30.9 C
ಪುತ್ತೂರು, ಬೆಳ್ತಂಗಡಿ
October 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ದುರ್ಗಾ ಹೋಮ ಹಾಗೂ ವಿದ್ಯಾಸರಸ್ವತಿ ಪೂಜೆ ಮತ್ತು ನೂತನ ತರಗತಿ ಕೊಠಡಿ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಪಟ್ಟೂರು : ಇಲ್ಲಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ನ. 6 ರಂದು ಕೆ . ಎಂ.ಶರ್ಮ ಮುಳ್ಳೇರಿಯ ಮಾರ್ಗದರ್ಶನದಲ್ಲಿ ದುರ್ಗಾ ಹೋಮ ಹಾಗೂ ವಿದ್ಯಾಸರಸ್ವತಿ ಪೂಜೆ ನಡೆಯಲಿದೆ. ಜೊತೆಗೆ ನೂತನ ತರಗತಿ ಕೊಠಡಿ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಬಿಡುಗಡೆಗೊಳಿಸಿದರು.

ವಿದ್ಯಾಸಂಸ್ಥೆಯ ಸಾನಿಧ್ಯ ಬಲವರ್ಧನೆಯ ಪ್ರಯುಕ್ತ ಪ್ರಶ್ನಾ ಚಿಂತನೆಯಲ್ಲಿ ದುರ್ಗಾಹೋಮ ಹಾಗೂ ವಿದ್ಯಾಸರಸ್ವತಿ ಪೂಜೆಯನ್ನು ಶಾಲಾ ಆವರಣದಲ್ಲಿ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಸುತ್ತಮುತ್ತಲಿನ ಹತ್ತು ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿಕೊಂಡು ಪೂಜಾಕಾರ್ಯವನ್ನು ನಡೆಸಬೇಕು, ಈ ಮೂಲಕ ವಿದ್ಯಾಸಂಸ್ಥೆಯ ಜೊತೆಗೆ ಈ ಪೂಜೆಯ ಫಲ, ಅನುಗ್ರಹ ಎಲ್ಲಾ ಮನೆ-ಮನೆಗೂ ತಲುಪುವಂತಾಗಬೇಕು ಎಂದು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಜನಾರ್ಧನ ಕಜೆ, ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ, ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್, ಆಡಳಿತ ಸಮಿತಿ ಪದಾಧಿಕಾರಿಗಳು, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಪುತ್ತಿಲ ಕುಂಡಡ್ಕ : ಮನೆಯ ದಾರಂದ ಬಿದ್ದು ಶಾಲಾ ಬಾಲಕಿ ಅಲ್ಫಿಯಾ ಮೃತ್ಯು

Suddi Udaya

ಬಳಂಜ: 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಶ್ರದ್ದಾ ಭಕ್ತಿಯಿಂದ ಗಣಪತಿ ದೇವರ ಆರಾಧನೆ, ಸಾವಿರಾರು ಭಕ್ತರು ಭಾಗಿ

Suddi Udaya

ಬಳಂಜ ಶಾಲಾ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಶೈಕ್ಷಣಿಕ ನಿಧಿ ವಿತರಣೆ

Suddi Udaya

27 ನೇ ವರ್ಷದ ಭಜನಾ ಕಮ್ಮಟ: ಆಧ್ಯಾತ್ಮಿಕ ಕಮ್ಮಟಗಳು ಭಜನೆಗೆ ಮಾತ್ರವಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ವೇದಿಕೆ:ಅನಿಲ್ ಕುಮಾರ್

Suddi Udaya
error: Content is protected !!