ನಾವೂರಿನ ಡಾ. ಪ್ರದೀಪ್ ಅವರ ಕ್ಲಿನಿಕ್ ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳ ಕೃತ್ಯಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ತೀವ್ರವಾಗಿ ಖಂಡಿಸುತ್ತದೆ.
ಆರೋಗ್ಯ ಸೇವೆ, ಸಮಾಜಸೇವೆ, ಸಂಸ್ಕಾರ ಜಾಗೃತಿ ಮೂಡಿಸುವ ನಿರಂತರ ಸೇವೆಯೊಂದಿಗೆ ಸಮಾಜದ ಸರ್ವ ಧರ್ಮಿಯರಲ್ಲೂ ಸಮಾನತೆಯನ್ನು ಕಂಡ ಧೀಮಂತ ವೈದ್ಯರಾಗಿ ಸೇವೆ ಸಲ್ಲಿಸುವ ಅವರ ಸೇವೆ ಅಮೋಘವಾದದ್ದು.
ಅವರ ಕ್ಲಿನಿಕ್ ಗೆ ಅಂತಹ ಕೃತ್ಯ ಮಾಡಿದ ಆರೋಪಿಗಳನ್ನು ಸಂಬಂಧಪಟ್ಟ ಇಲಾಖೆಗೂ ಪಾರದರ್ಶಕವಾಗಿ ತನಿಖೆ ನಡೆಸಿ ಬಂಧಿಸಿ ಕಾನೂನಾತ್ಮಕ ಕಠಿಣ ಶಿಕ್ಷೆ ನೀಡಬೇಕು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬೆಳ್ತಂಗಡಿ ವಲಯ ಸರ್ವ ಸದಸ್ಯರು ಒತ್ತಾಯಿಸುತ್ತಾರೆ.












