ಬೆಳ್ತಂಗಡಿ: ಬೆಳ್ತಂಗಡಿ ಖಾಸಗಿ ಶಾಲಾ 9ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15ವರ್ಷ) ಮಂಗಳೂರು ಪಣಂಬೂರು ಬೀಚ್ ನಲ್ಲಿ ಸಮುದ್ರಕ್ಕೆ ಅ.4ರಂದು ಸಂಜೆ ಈಜಲು ಹೋಗಿದ್ದು, ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಬಾಲಕ ನೀರು ಪಾಲಾಗಿರ ಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಾಲಕ ನಾಪತ್ತೆ ಬಗ್ಗೆ ಇನ್ನಷ್ಟೇ ಸ್ವಷ್ಟ ಮಾಹಿತಿ ದೊರೆಯ ಬೇಕಾಗಿದೆ. ಬಾಲಕನ ಪೋಷಕರು ಪಣಂಬೂರು ಠಾಣೆಗೆ ದೂರು ನೀಡಲು ಮಂಗಳೂರುಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.









