30.9 C
ಪುತ್ತೂರು, ಬೆಳ್ತಂಗಡಿ
October 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜಿನಲ್ಲಿ ಗುರುನಮನ ಕಾರ್ಯಕ್ರಮ- ಶೈಕ್ಷಣಿಕ ಸಾಧಕರಿಗೆ ‘ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿ’ ಪ್ರದಾನ

ಗುರುವಾಯನಕೆರೆ: ನಾನು ಎಕ್ಸೆಲ್ ಏಕೆ ವಿಭಿನ್ನ ಎಂದು ಹಲವು ಬಾರಿ ಚಿಂತಿಸುತ್ತಿದ್ದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಇಲ್ಲಿ ನಡೆಯುತ್ತಿರುವ ಈ ಗುರು ನಮನ ಕಾರ್ಯಕ್ರಮವನ್ನು ನೋಡಿದಾಗ ನನಗೆ ನಿಜವಾಗಿಯೂ ಸಂತಸವಾಗಿದೆ ಮತ್ತು ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶಿಕ್ಷಕರನ್ನು ಸನ್ಮಾನಿಸುವುದು ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಗುರುಭಕ್ತಿಯನ್ನು ಮೂಡಿಸುವುದು ಒಂದು ವಿನೂತನ ಕಾರ್ಯಕ್ರಮವೇ ಸರಿ. ಇದರ ಜೊತೆಗೆ ಶೈಕ್ಷಣಿಕ ಸಾಧಕರನ್ನು ಗುರುತಿಸಿ ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿಯನ್ನು ನೀಡಿದ್ದು ಅತ್ಯಂತ ವಿನೂತನವೆನಿಸಿದೆ ಎಂದು ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ರೇವರೆಂಡ್ ಫಾದರ್ ವಿಜಯ್ ಲೋಬೋ, ಪ್ರಾಂಶುಪಾಲರು ಅನುಗ್ರಹ ಶಿಕ್ಷಣ ಸಂಸ್ಥೆ ಉಜಿರೆ ಇವರು ಸಂತಸ ವ್ಯಕ್ತಪಡಿಸಿದರು.

ಅವರು ಅ. 4ರಂದು ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಗುರು ನಮನ ಕಾರ್ಯಕ್ರಮದ ಭಾಗವಾಗಿ ಶೈಕ್ಷಣಿಕ ಸಾಧಕರನ್ನು ಗುರುತಿಸಿ ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸರ್ಕಾರಿ ಅಥವಾ ಸರ್ಕಾರೇತರ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಸೇವೆಯನ್ನು ಸಲ್ಲಿಸುತ್ತಿರುವ ಸಾಧಕರನ್ನು ಗೌರವಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ ಎಂದರು.

ರೆವರೆಂಡ್ ಫಾದರ್ ವಿಜಯ್ ಲೋಬೋ, ಅನುಗ್ರಹ ಶಿಕ್ಷಣ ಸಂಸ್ಥೆ ಉಜಿರೆ,ಶರತ್ ಕೆ ಎಂ ಎಕ್ಸೆಲ್ ಸಮೂಹ ಸಂಸ್ಥೆಗಳು ನಾಪೋಕ್ಲು ಮಡಿಕೇರಿ,ಇಬ್ರಾಹಿಂ ಪ್ರಾಂಶುಪಾಲರು ಸರ್ಕಾರಿ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ, ಚೈತ್ರ ಎಸ್ ಪೈ, ಪೈ ಅಕಾಡೆಮಿ ಬೆಳ್ತಂಗಡಿ ಮತ್ತು ಶ್ರೀಮತಿ ಕವಿತಾ ಎಂ. ಬಿ. ಪ್ರಾಂಶುಪಾಲರು ಶಾಂತಿನಿಕೇತನ ಪ್ರೌಢಶಾಲೆ ಶುಂಠಿಕೊಪ್ಪ.ಇವರನ್ನು ಗೌರವಿಸಿ ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಶಸ್ತಿಯನ್ನು ಸ್ವೀಕರಿಸಿದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದ ಇಬ್ರಾಹಿಂ ಇವರು ಮಾತನಾಡಿ ನಾನು ರಾಜ್ಯಮಟ್ಟದ ಪ್ರಶಸ್ತಿಯನ್ನ ಪಡೆದದಕ್ಕಿಂತಲೂ ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿಯನ್ನು ಪಡೆದಿರುವುದು ಅತ್ಯಂತ ಸಂತಸವೆನಿಸಿದೆ. ನೂರಾರು ಶಿಕ್ಷಕರ ಎದುರಲ್ಲಿ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ನಿಜವಾಗಿಯೂ ಅದೃಷ್ಟವೇ ಸರಿ. ಇಂತಹ ವಿನೂತನ ಯೋಜನೆಯು ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಇವರಿಗೆ ಮಾತ್ರ ಬರಲು ಸಾಧ್ಯಎಂದು ಹೇಳುವ ಮೂಲಕ ಸುಮಂತ್ ಕುಮಾರ್ ಜೈನ್ ಅವರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಶಂಸೆ ಮಾಡಿದರು.

ಬೆಳ್ತಂಗಡಿ ನಗರದಲ್ಲಿ ಪೈ ಅಕಾಡೆಮಿಯನ್ನು ಸ್ಥಾಪಿಸಿ ಅದರ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ನನ್ನನ್ನು ಗುರುತಿಸಿ ಇಂತಹ ದೊಡ್ಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಇವರ ದೊಡ್ಡ ಗುಣ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾರ್ಯಕ್ರಮದ ಮತ್ತೊಂದು ವಿಶೇಷತೆ ಎಂದರೆ ಎಕ್ಸೆಲ್ ವಿದ್ಯಾಸಂಸ್ಥೆಯ ಪ್ರಾಚಾರ್ಯರು ,ಉಪ ಪ್ರಾಚಾರ್ಯರು , ಸಂಯೋಜಕರು ಆಡಳಿತಾಧಿಕಾರಿಗಳನ್ನೂ ಒಳಗೊಂಡಂತೆ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು ,ಟೆಕ್ನೋ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ, ವೇಣೂರು ಎಕ್ಸೆಲ್ ಶಾಲೆಯ ಬೋಧಕ ಬೋಧಕೇತರ ಸಿಬ್ಬಂದಿ ಇವರೆಲ್ಲರಿಗೂ ಹಾರ ಫಲಕ ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು.ಅಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕೇತರ ಸಿಬ್ಬಂದಿ, ನಿಲಯ ಪಾಲಕರು, ಅಡುಗೆ ಸಿಬ್ಬಂದಿ, ಚಾಲಕ ಸಿಬ್ಬಂದಿ, ಕಚೇರಿ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಶಿಸ್ತು ಸಮಿತಿಯ ಸಿಬ್ಬಂದಿ ಹೀಗೆ ವಿವಿಧ ವಿಭಾಗಗಳ ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ವೇದಿಕೆಯ ಮೇಲೆ ಸನ್ಮಾನಿಸಿದ್ದು ಈ ಕಾರ್ಯಕ್ರಮದ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಮಂತ್ ಕುಮಾರ್ ಜೈನ್ ಇವರು ಮಾತನಾಡಿ ಎಕ್ಸೆಲ್ ಸಂಸ್ಥೆಯು ಗುರುಗಳಿಗೆ ಗೌರವ ನೀಡುವುದರಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ತಂದೆ ತಾಯಿಗಳನ್ನು ಬಿಟ್ಟರೆ ಪ್ರತ್ಯಕ್ಷ ದೈವವೇ ಈ ಶಿಕ್ಷಕ. ದೇವರಿಗೆ ಸಮಾನವಾದ ಶಿಕ್ಷಕರನ್ನು ಸನ್ಮಾನಿಸಿದ್ದು ನನಗೆ ಅತೀವ ಸಂತಸ ತಂದಿದೆ. ಇದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣಗಳಲ್ಲಿ ಒಂದು. ಎಕ್ಸೆಲ್ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದಲ್ಲಿ ಹೆಸರು ಪಡೆಯಲು ಪ್ರತಿ ಶಿಕ್ಷಕರ ಬೋಧಕೇತರ ಸಿಬ್ಬಂದಿಯವರ ಕರ್ತವ್ಯ ನಿರ್ವಹಣೆ ಅತ್ಯಂತ ಅವಶ್ಯಕವಾದಾಗಿದೆ. ಎಂದು ಹೇಳುವ ಮೂಲಕ ಧನ್ಯತಾ ಭಾವವನ್ನು ವ್ಯಕ್ತಪಡಿಸಿದರು.

ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಉಪನ್ಯಾಸಕರು ಬೋಧಕೇತರ , ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಎಕ್ಸೆಲ್ ಕಾಲೇಜಿನ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಜ್ವಲ್ ಕಜೆ ಸ್ವಾಗತಿಸಿದರು. ಉಪನ್ಯಾಸಕರಾದ ಪ್ರಸನ್ನ, ಪ್ರಜ್ವೀತ್ ರೈ, ಅನನ್ಯ ಜೈನ್, ಚಂದ್ರಪ್ಪ, ಇವರು ನಿರೂಪಿಸಿದರು. ಎಕ್ಸೆಲ್ ಟೆಕ್ನೋ ಶಾಲೆಯ ಪ್ರಾಚಾರ್ಯರಾದ ಸುಮಿತ್ರ ವಂದಿಸಿದರು.

Related posts

ಪುಂಜಾಲಕಟ್ಟೆಯಲ್ಲಿ ಲಾರಿ ಪಲ್ಟಿ: ಓರ್ವ ಸಾವು

Suddi Udaya

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ, ಅಧಿಕಾರದ ಗದ್ದುಗೆಗೇರಿದ ಬಿಜೆಪಿ: ನೂತನ ಅಧ್ಯಕ್ಷ ಜೋಯೇಲ್ ಮೆಂಡೋನ್ಸಾ,ಉಪಾಧ್ಯಕ್ಷ ಕಾಂತಪ್ಪ ಗೌಡ ಹಾಗೂ ನಿರ್ದೇಶಕರನ್ನು ಅಭಿನಂದಿಸಿದ ಬಿಜೆಪಿ ಕಾರ್ಯಕರ್ತರು

Suddi Udaya

ಕಾಯರ್ತಡ್ಕ ಖ್ಯಾತ ವೈದ್ಯ ಮಲಬಾರ್ ಕ್ಲಿನಿಕ್ ನ ಡಾ. ಟಿ.ವಿ ಜೋಸೆಫ್ ನಿಧನ

Suddi Udaya

ಕುವೆಟ್ಟು, ಓಡಿಲ್ನಾಳ ಗ್ರಾಮದ ಕಾಂಗ್ರೆಸ್ ಬೂತ್ ಸಮಿತಿಯ ಸಭೆ

Suddi Udaya

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ

Suddi Udaya
error: Content is protected !!