35.5 C
ಪುತ್ತೂರು, ಬೆಳ್ತಂಗಡಿ
October 11, 2026
Uncategorized

ಪೆರ್ಲ ಬೈಪಾಡಿಯಲ್ಲಿ ವಾಣಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು, ಹಳೆಕೋಟೆ, ಬೆಳ್ತಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ (NSS) ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 11ರಿಂದ 17ರವರೆಗೆ ಪೆರ್ಲ ಬೈಪಾಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷರಾದ ಹೆಚ್. ಪದ್ಮಗೌಡ ಅವರು ಶಿಬಿರವನ್ನು ಉದ್ಘಾಟಿಸಿದರು

.

ಮುಖ್ಯ ಅತಿಥಿಗಳಾಗಿ ವಾಣಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಧರ್ಣಪ್ಪ ಗೌಡ ಬಾನಡ್ಕ, ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಹರೀಶ್ ಗೌಡ ಪರಪ್ಪಾಜೆ, ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ. ಹಾಗೂ ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಉಪಸ್ಥಿತರಿದ್ದರು.

ಗೌರವ ಉಪಸ್ಥಿತರಾಗಿ ನ್ಯೂಸ್ 18ರ ಕನ್ನಡಿಗ 2026 ಪ್ರಶಸ್ತಿ ಪುರಸ್ಕೃತ, ಸಮಗ್ರ ಸಾವಯವ ಕೃಷಿಕ ದೇವಿಪ್ರಸಾದ್ ಕಡಮ್ಮಾಜೆ, ಉದ್ಯಮಿ ಜಯಣ್ಣ ಮಿನಂದೇಲು, ಪೆರ್ಲ ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಪೆರ್ಲ ಬೈಪಾಡಿ ಅಧ್ಯಕ್ಷ ಉಮೇಶ್ ಅಂಗಡಿ ಮಜಲು, ಸಿದ್ಧಿವಿನಾಯಕ ದೇವಸ್ಥಾನ ಪೆರ್ಲ ಬೈಪಾಡಿ ಅಧ್ಯಕ್ಷ ರಮೇಶ್ ಗೌಡ, ಗೌ. ಯಾ. ಒ ಸಂಘ ಬೆಳ್ತಂಗಡಿಯ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಎಸ್‌ಕೆಡಿಆರ್‌ಡಿಪಿಯ ವಲಯ ಮೇಲ್ವಿಚಾರಕ ಪ್ರೇಮ್ ಪ್ರಸಾದ್, ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ಕಾಡಂಡ ಹಾಗೂ ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಗೌಡ, ಬಾಲಕೃಷ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ. ಪ್ರಸ್ತಾವನೆಯೊಂದಿಗೆ
ಸ್ವಾಗತಿಸಿದರು.

ಎನ್‌.ಎಸ್‌.ಎಸ್ ಶಿಬಿರಾಧಿಕಾರಿ ದಿನೇಶ್ ಯು. ವಂದನಾರ್ಪಣೆ ಮಾಡಿದರು.

ಸಹ ಶಿಬಿರಾಧಿಕಾರಿ ಶ್ರಾವ್ಯ ಎಸ್. ಕಾರ್ಯಕ್ರಮ ನಿರೂಪಿಸಿದರು.

Related posts

ಅಂಡಿಂಜೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ನಿತಿನ್, ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧವಾಗಿ ಆಯ್ಕೆ

Suddi Udaya

ಅರಸಿನಮಕ್ಕಿ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಡಿ.17: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ, ಬಿರುಸಿನ ಪೈಪೋಟಿ: ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್, 12 ಸ್ಥಾನಕ್ಕೆ 24 ನಾಮಪತ್ರ ಸಲ್ಲಿಕೆ

Suddi Udaya

ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯ ನೇತೃತ್ವದಲ್ಲಿ ಮುಖ್ಯ ಮಂತ್ರಿ ಪದಕ ವಿಜೇತ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ರವರಿಗೆ ಸನ್ಮಾನ

Suddi Udaya

ಮುಂಡಾಜೆ ಗ್ರಾ.ಪಂ. ಹಾಗೂ ನೇತ್ರಾವತಿ ಸಂಜೀವಿನಿ ಒಕ್ಕೂಟದ ವತಿಯಂದ ಮಹಿಳಾ ಗ್ರಾಮ ಸಭೆ ಮತ್ತು ವಿಚಾರ ಸಂಕಿರಣ

Suddi Udaya
error: Content is protected !!