September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಕಲ್ಮಂಜ ಸ. ಪ್ರೌ. ಶಾಲೆಗೆ ಶೌಚಾಲಯ ನಿರ್ಮಿಸಿ ಹಸ್ತಾಂತರ

ಕಲ್ಮಂಜ: ಸರಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಕ್ಯಾನ್ ಫಿನ್ ಹೋಮ್ಸ್ ಬೆಂಗಳೂರು ನ ಸಿಎಸ್ಆರ್ ಅನುದಾನದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಮೂಲಕ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಸುಂದರ ಸುಸಜ್ಜಿತ ಶೌಚಾಲಯ ನಿರ್ಮಿಸಿ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಿತು.

ಕ್ಯಾನ್ ಫಿನ್ ಹೋಮ್ಸ್ ನ ಡಿಜಿಎಂ ಪ್ರಶಾಂತ ಜೋಯಿಶ್ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತ ಕ್ಯಾನ್ಫಿನ್ ಹೋಮ್ಸ್ ನ ಸಾಧನೆಗಳನ್ನು ಶೌಚಾಲಯದ ಉತ್ತಮ ನಿರ್ವಹಣೆಯಾದಲ್ಲಿ ಹಾಗೂ ಅಗತ್ಯವಿರುವ ಬಾಲಕರ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬಹುದೆಂಬ ಭರವಸೆ ನೀಡಿದರು.

ಅತಿಥಿಯಾಗಿ ಡಾ| ಜಯ ಕುಮಾರ್ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಬೆಂಗಳೂರಿನ ಇಂದಿರಾ ನಗರದ ರೋಟರಿ ಕ್ಲಬ್ ನ ಶ್ರೀಮತಿ ಸುಪ್ರಿಯ ಕಂದಾರಿ ಹಾಗೂ ಕ್ಯಾಂಪಿಂಗ್ ಹೋಮ್ಸ್ ನ ಡೆಪ್ಯುಟಿ ಮ್ಯಾನೇಜರ್ ಚಿತ್ರಾಂಗದ ಸಾರಾಂಗಿ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿದರು.

ಶಾಲಾ ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ದಿವಾಕರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ ಫಿನ್ ಹೋಮ್ಸ್‌ನ ಪ್ರಶಾಂತ ಜೋಯಿಶ್ ಹಾಗೂ ಶೌಚಾಲಯ ಕಾಮಗಾರಿ ನಿರ್ವಹಿಸಿ ಕೈ ತೊಳೆಯುವ ಬೇಸಿನ್ ರಚಿಸಿ ಕೊಟ್ಟ ವಿದ್ಯಾ ಕುಮಾರ್ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ರೋಟರಿಯ ವಿದ್ಯಾರ್ಥಿವೇತನ ಸಮಿತಿಯ ಅಬೂಬಕರ್, ರೋಟರಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಪೂರಣ್ ವರ್ಮ, ಸಂದೇಶ, ಅನಂತ ಭಟ್ ಮಚ್ಚಿಮಲೆ, ವೆಂಕಟೇಶ್ ಭಟ್, ಹಾಲಿ ಅಧ್ಯಕ್ಷ ಪ್ರಕಾಶ್ ಪ್ರಭು ಹಾಗೂ ಕಾರ್ಯದರ್ಶಿಗಳಾದ ಡಾ| ಎಂ ಎಂ ದಯಾಕರ್ ಉಪಸ್ಥಿತರಿದ್ದರು. ಸರಕಾರಿ ಪ್ರೌಢಶಾಲೆ ಕಲ್ಮಂಜದ ಎಸ್ ಡಿ ಎಂ ಸಿ ನಿಕಟಪೂರ್ವ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿ , ಶ್ರೀಮತಿ ಸಾವಿತ್ರಿ ವಂದಿಸಿದರು. ಶ್ರೀಮತಿ ಸವಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು. ಎಸ್ ಡಿ ಎಂ ಸಿ ಸದಸ್ಯರು ಪೋಷಕ ಬಂಧುಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಮಾಯಾ ಒಕ್ಕೂಟದ ಮೈಕ್ರೋ ಬಚತ್ ಪಾಲಿಸಿಯಿಂದ ಮಂಜೂರಾದ ರೂ.2 ಲಕ್ಷ ಸಹಾಯಧನ ಹಸ್ತಾಂತರ

Suddi Udaya

ಯು.ಜಿ. ಸಿಇಟಿ ಪರೀಕ್ಷೆ: ರಾಜ್ಯಕ್ಕೆ 7ನೇ ಸ್ಥಾನ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ.

Suddi Udaya

ಧರ್ಮಸ್ಥಳ ಪ್ರಕರಣ ಎಸ್.ಐ.ಟಿ ತನಿಖೆ ಪೂರ್ಣಗೊಂಡಿಲ್ಲ: ಪ್ರಣವ್ ಮೊಹಂತಿ

Suddi Udaya

ಕಳೆಂಜ: ಬಿಜೆಪಿ ಪ್ರಮುಖರು ಕಾಂಗ್ರೆಸ್ ಸೇರ್ಪಡೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ವಿಚಾರಣೆಗೆ ಬರಲು ಪೊಲೀಸರು ನೋಟಿಸು ನೀಡಿಲ್ಲ: ಶಾಸಕರಿಗೆ ಗೃಹ ಬಂಧನದಂತೆ ಪೊಲೀಸರು ಮಾಡಿದ್ದಾರೆ

Suddi Udaya

ಪತ್ನಿ – ಮಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪಿ ಬಂಧನ

Suddi Udaya
error: Content is protected !!