24.2 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಂದಾರು  “ಸಿದ್ದಿವಿನಾಯಕ” ಸಂಜೀವಿನಿ  ಒಕ್ಕೂಟದ   ವಾರ್ಷಿಕ ಮಹಾಸಭೆ 

ಬಂದಾರು  : ಬಂದಾರು   “ಸಿದ್ದಿವಿನಾಯಕ”ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ವಾರ್ಷಿಕ ಮಹಾಸಭೆ ಯನ್ನು ಒಕ್ಕೂಟದ ಅಧ್ಯಕ್ಷೆ ಸುಚಿತ್ರ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ  ಸಂಜೀವಿನಿ ಧ್ಯೇಯ್ಯೋದೇಶದ ಬಗ್ಗೆ ಸವಿಸ್ತರಾವಾಗಿ ಮಾಹಿತಿಯನ್ನು ನೀಡಿದರು. ಪಂಚಾಯತ್ ಆಡಳಿತಧಿಕಾರಿ  ಡಾ. ಸಹನಾರವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ನಿರ್ಮಲ್ ಕುಮಾರ್ ರವರು ಹಾಗೂ ಒಕ್ಕೂಟದ ಅಧ್ಯಕ್ಷೆ ಸುಚಿತ್ರ ,ಬೆಳ್ತಂಗಡಿ ತಾಲೂಕು ಪಂಚಾಯತ್ ವಲಯ ಮೇಲ್ವಿಚಾರಕರು ವೀಣಾಶ್ರೀ ಉಪಸ್ಥಿತರಿದ್ದರು.

ಒಕ್ಕೂಟದ ವಾರ್ಷಿಕ ವರದಿ ಯನ್ನು  ಶ್ವೇತಾ  ಸಭೆಗೆ ಮಂಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್  ಸಭೆಯನ್ನು ಉದ್ದೇಶಿಸಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು. 

ಪದಾಧಿಕಾರಿಗಳ ಪದಗ್ರಹಣವನ್ನು ವಲಯ ಮೇಲ್ವಿಚಾರಕಿ ವೀಣಾ ಶ್ರೀ ರವರು ನಡೆಸಿದರು.  ಶ್ರೀನಿಧಿ ಸಂಘದಲ್ಲಿ ಪರಿಶಿಷ್ಟ ವರ್ಗದವರು ಇರುವುದರಿಂದ ಆ ಸಂಘಕ್ಕೆ ಸರಕಾರದಿಂದ 20000 ನಗದು ಕೊಡಲಾಯಿತು. ಆರೋಗ್ಯ ಅಧಿಕಾರಿ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಎಲ್ಲಾ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಆಯೋಜಿಸಲಾಗಿದ್ದ ಪುಷ್ಪಗುಚ್ಛ ಸ್ಪರ್ಧೆ,  ಲಕ್ಕಿ ಸ್ಟಾರ್,  ವಾರ್ಡ್ ಬೆಸ್ಟ್ ಸಂಘ ಹೀಗೆ ವಿಜೇತರಾದವರಿಗೆ ಬಹುಮಾನ ವನ್ನು ವಿತರಿಸಲಾಯಿತು.

ಘನ ತ್ಯಾಜ್ಯ ಘಟಕದ ವಾಹನ ಚಾಲಕಿ ಗೀತಾ ಮತ್ತು ಸಹಾಯಕಿ ಸರೋಜಿನಿ ಇವರ ಕೆಲಸವನ್ನು ಮೆಚ್ಚಿ ತಾಲೂಕು ಕಾರ್ಯಕ್ರಮ ವ್ಯವಸ್ತಾಪಕಿ ಪ್ರತಿಮಾರವರು ಗೌರವ ಸ್ಮರಣಿಕೆ ನೀಡಿ ಅಭಿನಂದಿಸಿದರು.ಅಧ್ಯಕ್ಷರು ಶ್ರೀಮತಿ ಸುಚಿತ್ರರವರು ಮಾತನಾಡಿ ಹಳೆ ಸಮಿತಿಯ ಒಂದೊಳ್ಳೆ ಅಡಿಪಾಯದಿಂದ ಮತ್ತು  ಸಂಘದ ಸದಸ್ಯರು ಗಳ ಸಕಾರಾತ್ಮಕ ಸ್ಪಂದನೆ ಯಿಂದ, ಸಂಜೀವಿನಿ ಸಿಬ್ಬಂದಿ ಗಳ ಕಾರ್ಯ ವೈಖರಿ ಯಿಂದ ಒಕ್ಕೂಟದ ಈ ಮಟ್ಟದ ಪ್ರಗತಿಗೆ ಸಾಧ್ಯವಾಯಿತು ಎಂದು ಶುಭಹಾರೈಸಿದರು . ಎಲ್ಲಾ ಸಂಜೀವಿನಿ ಸಿಬ್ಬಂದಿ ಗಳು ಸಹಕರಿಸಿದರು.  ಶ್ವೇತಾ ಮತ್ತು ಕೃಷಿ ಸಖಿ ಶ್ರೀಮತಿ ರಶ್ಮಿತಾರವರ ಪ್ರಾರ್ಥಿಸಿದರು.  ಪವಿತ್ರ ಸ್ವಾಗತಿಸಿದರು.  ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.  ಪಶು ಸಖಿ ಶಿಲ್ಪಾ ರವರ ಧನ್ಯವಾದವಿತ್ತರು.

Related posts

ಸುಲ್ಕೇರಿ ಶ್ರೀರಾಮ ಶಾಲೆಗೆ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆಯವರಿಂದ 650 ಊಟದ ಸ್ಟೀಲ್ ತಟ್ಟೆ ಹಸ್ತಾಂತರ

Suddi Udaya

ಅರಸಿನಮಕ್ಕಿಯಲ್ಲಿ ನಾಟಿ ಕೋಳಿ ಮೊಟ್ಟೆ ಸಾಕಾಣಿಕೆ ತರಬೇತಿ

Suddi Udaya

ನಾಳೆ (ಮೇ 7): ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಮಂಗಲೋತ್ಸವ ಹಾಗೂ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ವೇಣೂರು ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜ:ತಾಲ್ಲೂಕಿನಾದ್ಯಾಂತ ಸಂಘಟನಾತ್ಮಕ ಪ್ರವಾಸ – 65ಕ್ಕೂ ಅಧಿಕಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಕಾಯ೯ಕತ೯ರ ಸಭೆ

Suddi Udaya
error: Content is protected !!