24.6 C
ಪುತ್ತೂರು, ಬೆಳ್ತಂಗಡಿ
October 12, 2026
ಅಪಘಾತವರದಿ

ಉಜಿರೆಯಲ್ಲಿ ಮೆಡಿಕಲ್‌ಗೆ ನುಗ್ಗಿದ ಕಾರು: ನಾಲ್ವರು ಪ್ರಾಣಾಪಾಯದಿಂದ ಪಾರು

ಉಜಿರೆ: ಚಾರ್ಮಾಡಿ ರಸ್ತೆಯಲ್ಲಿರುವ ಮೆಡಿಕಲ್‌ವೊಂದಕ್ಕೆ ಕಾರು ನುಗ್ಗಿದ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಮೆಡಿಕಲ್‌ಗೆ ಅಲ್ಪಸ್ವಲ್ಪ ಹಾನಿಯಾಗಿದ್ದು, ಮುಂಭಾಗದಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.

ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿ ಹೊಸದಾಗಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಚಾಲಕ ಕೆಳಗಿಳಿದು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ನಿಲ್ಲಿಸಿದ್ದ ಕಾರು ಏಕಾಏಕಿ ಚಲಿಸಿ, ರಸ್ತೆಯ ಕೆಳಭಾಗದಲ್ಲಿದ್ದ ಮೆಡಿಕಲ್‌ಗೆ ನುಗ್ಗಿದೆ.

ಕಾರು ಮೆಡಿಕಲ್‌ನತ್ತ ಬರುತ್ತಿರುವುದನ್ನು ಗಮನಿಸಿದ ಮುಂಭಾಗದಲ್ಲಿದ್ದ ನಾಲ್ವರು ತಕ್ಷಣವೇ ಪಕ್ಕಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ನೇರವಾಗಿ ಮೆಡಿಕಲ್‌ಗೆ ನುಗ್ಗಿದ್ದರಿಂದ ಅಂಗಡಿಗೆ ಅಲ್ಪಸ್ವಲ್ಪ ಹಾನಿಯಾಗಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಮೆಡಿಕಲ್‌ಗೆ ಉಂಟಾದ ಹಾನಿಯ ವೆಚ್ಚವನ್ನು ಭರಿಸುವುದಾಗಿ ಕಾರು ಚಾಲಕ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Related posts

ಚಾರ್ಮಾಡಿ: ಅರಣ್ಯ ಇಲಾಖೆಯಿಂದಸತ್ತ ಆನೆಯ ದಫನ: ಆನೆಯ ಎರಡು ದಂತ ಸ್ವಾಧೀನ ಪಡಿಸಿಕೊಂಡ ಅಧಿಕಾರಿಗಳು

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya

ಕಳೆಂಜ: ನಂದಗೋಕುಲ ದೀಪೋತ್ಸವ ಕಾರ್ಯಕ್ರಮ ಮುಂದೂಡಿಕೆ

Suddi Udaya

ಕರ್ನೋಡಿ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ “ಗುರುವಂದನಾ ಕಾರ್ಯಕ್ರಮ

Suddi Udaya

ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜು ಶಿಕ್ಷಕ ರಕ್ಷಕ ಸಂಘದ ಸಭೆ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಕಾಮರ್ಸ್ ಕ್ಲಬ್ ನ ವತಿಯಿಂದ ವಾಣಿಜ್ಯ ಫೆಸ್ಟ್

Suddi Udaya
error: Content is protected !!