30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅ.10: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ: ವಿವಿಧ ಆಟೋಟ ಸ್ಪರ್ಧೆಗಳು ಮತ್ತು 20 ಬಗೆಯ ವಿವಿಧ ತಿಂಡಿ ತಿನಸುಗಳು

ಬೆಳ್ತಂಗಡಿ: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಉಜಿರೆ ವರ್ತಕರ ಕುಟುಂಬ ಮಿಲನ 2026 ಕಾರ್ಯಕ್ರಮ ವಿವಿಧ ಆಟೋಟ ಸ್ಪರ್ಧೆಗಳು ಮತ್ತು 20 ಬಗೆಯ ವಿವಿಧ ತಿಂಡಿ ತಿನಸುಗಳು ಅ.10ರಂದು ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದೆ ಎಂದು ವರ್ತಕ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್ ತಿಳಿಸಿದ್ದಾರೆ.

ಬೆಳಿಗ್ಗೆ ಗಂಟೆ 9 ರಿಂದ ಉದ್ಘಾಟನಾ ಸಮಾರಂಭ , ಉಜಿರೆ ವರ್ತಕರ ಸಂಘದ ಗೌರವಾಧ್ಯಕ್ಷ ಶರತ್‌ ಕೃಷ್ಣ ಪಡ್ಡೆಟ್ನಾಯ ರವರಿಂದ ದೀಪ ಪ್ರಜ್ವಲನೆ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.

ಉಜಿರೆಯ ಪ್ರತಿಭಾನ್ವಿತ ನೃತ್ಯ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ವಿವಿಧ ಆಟೋಟ ಸ್ಪರ್ಧೆಗಳು : ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಲಿಂಬೆ ಚಮಚ ಓಟ, ಹಗ್ಗ ಜಗ್ಗಾಟ, ಗೋಣಿ ಚೀಲ ಓಟ, ಸಂಗೀತ ಕುರ್ಚಿ, ಚಕ್ಕುಲಿ ತಿನ್ನುವ ಸ್ಪರ್ಧೆ, ಮೈದ ಕಾರ್ಡ್, ಆನೆಗೆ ಬಾಲ ಬಿಡಿಸುವುದು, ಬಲೂನ್ ಒಡೆಯುವುದು ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿದೆ.
ಲಕ್ಕಿ ಡ್ರಾ: ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಲಕ್ಕಿ ಕೂಪನ್ ನೀಡಲಾಗುವುದು. ಬಹುಮಾನ: ಬೋಟ್ ವಾಚ್
ಎಲ್ಲಾ ವರ್ತಕ ಸದಸ್ಯರಿಗೆ ವಿಶೇಷ ಉಡುಗೊರೆ ನೀಡಲಾಗುವುದು. ಸೆಲ್ಫಿ ಮತ್ತು ರೀಲ್ಸ್ ಸ್ಪರ್ಧೆಗಳು ನಡೆಯಲಿದೆ.

Related posts

ಜೂ.13: ಗುರುವಾಯನಕೆರೆ 11ಕೆವಿ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ವಿ. ಶ್ರೀನಿವಾಸ್ ನಿಯೋಜನೆ

Suddi Udaya

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಮರೋಡಿ ಪಲಾರಗೋಳಿ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವ: ಸಾರ್ವಜನಿಕ ಶ್ರೀ ಶನಿಪೂಜೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ

Suddi Udaya
error: Content is protected !!