ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಲ್ಕೇರಿ ಶ್ರೀರಾಮ ಅ.ಖಾ.ಹಿ.ಪ್ರಾ. ಶಾಲೆಗೆ ಬೆಂಗಳೂರು ಎಸ್ಕವ ಪ್ರೈ.ಲಿ ವತಿಯಿಂದ ಸಿಸಿ ಕ್ಯಾಮರಾ ಹಾಗೂ ಜನರೇಟರ್ ಕೊಡುಗೆ

ಸುಲ್ಕೇರಿ ಶ್ರೀರಾಮ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.30 ರಂದು ಎಸ್ಕವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಶಾಲೆಗೆ ಕೊಡುಗೆಯಾಗಿ ನೀಡಿದ ರೂ. 1 ಲಕ್ಷ 69 ಸಾವಿರ ಮೌಲ್ಯದ ಸಿಸಿ ಕ್ಯಾಮರಾ ಹಾಗೂ ರೂ. 3 ಲಕ್ಷ 58 ಸಾವಿರ ಮೌಲ್ಯದ ಜನರೇಟರ್ ಇದರ ಉದ್ಘಾಟನಾ ಕಾರ್ಯಕ್ರಮವು ಜರಗಿತು.

ಕಾರ್ಯಕ್ರಮದಲ್ಲಿ ಎಸ್ಕವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಎ.ಜಿ.ಎಮ್ ಕಾರ್ಪೋರೇಟ್ ಎಚ್ ಆರ್ ರಾಜೇಶ್, ಸೀನಿಯರ್ ಮ್ಯಾನೇಜರ್ ರಾಘವೇಂದ್ರ ಕೆ , ಕಂಪನಿ ಕಾರ್ಯದರ್ಶಿ ಮಹೇಶ್ ಕುಮಾರ್, ಸೀನಿಯರ್ ಇಂಜಿನಿಯರ್ ಜೀವನ್ ಶೆಟ್ಟಿ, ಪ್ರೊಡಕ್ಷನ್ ಅಪರೇಟರ್ ಶರತ್ ಹೆಗ್ಡೆ ಸಾವ್ಯ, ಶಾಲಾ ಆಡಳಿತ ಮಂಡಳಿ, ಗೌರವಾಧ್ಯಕ್ಷ ಗಣೇಶ್ ಹೆಗ್ಡೆ, ಅಧ್ಯಕ್ಷ ರಾಜು ಪೂಜಾರಿ, ಸಾಮಾಜಿಕ ಕಾರ್ಯಕರ್ತ ವಿನಿತ್ ಸಾವ್ಯ, ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಹೆಗ್ಡೆ ಉಪಸ್ಥಿತರಿದ್ದರು.

ಎಸ್ಕವ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಅಧಿಕಾರಿ ವರ್ಗದವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯು ಜತೆ ಕಾರ್ಯದರ್ಶಿ ನಾರಾಯಣ ಪೂಜಾರಿ, ಕೋಶಾಧಿಕಾರಿ ಶಶಿಧರ ಶೆಟ್ಟಿ, ಸದಸ್ಯ ರಾದ ಎಚ್ ಎಲ್ ರಾವ್, ರಾಜೇಶ್ ಶೆಟ್ಟಿ, ದಯಾಕರ ರೈ, ಎಂ ಎಸ್.ಸಿ ಸುಲ್ಕೇರಿಯ ಅಧ್ಯಕ್ಷ ಸುನೀಲ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಕಾಲೇಜಿನಲ್ಲಿ ಒಂದು ದಿನದ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮ: ಕಲಿಕೆಯ ನಿಖರತೆಗೆ ಅತ್ಯಾಧುನಿಕ ಮೌಲ್ಯಮಾಪನ ಪೂರಕ: ಎಸ್. ಎನ್. ಕಾಕತ್ಕರ್

Suddi Udaya

ಪುತ್ತಿಲ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಧರ್ಮಸ್ಥಳ; ಹದಗೆಟ್ಟ ‌ನೇರ್ತನೆ ರಸ್ತೆ; ಗ್ರಾಮಸ್ಥರಿಂದ ಶ್ರಮದಾನದ ಮೂಲಕ ದುರಸ್ತಿ

Suddi Udaya

ಶಿರ್ಲಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಜಾತ್ರಾ ಸಮಿತಿ ರಚನೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮ : ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

Suddi Udaya

ರಾಜ್ಯಮಟ್ಟದ ಭಾಷಣ ಸ್ಪರ್ಧೆ: ಪಿಲ್ಯದ ಧನುಶ್ರೀ ಎಸ್. ಕುಲಾಲ್ ಪ್ರಥಮ

Suddi Udaya
error: Content is protected !!