34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ್ವಾಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಶ್ರೀ ರುದ್ರಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಡ್ವಾಲ್ ಇಲ್ಲಿ ನ.2ರಿಂದ 4ರವರೆಗೆ ನಡೆಯುವ ಶತರುದ್ರಾಭಿಷೇಕ, ಶ್ರೀ ರುದ್ರಯಾಗ, ಭಗವದ್ಗೀತಾ ಪಠಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಶ್ರೀ ಪಾಂಡುರಂಗ ಮರಾಟೆ ಹಡಿಲು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ ಗುರಿಪಳ್ಳ, ಸದಸ್ಯರಾದ ಯಶೋದರ ಗೌಡ ಕೊಡ್ಡೋಲು, ಹಿರಿಯರಾದ ಸಂಜೀವ ಕರ್ಕೇರ, ಅರ್ಚಕರಾದ ಮಾಧವ ಎಚ್, ಬೇಬಿ ಸಾಲಿಯಾನ್, ಜಗದೀಶ, ಆನಂದ ಎಸ್ ಡಿ, ಪ್ರಶಾಂತ್ ಹಾಗೂ ಭಗವದ್ ಭಕ್ತರು ಉಪಸ್ಥಿತರಿದ್ದರು.

ದೇವಸ್ಥಾನದಲ್ಲಿ ನಡೆಯುವ ಪರಿಹಾರ ಕಾರ್ಯಕ್ರಮಗಳ ಸಂದರ್ಭದಲ್ಲಿ ಮೂರು ದಿನ ನಿರಂತರ ಭಜನಾ ಕಾರ್ಯಕ್ರಮ, ನ. 3ರಂದು ಸಂಜೆ 7:30 ರಿಂದ ಶ್ರದ್ಧಾ ಎನ್ ಭಟ್ ಪೈವಳಿಕೆ ಕಾಸರಗೋಡು ಇವರಿಂದ ಭಕ್ತ ಮಾರ್ಕಂಡೇಯ ಎಂಬ ಹರಿಕಥ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 4ರಂದು ಬೆಳಿಗ್ಗೆ ಶತರುದ್ರಾಭಿಷೇಕ, ಶ್ರೀ ರುದ್ರಯಾಗ ಹಾಗೂ ಐಕ್ಯಮತ್ಯ ಹೋಮ ನಡೆದು ಮಾಣಿಲ ಶ್ರೀಧಾಮ ಮಹಾಲಕ್ಷ್ಮಿ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿ ನಡೆಯಲಿದೆ.

Related posts

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು: ಅದೃಷ್ಟಾವಶತ್ ಪಾರಾದ ಚಾಲಕ

Suddi Udaya

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಮಾಲಾಡಿ ಗ್ರಾ.ಪಂ.ಗೆ ಭೇಟಿ

Suddi Udaya

ಅಮೇರಿಕಾದ ಪ್ರತಿಷ್ಠಿತ ಹಾರ್ವರ್ಡ್ ಯೂನಿವರ್ಸಿಟಿ ಯ ಸ್ಟ್ರಾಟೆಜಿಕ್ ಲೀಡರ್ ಶಿಪ್ ಪ್ರೋಗ್ರಾಮ್ ಗೆ ಸುಳ್ಯದ ಪ್ರದೀಪ್ ಜೈನ್ ಬಲ್ನಾಡು ಪೇಟೆ ಆಯ್ಕೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವ: ಹೊರಕಾಣಿಕೆ ಹಾಗೂ ಭಜನೋತ್ಸವ

Suddi Udaya

ಅರಸಿನಮಕ್ಕಿ: ಹೊಸ್ತೋಟ ಶಾಲೆಗೆ ಕ್ರೀಡಾ ಉಪಕರಣಗಳ ಹಸ್ತಾಂತರ

Suddi Udaya

ನಡ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!