33.9 C
ಪುತ್ತೂರು, ಬೆಳ್ತಂಗಡಿ
October 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಪ್ರತಿಷ್ಠಿತ ಎನ್ ಡಿ ಎ ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ಆಯ್ಕೆ

ಗುರುವಾಯನಕೆರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ದೇಶದ ಅತ್ಯಂತ ಪ್ರತಿಷ್ಠಿತ ಸಶಸ್ತ್ರ ಪಡೆಗಳ ತರಬೇತಿ ಸಂಸ್ಥೆಯಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪ್ರವೇಶ ಪರೀಕ್ಷೆ 2026 ರ ಮೊದಲ ಸುತ್ತಿನಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಗಳಾಗುವ ಹೆಮ್ಮೆಯ ಕನಸಿನತ್ತ ದಾಪುಗಾಲು ಇಟ್ಟಿದ್ದಾರೆ.
ಎನ್ ಡಿ ಎ ಗೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿ ತಂದಿರುವ ಸಾಧಕ ವಿದ್ಯಾರ್ಥಿಗಳ ವಿವರ :

ಹರ್ಷಿತಾ ಎನ್, ಅನನ್ಯ ಕೆ. ಪಿ., ಸ್ತುತಿ ಶೀತಲ್ ವಿ., ಹಿತಾರ್ಥ್ ಅಡಮಲೆ, ನಂದೀಶ್ ಟಿ. ಎಸ್., ಮನ್ವಿತ್ ಗೌಡ ಪಿ., ಸುಶಾಂತ್ ಜಿ., ಯಶಸ್ ವಿ., ಎಂ. ಸೋಹನ್ ಶೆಟ್ಟಿ, ಪ್ರಣವ್, ರಾಘವ್ ಎನ್. ಕುಲಾಲ್, ತನಯ್ ಜೋಶಿ

ವಿದ್ಯಾರ್ಥಿಗಳ ಅಪ್ರತಿಮ ಸಾಧನೆಯನ್ನು ಕೊಂಡಾಡಿರುವ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು, “ದೇಶದ ರಕ್ಷಣಾ ವಿಭಾಗಗಳಾದ ಭೂಸೇನೆ ,ನೌಕಾಸೇನೆ ಮತ್ತು ವಾಯುಸೇನೆಯಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಲು ರಾಷ್ಟ್ರ ಮಟ್ಟದಲ್ಲಿ ನಡೆಯುವ ಈ ಕಠಿಣ ಪರೀಕ್ಷೆಯ ಮೊದಲ ಸುತ್ತಿನಲ್ಲಿ ನಮ್ಮ ಕಾಲೇಜಿನ 12 ವಿದ್ಯಾರ್ಥಿಗಳು ಏಕಕಾಲಕ್ಕೆ ತೇರ್ಗಡೆಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಉಪನ್ಯಾಸಕರ ಸೂಕ್ತ ಮಾರ್ಗದರ್ಶನ ಹಾಗೂ ಪೋಷಕರ ಬೆಂಬಲವೇ ಈ ಯಶಸ್ಸಿಗೆ ಕಾರಣ. ದೇಶ ಕಾಯುವ ಪವಿತ್ರ ಕಾರ್ಯಕ್ಕೆ ಪ್ರಥಮ ಹೆಜ್ಜೆ ಇಡುತ್ತಿರುವ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು” ಎಂದು ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್ ಡಿ ಎ ಸಂಯೋಜಕರಾದ ಜೋಸ್ಟಮ್ ಎ ಟಿ, ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related posts

ಜ.6 : ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಕಕ್ಕಿಂಜೆಯಲ್ಲಿ ಬೃಹತ್ ಪ್ರತಿಭಟನೆ

Suddi Udaya

ಗುರುವಾಯನಕೆರೆ ಶ್ರೀಶಾರದಾಂಭ ಭಜನಾ ಮಂಡಳಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ಬೆಳ್ತಂಗಡಿ ಆನ್ ಸಿಲ್ಕ್ ಆಷಾಢ ಬಂಪರ್ ಸೇಲ್ ಕೆಲ ದಿನಗಳವರೆಗೆ ವಿಸ್ತರಣೆ: ಶೇ.50 ಖರೀದಿಗಾಗಿ ಜನರ ಬಾರಿ ಬೆಂಬಲ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ಶುಭಾರಂಭ

Suddi Udaya

ಸುಲ್ಕೇರಿ ಗ್ರಾಮ ಸಭೆಗೆ ಒಂದು ಗಂಟೆ ಲೇಟಾಗಿ ಬಂದ ನೋಡೇಲ್ ಅಧಿಕಾರಿ, ಕಾದು ಕಾದು ಸುಸ್ತಾದ ಗ್ರಾಮಸ್ಥರು, ಅಧಿಕಾರಿ ವಿರುದ್ದ ಅಸಮಾಧಾನ, ನಿಗದಿತ ಸಮಯದಲ್ಲಿ ಸಭೆ ಪ್ರಾರಂಭವಾಗದೆ ವಿಳಂಬ

Suddi Udaya

ಗೇರುಕಟ್ಟೆ: ಮಾನವೀಯತೆ ಮೆರೆದ ಕಳಿಯ ಗ್ರಾ.ಪಂ.ಕಾರ್ಯದರ್ಶಿ ಕುಂಞ ಕೆ., ಕಳಿಯ ಸಿ.ಎಚ್.ಓ. ಮತ್ತು ಸಿಬ್ಬಂದಿ

Suddi Udaya
error: Content is protected !!