32.7 C
ಪುತ್ತೂರು, ಬೆಳ್ತಂಗಡಿ
October 6, 2026
Uncategorized

ಸೋಮಯ್ಯ ಮೂಲ್ಯ ಹನೈನಡೆಯವರಿಗೆ‘ಕುಲಾಲ ಭೀಷ್ಮ’ ಗೌರವ ಪ್ರಶಸ್ತಿ ಪ್ರದಾನ


ಬೆಳ್ತಂಗಡಿ: ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಅ.೪ರಂದು ನಡೆದ ‘ಮರಿಯಲದ ನೆಂಪು’ ಕಾರ್ಯಕ್ರಮದಲ್ಲಿ ಸೋಮಯ್ಯ ಮೂಲ್ಯ ಹನೈನಡೆ ಇವರು ಮಾಡುತ್ತಿರುವ ಸಾಮಾಜಿಕ, ಧಾರ್ಮಿಕ ಹಾಗೂ ಸಮುದಾಯದ ಸೇವೆಯನ್ನು ಗುರುತಿಸಿ ಅವರಿಗೆ “ಕುಲಾಲ ಭೀಷ್ಮ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಕುಲಾಲ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಇವರ ಅಧ್ಯಕ್ಷತೆಯಲ್ಲಿ, ಹಿರಿಯ ಸದಸ್ಯ ಶೀನ ಮೂಲ್ಯ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಸೋಮಯ್ಯ ಮೂಲ್ಯ ಹನೈನಡೆ ಮತ್ತು ಪತ್ನಿ ಶಾಂಭವಿ ಇವರನ್ನು ಶಾಲು ಹೊದಿಸಿ, ಪೇಟ ತೋಡಿಸಿ, ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಗರ್ಡಾಡಿ ಗ್ರಾಮದ ಹನೈನಡೆ ನಿವಾಸಿ ಪ್ರಗತಿಪರ ಕೃಷಿಕರಾದ ಸೋಮಯ್ಯ ಮೂಲ್ಯ ಅವರು ಕುಂಡದಬೆಟ್ಟು ಮತ್ತು ಕನ್ನಡಿಕಟ್ಟೆಯಲ್ಲಿ ಪ್ರಾಥಮಿಕ ಶಿಕ್ಷಣ, ವೇಣೂರಿನಲ್ಲಿ ಪ್ರೌಢ ಶಿಕ್ಷಣ, ಉಜಿರೆ ಎಸ್‌ಡಿಎಂನಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲಿ ಅಂದಿನ ವಯಸ್ಕರ ಶಿಕ್ಷಣದ ಸ್ವಯಂ ಸೇವಕರಾಗಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಸೇವೆ ಮಾಡಿದ್ದಾರೆ, ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು ಕಬಡ್ಡಿ ಕ್ರೀಡಾಪಟುವಾಗಿ ಮಿಂಚಿದವರು.
ವಿಜಯಬ್ಯಾಂಕ್‌ನ ಅಧಿಕಾರಿಯಾಗಿ ತಮ್ಮ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಗ್ರಾಹಕ ಸ್ನೇಹಿ ಅಧಿಕಾರಿಯಾಗಿ ಜನಮನ್ನಣೆಗೆ ಪಾತ್ರರಾಗಿದ್ದರು.
ವಿಜಯ ಬ್ಯಾಂಕ್ ಇಂಟಕ್ ಟ್ರೇಡ್ ಯೂನಿಯನ್ ಬೆಂಗಳೂರಿನ ಉಪಾಧ್ಯಕ್ಷರಾಗಿ, ಕಾರ್ಯದರ್ಶಿ, ಖಜಾಂಚಿಯಾಗಿ ಸೇವೆಸಲ್ಲಿಸಿದ್ದಾರೆ. ಕಲ್ಯಾಣ ಯುವಕ ಸಂಘ ಕುಂಡದಬೆಟ್ಟು ಇದರ ಕಾರ್ಯದರ್ಶಿಯಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸಂಘಟಿಸಿದ ಹಿರಿಮೆ ಇವರದು. ಬೆಂಗಳೂರು ಕುಲಾಲ ಯುವಕ ಸಂಘ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಬೆಳ್ತಂಗಡಿ ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾಗಿ ನಿವೇಶನ ಖರೀದಿಸಲು ದೊಡ್ಡ ಮೊತ್ತದ ಆರ್ಥಿಕ ಸಹಾಯ ನೀಡಿದ್ದಾರೆ. ಅದೆಷ್ಟೋ ಫಲಾನುಭವಿಗಳಿಗೆ ಶಿಕ್ಷಣ ಉದ್ಯೋಗ ಕೈಗಾರಿಕೆಗಳಿಗೆ ಆದ್ಯತೆ ನೆಲೆಯಲ್ಲಿ ಸಾಲ ಮಂಜೂರು, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಧನಸಹಾಯ, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಕಾರ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತವನ್ನು ಮಾಡಿದ್ದಾರೆ. ಪ್ರಸ್ತುತ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪತ್ನಿ ಶ್ರೀಮತಿ ಶಾಂಭವಿ ಹಾಗೂ ಪುತ್ರಿಯರಾದ ಅನುರಾಧ, ಶ್ವೇತಾ, ಸ್ಮಿತಾ ಮತ್ತು ಡಾ. ಅಕ್ಷತಾ ತುಂಬ ಸಂಸಾರವನ್ನು ಹೊಂದಿದ್ದಾರೆ.

Related posts

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಆತ್ಮಹತ್ಯೆ ಪ್ರಕರಣ: ಆರೋಪಿ ಪ್ರೋಫೆಸರ್ ಬಂಧನ; ಮೃತದೇಹ ದೆಹಲಿಗೆ ಆಗಮನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಸವ೯ಧಮ೯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ಅರಸಿನಮಕ್ಕಿ ಸೇವಾ ಟ್ರಸ್ಟ್ ವತಿಯಿಂದ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಶಾಸಕ ಹರೀಶ್ ಪೂಂಜ ಗಡಾ೯ಡಿ ಶಾಲೆಯ ಮತದಾನ ಕೇಂದ್ರದಲ್ಲಿ ಮತದಾನ

Suddi Udaya

ಸಂತ ಅಂತೋನಿ ಪದವಿ ಕಾಲೇಜು ಹಾಗೂ ಪದವಿಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಾ ಸಂಭ್ರಮ

Suddi Udaya

ಮೇ 15: ಅಳದಂಗಡಿ ಶ್ರೀ ಸತ್ಯದೇವತಾ ಕಲ್ಲುರ್ಟಿದೈವಸ್ಥಾನದಲ್ಲಿ ಸಂಕ್ರಮಣ ಪೂಜೆ : ಉಚಿತ ಬರೆಯುವ ಪುಸ್ತಕ ವಿತರಣೆಯ ಅರ್ಜಿ ಫಾರ್ಮ್‌ಗಳ ವಿತರಣೆ

Suddi Udaya
error: Content is protected !!