24.2 C
ಪುತ್ತೂರು, ಬೆಳ್ತಂಗಡಿ
October 6, 2026
ಪ್ರಮುಖ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ‘ವಿದ್ಯಾರ್ಥಿ ಪ್ರಬೋದ’ ವಿಶೇಷ ವಿಚಾರ-ಸಂವಾದ ಕಾರ್ಯಕ್ರಮ ಯಶಸ್ವಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ) ಸಂಸ್ಕೃತ ವಿಭಾಗ ಹಾಗೂ ಶೃಂಗೇರಿಯ “ಅಹಂ ಬ್ರಹ್ಮಾಸ್ಮಿ ಫೌಂಡೇಶನ್” ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ “ವಿದ್ಯಾರ್ಥಿ ಪ್ರಬೋದ” ವಿಶೇಷ ವಿಚಾರ-ಸಂವಾದ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ದೀಪ ಬೆಳಗಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಅವರು ಮಾತನಾಡುತ್ತಾ, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ವ್ಯಕ್ತಿತ್ವದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಮತ್ತು ತಮ್ಮನ್ನು ತಾವು ಹೆಚ್ಚು ಅರಿಯಲು ಅತ್ಯಂತ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗುರು ವಂದನೆ ಹಾಗೂ ‘ಅಹಂ ಬ್ರಹ್ಮಾಸ್ಮಿ’ ಪರಿಚಯದ ಬಳಿಕ ಪ್ರಮುಖ ಶೈಕ್ಷಣಿಕ ಗೋಷ್ಠಿಗಳು ಜರುಗಿದವು. ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿಶ್ವನಾಥ ಸುಂಕಸಾಳ ಅವರು ಎರಡು ಪ್ರತ್ಯೇಕ ಗೋಷ್ಠಿಗಳನ್ನು ನಡೆಸಿಕೊಟ್ಟರು. ಮೊದಲ ಗೋಷ್ಠಿಯಲ್ಲಿ “ಮನಸ್ಸು” ಎಂದರೇನು, ಅದರ ಸ್ವರೂಪ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರೆ, ಎರಡನೇ ಗೋಷ್ಠಿಯಲ್ಲಿ “ನಾನು ಅಂದರೆ ಯಾರು?” (Who actually I’m) ಎಂಬ ತತ್ವಜ್ಞಾನದ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿಶೇಷ ಸಂವಾದ ನಡೆಸಿದರು.

ಅಂತಿಮ ವರ್ಷ ಬಿಎಸ್ಸಿ ವಿದ್ಯಾರ್ಥಿ ಚಿನ್ಮಯ್ ಹಾಗೂ ಅಂತಿಮ ವರ್ಷ ಬಿಎ ವಿದ್ಯಾರ್ಥಿ ಪವನ್ ಸಿ ಇವರಿಬ್ಬರಿಗೆ ಸಂಸ್ಕೃತ ವಿಭಾಗದಿಂದ ಸಂಸ್ಕೃತ ಸೇವಕ್ ಎಂಬ ಪ್ರಶಸ್ತಿಯನ್ನು ನೀಡಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಧನಶ್ರೀ, ಅಂಜನಾ ಮತ್ತು ಸ್ಮೂತಿ ಮಂಗಳಾಚರಣೆ ನೆರವೇರಿಸಿದರು. ಕಾರ್ಯಕ್ರಮಕ್ಕೆ ಅಲಕಾ ಮತ್ತು ಸಿರೀಷಾ ಕೀರ್ತನಾ ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀಧರ ಭಟ್ಟ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಎಲ್ಲರನ್ನು ಸ್ವಾಗತಿಸಿದರು. ಶ್ರೇಯಸ್ ಪಾಳಂದೆ ಧನ್ಯವಾದ ಅರ್ಪಿಸಿದರು. ಶ್ರೇಯಾ ಮಿಂಚಿನಡ್ಕ ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಈ ವಿಚಾರ-ಸಂವಾದವು ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಆತ್ಮಾವಲೋಕನದ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.

Related posts

ಉಜಿರೆ: ಸಾನಿಧ್ಯ ಕೌಶಲ್ಯ ತರಬೇತಿ ಕೆಂದ್ರದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಅ.29: ಉಜಿರೆಯಿಂದ ಧರ್ಮಸ್ಥಳಕ್ಕೆ ಧರ್ಮಸಂರಕ್ಷಣ ಪಾದಯಾತ್ರೆ:  ವಾಹನಗಳಿಗೆ ರಸ್ತೆ ಬದಲಾವಣೆ

Suddi Udaya

ಉಜಿರೆ: ನೆನಪಿನ ಅಂಗಳ ಕಾರ್ಯಕ್ರಮದಲ್ಲಿ ಮನೋರಮ ಭಟ್ ರವರಿಗೆ ಸನ್ಮಾನ

Suddi Udaya

ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಲಾಯಿಲ ಚಂದ್ರಿಕಾ ರಿಗೆ ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya

ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya

ಕುತ್ಲೂರು ಗುರುನಾರಾಯಣ ಸೇವಾ ಸಂಘ ದ ಅಧ್ಯಕ್ಷರಾಗಿ ಕೇಶವ ಪೂಜಾರಿ ಆಯ್ಕೆ

Suddi Udaya
error: Content is protected !!