34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಿನಿ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನಿಶಾಗೆ ಚಿನ್ನದ ಪದಕ

ಉಜಿರೆ: ದಕ್ಷಿಣ ಕನ್ನಡ ಅಥ್ಲೆಟಿಕ್ ಸಂಸ್ಥೆಯ ವತಿಯಿಂದ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ಮಿನಿ ಒಲಿಂಪಿಕ್ಸ್‌ ಟ್ರ್ಯಾಕ್ ಅಂಡ್ ಫೀಲ್ಡ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ, ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ, ಉಜಿರೆ (ರಾಜ್ಯ ಪಠ್ಯಕ್ರಮ)ದ ವಿದ್ಯಾರ್ಥಿನಿ ಅನಿಶಾ ಅವರು ಗುಂಡು ಎಸೆತ (ಶಾಟ್‌ಪುಟ್) ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅನಿಶಾ ಅವರ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾಲಕ್ಷ್ಮಿ ನಾಯಕ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ, ಮುಂದಿನ ಸ್ಪರ್ಧೆಗಳಲ್ಲಿಯೂ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

Related posts

ಕುಂಟಿನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕೊಯ್ಯೂರು: ಮಲೆಬೆಟ್ಟು ಬದಿನಡೆ ಶ್ರೀ ವನದುರ್ಗ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಗೇರುಕಟ್ಟೆ :ಪರಪ್ಪು ಜಮಾಅತ್ ನಿಂದ ಅಭಿನಂದನಾ ಸಭೆ: ದರ್ಗಾ ಸುತ್ತಮುತ್ತ ಶಾಶ್ವತ ಕಾಮಗಾರಿ ನಡೆಸಿದ ಮುಸ್ಲಿಮ್ ಯೂತ್ ವಿಂಗ್ ಸಮಿತಿಗೆ ಗೌರವಾರ್ಪಣೆ

Suddi Udaya

ಉಜಿರೆ: ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಯುವ ದಿನಾಚರಣೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ : ಕಾರ್ಗಿಲ್ ನೆನಪು ಉಪನ್ಯಾಸ ಕಾರ್ಯಕ್ರಮ

Suddi Udaya

ಅಳದಂಗಡಿ ಗ್ರಾ.ಪಂ. ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!