ಕಕ್ಯಪದವು; ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ).ನಿಂದ ನಡೆಸಲ್ಪಡುವ ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕಾ ಕಾರ್ಯಗಳ ಅರಿವು ಮತ್ತು ಆಂತರಿಕ ಕೆಲಸದ ವಾತಾವರಣ ಪರಿಚಯಿಸುವ ನಿಟ್ಟಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಬಿ.ಕಾಂ.ಪದವಿ ವಿದ್ಯಾರ್ಥಿಗಳಿಗೆ ವಾಣಿಜ್ಯ ಅಧ್ಯಯನ ಪ್ರವಾಸವನ್ನು ಏರ್ಪಡಿಸಿ ಕೆ.ಐ.ಒ.ಸಿ.ಎಲ್ ಪಣಂಬೂರು ಮಂಗಳೂರು ಇಲ್ಲಿನ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಭೇಟಿ ನೀಡಲಾಯಿತು.
ಸಂಸ್ಥೆಯ ವಿವಿಧ ಭಾಗಗಳನ್ನು ಸಂದರ್ಶಿಸಿ ಕೆಲಸದ ಬಗ್ಗೆ ನೈಜ ಚಿತ್ರಣ ಪಡೆದು ಭದ್ರತಾ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ಶ್ರೀಯುತ ರಘುನಂದನ್ ಅವರಿಂದ ಸಂಪೂರ್ಣ ಉಪಯುಕ್ತ ಮಾಹಿತಿಯನ್ನು ಪಡೆಯಲಾಯಿತು.
ಅದಿರುಗಳ ಉತ್ಪಾದನಾ ಪ್ರಕ್ರಿಯೆ, ವೆಚ್ಚ, ಆದಾಯ ಹಾಗೂ ವಿವಿಧ ಯಂತ್ರೋಪಕರಣಗಳು, ಉತ್ಪಾದನೆಯನ್ನು ಮಾಡುವ ವಿಧಾನ ಮೊದಲಾದವುಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಲಾಯಿತು.
ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಅವರು ಕೈಗಾರಿಕಾ ಭೇಟಿಯೊಂದಿಗೆ ಜೊತೆಗಿದ್ದು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿದರು.
ವಿದ್ಯಾಸಂಸ್ಥೆಯ ಸಂಯೋಜಕ ಯಶವಂತ್.ಜಿ.ನಾಯಕ್ ಕೈಗಾರಿಕಾ ಭೇಟಿಯನ್ನು ಆಯೋಜಿಸಿ ಸಂಪೂರ್ಣ ಮೇಲುಸ್ತುವಾರಿಯನ್ನು ವಹಿಸಿ ಯಶಸ್ವಿಗೊಳಿಸಿದರು .
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ದೀಕ್ಷಿತಾ , ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಕು. ರೂಪಾಕ್ಷಿ, ಮನೋಜ್ ಹಾಗೂ ದೈಹಿಕ ನಿರ್ದೇಶಕರಾದ ಪೃಥ್ವಿರಾಜ್ ಹಾಗೂ ವಿಭಾಗದ ಉಪನ್ಯಾಸಕರು ಜೊತೆಗಿದ್ದು ಸಹಕರಿಸಿ ಯಶಸ್ವಿಗೊಳಿಸಿದರು.













