32.8 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಂದಬೆಟ್ಟು ಸಹನಾಶ್ರೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖಾ ಕಚೇರಿ ಶುಭಾರಂಭ

ಇಂದಬೆಟ್ಟು: ಉಜಿರೆಯ ಪ್ರತಿಷ್ಠಿತ ಸಹನಶ್ರೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ನೂತನ ಶಾಖಾ ಕಚೇರಿಯು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ಶುಭ ಹಾರೈಕೆಗಳೊಂದಿಗೆ ಲೋಕಾರ್ಪಣೆಗೊಂಡಿತು.

ನೂತನ ಕಚೇರಿಯ ಆಶೀರ್ವಚನ ಕಾರ್ಯಕ್ರಮವು ಸರ್ವಧರ್ಮೀಯರ ಸೌಹಾರ್ದತೆಯ ಪ್ರತೀಕವಾಗಿ ವಿವಿಧ ಚರ್ಚ್‌ಗಳ ಧರ್ಮಗುರುಗಳ ದಿವ್ಯ ಉಪಸ್ಥಿತಿ ಮತ್ತು ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಬಂಗಾಡಿ ಬೆದ್ರಬೆಟ್ಟುವಿನ ಮರಿಯಾಂಬಿಕಾ ಚರ್ಚ್‌ನ ವಂದನೀಯ ಫಾ. ಮಾತ್ಯು (CMF), ನೆಲ್ಯಾಡಿ ಸೆಂಟ್ ಅಲ್ಫೋನ್ಸಾ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು, ತೋಟ್ಟತ್ತಾಡಿ ಚರ್ಚ್‌ನ ವಂದನೀಯ ಫಾ. ಸೆಬಾಸ್ಟಿಯನ್ ಹಾಗೂ ಇಂದಬೆಟ್ಟು ಚರ್ಚ್‌ನ ವಂದನೀಯ ಫಾ. ಮೊಂತೇರೋ ಅವರುಗಳು ಜತೆಯಾಗಿ ಪ್ರಾರ್ಥನೆ ಸಲ್ಲಿಸಿ, ನೂತನ ಶಾಖೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ರಾಜೇಶ್ ಪುದುಶೇರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾ, ಸಂಸ್ಥೆಯ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು, ಸ್ಥಳೀಯರಾದ ಜೋಯ್, ಸಣ್ಣಿ ಮಟ್ಟಮ್ ,ಪಳನಿ ಸ್ವಾಮಿ, ಸತ್ತಾರ್ ಸಾಹೇಬ್, ಹಸನ್, ಪ್ರಶಾಂತ್ ಮತ್ತು ಪ್ರದೀಪ್ ಕುಮಾರ್. ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


ಸ್ಥಳೀಯ ಗ್ರಾಹಕರಿಗೆ ಮತ್ತು ಸಾರ್ವಜನಿಕರಿಗೆ ಇನ್ನಷ್ಟು ಹತ್ತಿರವಾಗಿ ನಂಬಿಕಾರ್ಹ ಹಾಗೂ ಸುಲಭ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇಂದಬೆಟ್ಟುವಿನಲ್ಲಿ ಪ್ರಾರಂಭವಾಗಿರುವ ಈ ನೂತನ ಶಾಖೆಗೆ ಊರಿನ ಗಣ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಡಾ. ಯು.ಸಿ. ಪೌಲೋಸ್ ಅವರಿಗೆ ‘ಕೀರ್ತಿಶೇಷ ಜಿ.ಎನ್. ಭಿಡೆ’ ಪ್ರಶಸ್ತಿ

Suddi Udaya

ತಮಿಳುನಾಡು ಸ್ವಾಮೀಜಿ ಧರ್ಮಸ್ಥಳ ಭೇಟಿ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಜನಾ ಪುಸ್ತಕ ಬಿಡುಗಡೆ

Suddi Udaya

ಬೆಳ್ತಂಗಡಿ : ಮಾನಸಿಕ ಅಸ್ವಸ್ಥನನ್ನು ಸಿಯೋನ್ ಆಶ್ರಮಕ್ಕೆ ಸೇರಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ಮಾ.19: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ರಾಮಾಯಣ ತರಗತಿ ಆರಂಭ

Suddi Udaya

ಧರ್ಮಸ್ಥಳ ಆಕಾಂಕ್ಷ ನಿಗೂಢ ಸಾವು ಪ್ರಕರಣ; ಸರಕಾರ ಕುಟುಂಬದೊಂದಿಗೆ ನಿಂತು ನ್ಯಾಯ ದೊರಕಿಸಿಕೊಡಬೇಕು :ಅಕ್ಬರ್ ಬೆಳ್ತಂಗಡಿ

Suddi Udaya
error: Content is protected !!