33.9 C
ಪುತ್ತೂರು, ಬೆಳ್ತಂಗಡಿ
October 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೋಶಾಲೆಯಲ್ಲಿ ಯಕ್ಷ ಭಾರತಿಯಿಂದ ತಾಳ ಮದ್ದಳೆ ಮತ್ತು ದೇಣಿಗೆ

ಕನ್ಯಾಡಿ: ಸಂಘ ಶತಾಬ್ದಿ ನಿಮಿತ್ತ ಯಕ್ಷಭಾರತಿ ಕನ್ಯಾಡಿ ತಂಡದಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ “ಗೋರಕ್ಷಕ ಪರಶುಧರ” ನಡೆಯಿತು.

ಭಾಗವತರಾಗಿ ಮಹೇಶ ಕನ್ಯಾಡಿ ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಕಾರ್ತವೀರ್ಯನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ , ಜಮದಗ್ನಿಯಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಭಾರ್ಗವನಾಗಿ ಈಶ್ವರ ಪ್ರಸಾದ್ ನಿಡ್ಲೆ ಪಾತ್ರ ನಿರ್ವಹಿಸಿದರು.

ಸ್ವಾಮಿ ವಿವೇಕಾನಂದ ಟ್ರಸ್ಟ್ ಮೂಲಕ ನಡೆಯುತ್ತಿರುವ ನಂದಗೋಕುಲ ಗೋಶಾಲೆಗೆ ಯಕ್ಷಭಾರತಿಯಿಂದ ರೂ. 10000/- (ಹತ್ತು ಸಾವಿರ ) ದೇಣಿಗೆ ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಹರಿದಾಸ ಗಾಂಭೀರ ಅವರು ವಿವೇಕಾನಂದ ಟ್ರಸ್ಟಿನ ಉಪಾಧ್ಯಕ್ಷ ಸುಬ್ರಮಣ್ಯ ಕುಮಾರ್ ಅಗರ್ತ ಅವರಿಗೆ ನೀಡಿದರು. ಯಕ್ಷಭಾರತಿ ಟ್ರಸ್ಟಿ ಕುಸುಮಾಕರ ಉಪಸ್ಥಿತರಿದ್ದು ಸಹಕರಿಸಿದರು.

Related posts

ಶಾಸಕ ಹರೀಶ್ ಪೂಂಜಾ ರವರ ಇಂದಬೆಟ್ಟು ಜನಸ್ಪಂದನ ಕಾರ್ಯಕ್ರಮದ ಫಲಶೃತಿ: ಇಂದಬೆಟ್ಟು-ಗುರಿಪಳ್ಳ ರಸ್ತೆಯ ಬದಿಯ ಗಿಡಗಂಟಿಗಳ ತೆರವು ಕಾರ್ಯ

Suddi Udaya

ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya

ಶಾಲಿನಿ ಸೇವಾ ಪ್ರತಿಷ್ಠಾನ ವತಿಯಿಂದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆ

Suddi Udaya

ಕೊಯ್ಯೂರು: ಸರಕಾರಿ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಉಜಿರೆ ರಮ್ಯಾ 1ಗ್ರಾಂ ಗೋಲ್ಡ್, ಫ್ಯಾನ್ಸಿ ಮತ್ತು ಫೂಟ್ ವೇ‌ರ್ ನೂತನ ಶೋರೂಮ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ರೈತರು ಆದಷ್ಟು ಬೇಗ ಫ್ರುಟ್ಸ್ ಐಡಿ ನೋಂದಣಿ ಮಾಡಬೇಕು ಹಾಗೂ: 18 ವರ್ಷವಾದವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬೇಕು: ಪೃಥ್ವಿ ಸಾನಿಕಂ ಪತ್ರಿಕಾಗೋಷ್ಠಿ

Suddi Udaya
error: Content is protected !!