September 6, 2026
Uncategorized

ಬೆಳ್ತಂಗಡಿ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ಯೋಜನೆಯಿಂದ ನೆರವು

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ ರೂ. ೨.೫೦ ಲಕ್ಷ ಅನುದಾನವನ್ನು ಮಂಜೂರುಗೊಳಿಸಿದ್ದಾರೆ.

ಇದರಲ್ಲಿ ರು.೧,೫೧,೬೩೦ ಮೊತ್ತ ಸಿಲಿಕಾನ್ ಛೇಂಬರ್‌ಗೆ ಹಾಗೂ ರೂ.೯೮,೩೭೦ ರುದ್ರಭೂಮಿ ನಿರ್ಮಾಣಕ್ಕೆ ಧನ ಸಹಾಯವಾಗಿದ್ದು, ಧರ್ಮಸ್ಥಳದಿಂದ ಮಂಜೂರಾದ ಅನುದಾನದ ಚೆಕ್ಕನ್ನು ಜೂ.೨ರಂದು ನಡೆದ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಅವರ ಮೂಲಕ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡರಿಗೆ ಯೋಜನಾಧಿಕಾರಿ ಯೋಧರ ಅವರು ಹಸ್ತಾಂತರಿಸಲಾಯಿತು.

ಈ ಸಂದರ್ಭ ಲಾಯಿಲ ವಲಯ ಮೇಲ್ವಿಚಾರಕ ಸುಶಾಂತ್, ಕೇಂದ್ರ ಒಕ್ಕೂಟ ಅಧ್ಯಕ್ಷ ಸೀತಾರಾಮ್ ಆರ್., ಒಕ್ಕೂಟ ಪದಾಧಿಕಾರಿಗಳಾದ ದಯಾನಂದ್ ಕೋಟ್ಯಾನ್, ಯಶೋಧಾ, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ರಾಜೇಶ್ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ ನವಶಕ್ತಿ ಮನೆಗೆ ವಿಧಾನಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಬೇಟಿ

Suddi Udaya

ಬಳಂಜ: ರಾಜ್ಯ ಮಡಿವಾಳರ ಸಂಘದ ವತಿಯಿಂದ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಕುತ್ಲುರು ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೇಟಿ:ವಿದ್ಯಾರ್ಥಿಗಳೊಂದಿಗೆ ಸಂವಾದ

Suddi Udaya

ಬೆಳ್ತಂಗಡಿ: ತಾಲೂಕು ಪಂಚಾಯತ್‌ ನಲ್ಲಿ ಆಧಾರ್‌ ನೊಂದಣಿ ಮತ್ತು ತಿದ್ದುಪಡಿ ಶಿಬಿರ

Suddi Udaya

ಜ.17-18: ಬಂದಾರು ಕೊಂಕನೊಟ್ಟು ತರವಾಡು ಮನೆಯಲ್ಲಿ ಸಾನಿಧ್ಯ ದೈವಗಳ ನೇಮೋತ್ಸವ

Suddi Udaya

ದ.ಕ. ಜಿಲ್ಲೆಯ ಎಲ್ಲಾ ಶಾಲಾ ಆವರಣದಲ್ಲಿ ಧಾರ್ಮಿಕ ಆಚರಣೆಗೆ ಬ್ರೇಕ್: ರಾಜ್ಯ ಸರ್ಕಾರ ಹಿಂದೂ ವಿರೋಧಿ ನಿಲುವನ್ನು ಮತ್ತೆ ವ್ಯಕ್ತ ಪಡಿಸಿದೆ: ಹರೀಶ್ ಪೂಂಜ

Suddi Udaya
error: Content is protected !!