23.8 C
ಪುತ್ತೂರು, ಬೆಳ್ತಂಗಡಿ
October 5, 2026
ನಿಧನ

ಚಿನ್ನದ ಉದ್ಯಮಿ ಸರಾಫ ಮುಳಿಯ ಶ್ಯಾಮ ಭಟ್ ನಿಧನ

ಬೆಳ್ತಂಗಡಿ: ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಶೋರೂಮ್ ಹೊಂದಿ ರಾಜ್ಯದ್ಯಾ0ತ ಹೆಸರುವಾಸಿಯಾದ ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಮಾಲೀಕರಾದ ಸರಾಫ ಮುಳಿಯ ಶ್ಯಾಮ ಭಟ್ (81 ವರ್ಷ) ಅವರು ಅಕ್ಟೋಬರ್ 4ರಂದು ನಿಧನ ಹೊಂದಿದರು.
ಪುತ್ತೂರಿನ ಪಾಂಗಳಾಯಿಯಲ್ಲಿರುವ ಶ್ಯಾಮಲೋಚನಾ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು. ಚಿನ್ನಾಭರಣ, ಬೆಳ್ಳಿ ಮತ್ತು ವಜ್ರ ವ್ಯವಹಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮುಳಿಯ ಶ್ಯಾಮ ಭಟ್ ಅವರು ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಾಮಾಜಿಕ, ಸಾಹಿತ್ಯ ಕ್ಷೇತ್ರ ಮಾತ್ರವಲ್ಲದೇ ಧಾರ್ಮಿಕ ಕ್ಷೇತ್ರಗಳಿಗೆ ದಾನ ನೀಡುತ್ತಿದ್ದ ಅವರು ಕೊಡುಗೈ ದಾನಿ ಎಂದೇ ಪ್ರಸಿದ್ಧರಾಗಿದ್ದರು. ಮೃತರು ಪುತ್ರರಾದ ಕೇಶವಪ್ರಸಾದ ಮುಳಿಯ, ಕೃಷ್ಣನಾರಾಯಣ ಮುಳಿಯ, ಪುತ್ರಿ ವಿದ್ಯಾ ಸರಸ್ವತಿ, ಅಳಿಯ ಡಾ.ಶ್ಯಾಮಸುಂದರ್, ಸೊಸೆಯಂದಿರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣನಾರಾಯಣ ಮುಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

6ರಂದು ಅಂತಿಮ ದರ್ಶನ:
ಅಕ್ಟೋಬರ್ 6ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಪುತ್ತೂರಿನ ಪಾಂಗಳಾಯಿ ಮನೆಯಲ್ಲಿ ಅಂತಿಮ ದರ್ಶನ ಮತ್ತು ಗೌರವ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related posts

ಬಳಂಜ: ಮುಡಾಯಿಬೆಟ್ಟು ನಿವಾಸಿ ಲಲಿತ ನಿಧನ

Suddi Udaya

ಪದ್ಮುಂಜ: ನೀಲಯ ನಲ್ಕೆ ನಿಧನ

Suddi Udaya

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಉರುವಾಲು ನಿವಾಸಿ ಸೀತಾ ರವರು ಚಿಕಿತ್ಸೆ ಫಲಕಾರಿಯಾಗದೆ ನಿಧನ

Suddi Udaya

ಉಜಿರೆ: ಯೋಗೀಶ್ ಪೂಜಾರಿ ನಿಧನ

Suddi Udaya

ತೆಂಕಕಾರಂದೂರು ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ ನಿಧನ

Suddi Udaya

ಎಪಿಎಂಸಿ ನಿವೃತ್ತ ಕಾರ್ಯದರ್ಶಿ ವೆಂಕಪ್ಪ ಗೌಡ ಕೈಯಾಡಿ ನಿಧನ

Suddi Udaya
error: Content is protected !!