32.8 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಗರ ಸ್ವಚ್ಛತೆ ಕಾರ್ಯಕ್ರಮ

ಕೊಯ್ಯೂರು : ಸರಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು ಮತ್ತು ಕೊಯ್ಯೂರು ಗ್ರಾಮಪಂಚಾಯತ್ ಸಹಯೋಗದಲ್ಲಿ ನಗರ ಸ್ವಚ್ಛತೆ ಕಾರ್ಯಕ್ರಮ ನಿರ್ವಹಿಸಲಾಯಿತು.

ಕೊಯ್ಯೂರು ಕಾಲೇಜು ಪಕ್ಕದಿಂದ ಆದೂರುಪೆರಾಲ್ ಪೇಟೆಯ ತನಕ ”ಸ್ವಚ್ಛತಾ ಹೀ ಸೇವಾ ” ಕಾರ್ಯಕ್ರಮದ ಅಂಗವಾಗಿ ಬೀದಿ ಸ್ವಚ್ಛತೆ ಗೈಯ್ಯಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು, ಮಾಜಿ ಸದಸ್ಯರಾದ ಶ್ರೀ ಯಶವಂತ ಗೌಡ, ಶ್ರೀಮತಿ ದಿವ್ಯ, ಕಾಲೇಜು ಉಪನ್ಯಾಸಕ ಲಕ್ಷ್ಮಣ ಗೌಡ, ಶ್ರೀಮತಿ ಭವ್ಯ, ಸಂತೋಷ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಈ ಸಂದರ್ಭದಲ್ಲಿ ಕೊಯ್ಯೂರಿನ ಘನ ತ್ಯಾಜ್ಯ ತ್ಯಾಜ್ಯಘಟಕಕ್ಕೆ ಭೇಟಿ ನೀಡಲಾಯಿತು. ತ್ಯಾಜ್ಯ ನಿರ್ವಹಣೆ ಮತ್ತು ಪಂಚಾಯತ್ ಕಾರ್ಯವೈಖರಿ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಪರಮೇಶ್ವರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಮೋಹನ ಗೌಡ ಧನ್ಯವಾದ ಸಲ್ಲಿಸಿದರು.

Related posts

ಆ.12: ಬೆಳ್ತಂಗಡಿಯಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣೆ

Suddi Udaya

ಪ್ಯಾಲೆಸ್ತೀನ್ ದೇಶದ ಜನತೆಗೆ ಬೆಂಬಲ ಸೂಚಿಸಿ ಎಸ್‌ಡಿಪಿಐ ವತಿಯಿಂದ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚರ್ಚಾ ಸ್ಪರ್ಧೆ

Suddi Udaya

ಆ.29ರಂದು ಮಹೇಶ್ ಶೆಟ್ಟಿ ತಿಮರೋಡಿ ದಂಪತಿ ಖುದ್ದು ಹಾಜರಾಗುವಂತೆ ಹೈ ಕೋರ್ಟ್ ಆದೇಶ

Suddi Udaya

ಧರ್ಮಸ್ಥಳ: ರಸ್ತೆಯ ಬದಿ ನಿಲ್ಲಿಸಿದ್ದ ಬೈಕ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮೊಗ್ರು :ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ

Suddi Udaya
error: Content is protected !!