24.6 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿವರದಿ

ಸೌಜನ್ಯ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ -ಉಜಿರೆಯಿಂದ ಬೆಳ್ತಂಗಡಿ ಕ್ರೀಡಾಂಗಣದವರೆಗೆ ನ್ಯಾಯದ ನಡಿಗೆ: ಬೆಳ್ತಂಗಡಿ ಕ್ರೀಡಾಂಗಣದಲ್ಲಿ ಅಭಿನಂದನಾ ಸಭೆ: ಸೌಜನ್ಯ ಪರ ಹೋರಾಟಗಾರರು ಭಾಗಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕು| ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ, ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ವತಿಯಿಂದ ಮರುತನಿಖೆಯ ಆದೇಶಕ್ಕೆ ಕಾನೂನು ಹೋರಾಟದಲ್ಲಿ ಶ್ರಮಿಸಿದ ಸುಪ್ರೀಂ ಕೋರ್ಟ್ ನ್ಯಾಯವಾದಿಗಳಿಗೆ, ಸುದೀರ್ಘ ಅವಧಿಯಲ್ಲಿ ಹೋರಾಟದಲ್ಲಿ ಭಾಗಿಯಾದ ಎಲ್ಲಾ ನ್ಯಾಯವಾದಿಗಳಿಗೆ ಮತ್ತು ಹೋರಾಟದಲ್ಲಿ ಭಾಗಿಗಳಾದ ಸೌಜನ್ಯ ನ್ಯಾಯಪರ ಹೋರಾಟಗಾರರಿಗೆ ಅಭಿನಂದನಾ ಸಭೆ ಹಾಗೂ “ನ್ಯಾಯದ ನಡಿಗೆ” ಮೌನ ಮೆರವಣಿಗೆಯು ಅ.10ರಂದು ನಡೆಯಿತು.

ಬೆಳಿಗ್ಗೆ ಉಜಿರೆ ಕುಂಜರ್ಪದಿಂದ ಬೆಳ್ತಂಗಡಿವರೆಗೆ ‘ನ್ಯಾಯದ ನಡಿಗೆ’ ಮೌನ ಮೆರವಣಿಗೆ ನಡೆಯಿತು. ಬಳಿಕ ನಡೆದ ಗೌರವ ಅಭಿನಂದನಾ ಸಭೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಳ ತಾಯಿ ಕುಸುಮಾವತಿ ಪಾಂಗಳ, ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಪ್ರಸನ್ನ ರವಿ, ತಮ್ಮಣ್ಣ ಶೆಟ್ಟಿ, ದಿನೇಶ್ ಗಾಣಿಗ, ಜಯಂತ್ ಟಿ, ಅಹೋರಾತ್ರ ಮತ್ತು ಕೃಷ್ಣಪ್ಪ ಗೌಡ ದೇವಸ್ಯ, ಸುರೇಶ್ ಎಯ್ಯಾಡಿ ಮುಂಬೈ, ಹೈಕೋರ್ಟ್ ವಕೀಲರಾದ ಮೋಹಿತ್ ಕುಮಾರ್, ವಿಜಯ್ ವಾಸು ಪೂಜಾರಿ, ನವೀನ್ ಕುಮಾರ್ ಉಪಸ್ಥಿತರಿದ್ದರು.

ಹೋರಾಟಗಾರರು ಮಾತನಾಡಿ, 14 ವರ್ಷಗಳ ಹಿಂದೆ ಕೊಲೆಯಾದ ಸೌಜನ್ಯಳಿಗೆ ನ್ಯಾಯ ದೊರೆಯಬೇಕು, ಕೊಲೆ ನಡೆಸಿದ ಆರೋಪಿಗಳನ್ನು ತನಿಖಾ ತಂಡ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಮುಖೇಶ್ ಶೆಟ್ಟಿ ವಂದೇ ಮಾತರಂ ಹಾಡಿದರು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಸ್ವಾಗತಿಸಿದರು. ಮೌನ ಮೆರವಣಿಗೆ ಹಾಗೂ ಅಭಿನಂದನಾ ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರರು, ನಾಗರಿಕರು ಭಾಗಿಯಾದರು.

Related posts

ಎಸ್.ಡಿ.ಎಂ ಕಾಲೇಜಿನ ಕಲಾ ಕೇಂದ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

Suddi Udaya

ವಿ.ಹಿಂ.ಪ. ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ಸ್ಥಾಪನ ದಿನಾಚರಣೆ

Suddi Udaya

ನಾರಾವಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ರೂ.3ಕೋಟಿ25 ಲಕ್ಷ ಅನುದಾನ ಮಂಜೂರು: ಶಾಸಕ ಹರೀಶ್ ಪೂಂಜ

Suddi Udaya

ಶಿಶಿಲ ಶ್ರೀ ಚಂದ್ರಪುರ ಜಿನ ಮಂದಿರ ದಲ್ಲಿ ಸ್ವರ್ಗಿಯಶ್ರವಣಬೆಳಗೊಳ ಶ್ರೀಗಳಿಗೆ ವಿನಾಯಂಜಲಿ ಅರ್ಪಣೆ

Suddi Udaya

ಕನ್ಯಾಡಿ 2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ “ಪೋಷಕರ – ಶಿಕ್ಷಕರ ಸಭೆ

Suddi Udaya

ಕಳೆಂಜ: ಹೂದೋಟ ನಿರ್ಮಾಣ, ಸ್ವಚ್ಛತಾ ಆಂದೋಲನ

Suddi Udaya
error: Content is protected !!