September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಡಿರುದ್ಯಾವರದಲ್ಲಿ ಮುಂದುವರಿದ ಒಂಟಿ ಸಲಗನ ಸಂಚಾರ


ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವೆಡೆ ಮೇ 27 ರಂದು ರಾತ್ರಿ ಒಂಟಿ ಸಲಗನ ಸಂಚಾರ ಮುಂದುವರಿದಿದೆ.


ಇಲ್ಲಿನ ಮಿತ್ತಕಟ್ಟಾಜೆ ಮೋಹನ ನಾಯ್ಕ ಎಂಬವರ ಮನೆಯಂಗಳಕ್ಕೆ ಬಂದು ಬಾಳೆ ಗಿಡ ತಿಂದು ಹಾಕಿದ ಬಳಿಕ ಸಲಗ ಫಣಿಕಲ್ಲು ಕಡೆ ಮುಂದುವರೆದಿದೆ. ಅಲ್ಲಿ ರಾಘವೇಂದ್ರ ಪಟವರ್ಧನ್ ರವರ ತೋಟಕ್ಕೆ ಕಾಡಾನೆ ಬರುತ್ತಿದ್ದಂತೆ ಮನೆಯವರಿಗೆ ತಿಳಿದು ಬಂದ ಕಾರಣ ಸ್ಥಳೀಯರು ಸೇರಿ ಆನೆಯನ್ನು ಓಡಿಸಿ, ಬೆಳಗಿನವರೆಗೆ ಗಸ್ತು ತಿರುಗಿದ ಕಾರಣ ಯಾವುದೇ ಕೃಷಿಹಾನಿ ಸಂಭವಿಸಿಲ್ಲ. ಸಲಗ ಇಲ್ಲಿಗೆ ಸಮೀಪದ ಅರಣ್ಯದಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.


ಮೇ 26 ರಂದು ರಾತ್ರಿ ಕಾಡಾನೆ ಇದೇ ಗ್ರಾಮದ ಬಸವದಡ್ಡು ಪರಿಸರದ ತೋಟಗಳಲ್ಲಿ ಕೃಷಿಹಾನಿ ಉಂಟು ಮಾಡಿತ್ತು. ಬಸವದಡ್ಡು, ಮಿತ್ತಕಟ್ಟಾಜೆ, ಫಣಿಕಲ್ಲು, ಮುಂಡಾಜೆ, ದುಂಬೆಟ್ಟು ಪರಿಸರ ಹತ್ತಿರ ಹತ್ತಿರವಿದ್ದು ಕಾಡಾನೆ ಉಪಟಳ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

Related posts

ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಭವಿಷ್ಯಕ್ಕೆ ಪೂರಕ ಬಜೆಟ್ ; ಯುವ ಕಾಂಗ್ರೇಸ್ ರಾಜ್ಯ ಸಮಿತಿ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್

Suddi Udaya

ಶಿಶಿಲ: ಬರ್ಗುಳದಲ್ಲಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಧರಾಶಾಹಿ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಮಚ್ಚಿನ ಕಾರ್ಯಕ್ಷೇತ್ರದಲ್ಲಿ ಬಡಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಾಗ್ರಿ ವಿತರಣೆ

Suddi Udaya

ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯಸ್ಸು ಕಡ್ಡಾಯ ಶಿಕ್ಷಣ ಇಲಾಖೆ ಆದೇಶ

Suddi Udaya

ಸಾಂಸ್ಕೃತಿಕ ಸ್ಪರ್ಧೆ: ಎ ಎ ಅಕಾಡೆಮಿ ಸಹಯೋಗದ ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಗೇರುಕಟ್ಟೆ: ಕಾರು -ಬೈಕ್ ಅಪಘಾತ: ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

Suddi Udaya
error: Content is protected !!