ಬೆಳ್ತಂಗಡಿ: ಕೇಂದ್ರದಿಂದ ನೀಡಲ್ಪಡುವ ಮಿಲಿನಿಯರ್ ಫಾರ್ಮರ್ ಆಫ್ ಇಂಡಿಯಾ (ಎಂಎಫ್ಓಐ) ಪ್ರಶಸ್ತಿಗೆ ಬೆಳ್ತಂಗಡಿ ಕೊಕ್ಕಡ ಗ್ರಾಮದ ಕಲಾಯಿ ಮನೆಯ ಪ್ರಗತಿ ಪರ ಕೃಷಿಕ ಗಣೇಶ್ ಗೌಡ ಕೊಕ್ಕಡ ಆಯ್ಕೆಗೊಂಡಿದ್ದಾರೆ.
ಕೃಷಿ ಜಾಗರಣ್ ಆಯೋಜಿಸಿರುವ ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ಐಸಿಎಆರ್ ಸಹ ಪ್ರಾಯೋಜಕತ್ವ ಇದ್ದು ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ನಾವೀನ್ಯತೆಗೆ ಸಲ್ಲುವ ಗೌರವ ಇದಾಗಿದೆ. ಗಣೇಶ್ ಗೌಡ ಕೊಕ್ಕಡ ಅಡಿಕೆ ಬೆಳೆಗಾರರ ಯಶಸ್ವಿ ಕೃಷಿಕ ಎನ್ನುವ ನಿಟ್ಟಿನಲ್ಲಿ ಅವರ ಹೆಸರು ಶಿಫಾರಸುಗೊಂಡಿದೆ.













