23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೇಸಿ ಹೇಮಾವತಿ. ಕೆ ರವರಿಗೆ ಪ್ರೇರಣಾ ಪ್ರಶಸ್ತಿ

ಬೆಳ್ತಂಗಡಿ: ಇತ್ತೀಚೆಗೆ ಮಂಗಳೂರಿನ ಜೆಪ್ಪು, ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಜೆಸಿಐ ವಲಯ 15ರ ತರಬೇತಿ ಸಮ್ಮೇಳನದಲ್ಲಿ ಜೇಸಿ ಹೇಮಾವತಿ. ಕೆ ಇವರಿಗೆ ಪ್ರೇರಣಾ ಪ್ರಶಸ್ತಿಯನ್ನು ವಲಯಾಧ್ಯಕ್ಷ ಜೆಎಫ್ಎಸ್ ಸಂತೋಷ್ ಶೆಟ್ಟಿ ನೀಡಿ ಗೌರವಿಸಿದರು.

ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ಉಜಿರೆ ಸಿಟಿಯ ಮಹಿಳಾ ಜೇಸಿ ಸಂಯೋಜಕಿ ವಲಯ ತರಬೇತುದಾರರಾದ ಹೇಮಾವತಿ ಕೆ ಇವರಿಗೆ ತರಬೇತಿ ವಿಭಾಗದಲ್ಲಿ ನೀಡಿದ ವಿವಿಧ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮಗಳು, ಶಾಲಾ ಕಾಲೇಜುಗಳಿಗೆ ನಡೆಸಿದ ಯುವ ಸಬಲೀಕರಣ ತರಬೇತಿಗಳು ಹಾಗೂ ತರಬೇತಿ ವಿಭಾಗದಲ್ಲಿ ಘಟಕಕ್ಕೆ ನೀಡಿದ ಕೊಡುಗೆ ಇತ್ಯಾದಿಗಳನ್ನು ಗುರುತಿಸಿ , ವಲಯದ ತರಬೇತುದಾರರಿಗೆ ನೀಡುವ ಪ್ರತಿಷ್ಠಿತ ಪ್ರೇರಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ನಿಕಟ ಪೂರ್ವಾಧ್ಯಕ್ಷೆ ವಲಯದ ತರಬೇತಿ ವಿಭಾಗದ ಸಂಯೋಜಕಿ ಆಶಾಲತಾ ಪ್ರಶಾಂತ್, ಘಟಕ ಅಧ್ಯಕ್ಷ ಮಹಮ್ಮದ್ ಮಿರ್ಷಾದ್, ಜೇಸಿಐ ಬೆಳ್ತಂಗಡಿ ಘಟಕ ಅಧ್ಯಕ್ಷ ಜಿತೇಶ್, ಸದಸ್ಯರಾದ ತಲ್ಹತ್ ಉಪಸ್ಥಿತರಿದ್ದರು.

Related posts

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಮಾಜಿ‌ ಸಚಿವ ಯು.ಟಿ ಖಾದರ್ ಕಾಜೂರು ದರ್ಗಾಶರೀಫ್ ಗೆ ಭೇಟಿ

Suddi Udaya

ಕುಕ್ಕಾವು ಕೊಪ್ಪಂದಗುಂಡಿಯಲ್ಲಿ ರಸ್ತೆಗೆ ಬಿದ್ದ ಮರ: ದ್ವಿಚಕ್ರ ಸವಾರರಿಗೆ ಗಾಯ

Suddi Udaya

ಸತ್ಯ ಶೋಧಕ ವೇದಿಕೆ ಮಹಾಸಭೆ: ನೂತನ ಕಚೇರಿ ಉದ್ಘಾಟನೆ

Suddi Udaya

ಭಜನಾ ಕಮ್ಮಟ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮ ; ಸಾಮರಸ್ಯದ  ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ

Suddi Udaya

ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ದ ಯುವ ಕಾಂಗ್ರೇಸ್ ನಿಂದ ಸಂಸತ್ ಘೇರಾವ್ ಪ್ರತಿಭಟನೆ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಭಾಗಿ

Suddi Udaya
error: Content is protected !!