ ಸಂಚಾಲಕರಾದ ಇಂಜಿನಿಯರ್ ಪ್ರಸನ್ನ ದರ್ಬೆ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಎಮಿನೆಂಟ್ ಇಂಜಿನಿಯರ್ -2026 ಪ್ರಶಸ್ತಿ ಪುರಸ್ಕೃತರಾದ
ಬಿಜೆಪಿ ಜಿಲ್ಲಾ ಪ್ರಕೋಷ್ಠ ಸಹ ಸಂಚಾಲಕರಾದ ಇಂಜಿನಿಯರ್ ಪ್ರಸನ್ನ ದರ್ಬೆ ಯವರಿಗೆ ಸನ್ಮಾನ ನೆರವೇರಿತು.
ಬಿಜೆಪಿ ಸ್ಪಂದನ ಸಮಿತಿ ಬಾರ್ಯ -ಪುತ್ತಿಲ ವತಿಯಿಂದ ಆಶಕ್ತ ಕುಟುಂಬಗಳಾದ ಇತ್ತೀಚೆಗೆ ಮೃತರಾದ ಪುತ್ತಿಲ ಬಿಜೆಪಿ ಶಕ್ತಿ ಅಧ್ಯಕ್ಷರಾದ ಪ್ರವೀಣ್ ಬೇoಗಿಲ ರವರ ಮಗುವಿನ ಭವಿಷ್ಯದ ಭದ್ರತೆಗೆ ರೂ. 2.00 ಲಕ್ಷ ಸಂಗ್ರಹಣೆ ಮಾಡಿ (FD) ಫಿಕ್ಸೆಡ್ ಡೆಪಾಸಿಟ್ ಬಾಂಡ್ ವಿತರಿಸಲಾಯಿತು, ಅದೇ ರೀತಿಯಲ್ಲಿ ಜನಾರ್ಧನ ಪೂಜಾರಿ ಯವರ ಮನೆ ನಿರ್ಮಾಣ ಸಿಮೆಂಟ್ ಶೀಟ್ ಅಳವಡಿಸಲು ಹಾಗೂ ಲಿಂಗಪ್ಪ ಬೊಲ್ಲಗುರಿ ಅವರ ಅನಾರೋಗ್ಯದ ಸಲುವಾಗಿ ಆರ್ಥಿಕ ನೆರವು ನೀಡಲಾಯಿತು.ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆ ಮಾಡಿದ ಸಾಧಕಿ ಕು. ರಕ್ಷಾ ಡಿ ಇವರಿಗೆ ಧನ ಸಹಾಯದ ಜೊತೆಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಚಿದಾನಂದ ನಾಯ್ಕ್ ಕುಪ್ಪೆಟ್ಟಿ ವಂದೇಮಾತರಂ ಹಾಡಿದರು. ಜಯಾನಂದ ಕಲ್ಲಾಪು ರವರು ಪ್ರಾಸ್ತಾವಿಕ ಮಾತುಗಳ ಮೂಲಕ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ರವರು ನಿರೂಪಣೆಗೈದು, ಪ್ರಭಾಕರ ಗೌಡ ಪೊಸoದೋಡಿ ಧನ್ಯವಾದವಿತ್ತರು. ಮಾನಸ ಕಲಾ ಆರ್ಟ್ಸ್ ಕಲ್ಲೇರಿ -ಉಪ್ಪಿನಂಗಡಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಸಭಾ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಉಪಸ್ಥಿತರಿದ್ದರು.













