26.6 C
ಪುತ್ತೂರು, ಬೆಳ್ತಂಗಡಿ
October 11, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿವರದಿ

ಅಳದಂಗಡಿ ಸೊಸೈಟಿಯ ಸುವರ್ಣ ಸಂಭ್ರಮ:ಕೆಸರುಗದ್ದೆಯಲ್ಲಿ ಕ್ರೀಡಾ ಕಲರವ,ತುಳುನಾಡಿನ ಮಣ್ಣಿನ ಸಂಸ್ಕೃತಿ ಅನಾವರಣ: ಕಂಬಳದ ಕೋಣಗಳನ್ನು ಗದ್ದೆಯಲ್ಲಿ ಓಡಿಸುವ ಮೂಲಕ ಕೃಷಿ ಸಂಸ್ಕೃತಿಯ ವೈಭವ,ಜನರ ಸಂಭ್ರಮದ ಪಾಲ್ಗೊಳ್ಳುವಿಕೆ,

ಅಳದಂಗಡಿ: ತುಳುನಾಡಿನ ಕೃಷಿ ಪರಂಪರೆ, ಗ್ರಾಮೀಣ ಬದುಕಿನ ಸೊಗಡು ಹಾಗೂ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಅ. 11ರಂದು ಅಳದಂಗಡಿಯ ನಡಾಯಿ ಗದ್ದೆಯಲ್ಲಿ ಆಯೋಜಿಸಲಾದ ಕೆಸರುಗದ್ದೆ ಕ್ರೀಡಾಕೂಟವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಹಸಿರು ಗದ್ದೆ, ಕೆಸರಿನಾಟ, ಗ್ರಾಮೀಣ ಕ್ರೀಡೆಗಳು ಹಾಗೂ ಜನರ ಉತ್ಸಾಹದ ನಡುವೆ ನಡೆದ ಕ್ರೀಡಾಕೂಟವು ತುಳುನಾಡಿನ ಸಾಂಪ್ರದಾಯಿಕ ಜೀವನಶೈಲಿಯನ್ನು ನೆನಪಿಸುವುದರೊಂದಿಗೆ ಎಲ್ಲ ವಯೋಮಾನದವರಲ್ಲೂ ಸಂಭ್ರಮ ಮೂಡಿಸಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸಾವಿರಾರು ಮಂದಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿಶೇಷವಾಗಿ ಕಂಬಳದ ಕೋಣಗಳನ್ನು ಗದ್ದೆಯಲ್ಲಿ ಓಡಿಸುವ ಮೂಲಕ ಕೃಷಿ ಸಂಸ್ಕೃತಿ ಮತ್ತು ಕಂಬಳ ಪರಂಪರೆಯ ವೈಭವವನ್ನು ಅನಾವರಣಗೊಳಿಸಲಾಯಿತು.

ಪ್ರಸಿದ್ಧ ನಾಟಿವೈದ್ಯರಾದ ಪಿಲ್ಯದ ಪುಣ್ಯತ್ಯಾರು ನಿವಾಸಿ ಬೇಬಿ ಪೂಜಾರಿ ಅವರು ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಅಳದಂಗಡಿ ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ಮಂಡಳಿ ಹಾಗೂ ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಂ ಡಿ., ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧೀರ್ ಸುವರ್ಣ, ಬೆಳ್ತಂಗಡಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ. ಹಾಗೂ ನಡಾಯಿ, ಅಳದಂಗಡಿಯ ಧರ್ಮಸಾಮ್ರಾಜ್ಯ ಜೈನ್ ಉಪಸ್ಥಿತರಿದ್ದರು.

ಚಲನಚಿತ್ರ ನಟರ ಉಪಸ್ಥಿತಿ ವಿಶೇಷ ಆಕರ್ಷಣೆ:ಚಲನಚಿತ್ರ ನಟ, ‘ಸು ಫ್ರಮ್ ಸೋ’ ಖ್ಯಾತಿಯ ಪುಷ್ಪರಾಜ್ ಬೋಳಾರ್ ಹಾಗೂ ನಟ ರವಿ ರಾಮಕುಂಜ ಅವರ ಉಪಸ್ಥಿತಿ ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಿತ್ತು. ಅವರ ಆಗಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿತು.ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯೈಕರಿ ಕು. ಸುಷ್ಮಾ ಪೂಜಾರಿ ರವಾಗಿ ಅವರ ತಂದೆ ಬಾಲಕೃಷ್ಣ ಪೂಜಾರಿ, ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಳಂಜದ ಅಂತರದ ಸದಾನಂದ ಪೂಜಾರಿ ಹಾಗೂ ಅಳದಂಗಡಿಯ ರವಿ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಜನಾರ್ದನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರಾ, ಆಡಳಿತ ಮಂಡಳಿ ಸದಸ್ಯರಾದ ಗುರುಪ್ರಸಾದ್ ಹೆಗ್ಡೆ, ವಿಶ್ವನಾಥ ಹೊಳ್ಳ, ಹೇಮಂತ್, ಕೊರಗಪ್ಪ, ದೇವಿಪ್ರಸಾದ್ ಶೆಟ್ಟಿ, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ಧರ್ಣಪ್ಪ, ಸುಂದರಿ, ಮಮತಾ, ವಲಯ ಮೇಲ್ವಿಚಾರಕ ಸುದರ್ಶನ, ಸಂಘದ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶ್ರೀ ಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ ರೂ.1 ಲಕ್ಷ ದೇಣಿಗೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಗಣಿತ ಪ್ರಯೋಗಾಲಯದ ಮಹತ್ವದ ಕುರಿತು ತರಬೇತಿ ಕಾರ್ಯಾಗಾರ

Suddi Udaya

ಬಂದಾರು: ಮೈರೋಳ್ತಡ್ಕ ಶಿವ ಗೆಳಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ತಲೆಮರೆಸಿಕೊಂಡಿದ್ದ ಜ್ಯೋತಿಷಿಯನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಅಂಡಿಂಜೆ ನಿವಾಸಿ ಪ್ರಶಾಂತ್ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya
error: Content is protected !!