24.2 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಣ್ಣೀರುಪಂತ  ಸುಗಮ ಸಂಜೀವಿನಿ  ಒಕ್ಕೂಟದ  ವಾರ್ಷಿಕ ಮಹಾಸಭೆ 

ತಣ್ಣೀರುಪಂತ : ಸುಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ತಣ್ಣೀರುಪಂತ ಇದರ 2025-26 ಸಾಲಿನ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಮಮತ  ಅಧ್ಯಕ್ಷತೆಯಲ್ಲಿ ನಡೆಸಲಾಯಿತು. 

  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಯ್ಯ ಹಾಗೂ ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶುಭ ಹಾರೈಸಿದರು

 ಸೌಮ್ಯಶ್ರೀ 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ, ಸದಸ್ಯರೊಂದಿಗೆ ಚರ್ಚಿಸಿ,ಸರ್ವ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು. ಪೌಷ್ಟಿಕ ಆಹಾರ ಮತ್ತು ಲಿಂಗತ್ವ ದೌರ್ಜನ್ಯದ ಬಗ್ಗೆ ತಾಲೂಕು ಆರೋಗ್ಯ ಅಧಿಕಾರಿ ಅಮ್ಮಿ ಇವರು ಮಾಹಿತಿ ನೀಡಿದರು. ತಾಲೂಕು ಕೃಷಿಯೇತರ ಮ್ಯಾನೇಜರ್ ನಿತೇಶ್ ಇವರು ಸ್ವಚ್ಛ ಸಂಕಿರ್ಣ ಘಟಕದ ಸಮಸ್ಯೆಯ ಬಗ್ಗೆ ಮತ್ತು ಸ್ವ ಉದ್ಯೋಗ, ಜೀವನೋಪಾಯದ ಬಗ್ಗೆ ಸಭೆಯಲ್ಲಿ ತಿಳಿಸಿದರು. ವಲಯ ಮೇಲ್ವಿಚಾರಕರದ ಸ್ವಸ್ತಿಕ್ ಜೈನ್ ಸಂಜೀವಿನಿ ಧ್ಯೇಯೋದ್ದೇಶಗಳನ್ನು ತಿಳಿಸಿಕೊಡುವುದರ ಜೊತೆಗೆ ನೂತನ ಅಧ್ಯಕ್ಷರೂ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನಂತರ ಅಧಿಕಾರ ಹಸ್ತಾಂತರಿಸಿ ಪದಗ್ರಹಣ ಮಾಡಲಾಯಿತು. 

ಹೂಗುಚ್ಛವನ್ನು ಮಾಡಿ ತಂದವರಿಗೆ ಬಹುಮಾನವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪಶುಸಖಿ ಶಿಲ್ಪಾ ಸ್ವಾಗತಿಸಿದರು. ಕೃಷಿ ಸಖಿ ಶೋಭಾ ಕಾರ್ಯಕ್ರಮವನ್ನು ನಿರೂಪಿಸಿದರು.    ಸಂಧ್ಯಾಪ್ರಭಾ ಧನ್ಯವಾದವಿತ್ತರು. 

Related posts

ವಿಶ್ವವಿದ್ಯಾಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪ್ರಶಸ್ತಿ ಪ್ರದಾನ – ಸಮಾರೋಪ ಸಮಾರಂಭ

Suddi Udaya

ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ತೋಟತ್ತಾಡಿಯ ವ್ಯಕ್ತಿಯ ಶವ ಉಜಿರೆ ರಸ್ತೆ ಬದಿಯಲ್ಲಿ ಪತ್ತೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಕರಾಯ ಮೂರ್ತೇದಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದಿ. ಸಂಜೀವ ಕರ್ಕೇರ ರವರ ಧರ್ಮಪತ್ನಿ ಬುಲೆಕ್ಕಿಲ ಪ್ರೇಮ ಎಸ್. ಕರ್ಕೇರ ಹೃದಯಾಘಾತದಿಂದ ನಿಧನ

Suddi Udaya

ಶಿಬಾಜೆ ಗ್ರಾ.ಪಂ. ನಲ್ಲಿ ರೋಜ್ ಗಾರ್ ದಿನಾಚರಣೆ

Suddi Udaya

ಶಿಶಿಲ ಹೇವಾಜೆ ನಿವಾಸಿ ತನಿಯಪ್ಪ ಮುಗೇರ ನಿಧನ

Suddi Udaya
error: Content is protected !!