34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಕ್ಸೆಲ್ ನ ಸುಮಂತ್ ಕುಮಾರ್ ಜೈನ್ ಅವರಿಗೆ ನೇಷನ್ ಬಿಲ್ಡರ್ ಅವಾರ್ಡ್

ಗುರುವಾಯನಕೆರೆ ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ ಅವರಿಗೆ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ನೇಷನ್ ಬಿಲ್ಡರ್ ಅವಾರ್ಡ್ 26 ಪ್ರದಾನಿಸಲಾಯಿತು.
ಶಿಕ್ಷಣ, ವಿಜ್ಞಾನ, ಧಾರ್ಮಿಕ ,ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಶ್ರೀಯುತರು ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದೆ.

ಗುರುವಾಯನಕೆರೆಯ ವಿದ್ಯಾ ಸಾಗರ ಹಾಗೂ ಅರಮಲೆಬೆಟ್ಟ ಕ್ಯಾಂಪಸ್ ಗಳಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಟೆಕ್ನೋ ಸ್ಕೂಲ್, ವೇಣೂರಿನಲ್ಲಿ ಎಕ್ಸೆಲ್ ಟೆಕ್ನೋ ಸ್ಕೂಲ್ ಸ್ಥಾಪಿಸಿ, ಮುನ್ನಡೆಸುತ್ತಿರುವ ಸುಮಂತ್ ಕುಮಾರ್ ಜೈನ್ ಅವರು ಅತ್ಯಲ್ಪ ಅವಧಿಯಲ್ಲಿ ಎಕ್ಸೆಲ್ ಸಂಸ್ಥೆಗಳನ್ನು ರಾಜ್ಯದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯನ್ನಾಗಿ ರೂಪಿಸಿದ್ದಾರೆ.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್, ಜೆ ಇ ಇ ಅಡ್ವಾನ್ಸ್ ಮತ್ತು ಮೈನ್ಸ್,ಸಿ ಇ ಟಿ, ನಾಟಾ, ಎನ್ ಡಿ ಎ , ಐಸರ್, ಬಿಎಸ್ಸಿ ಅಗ್ರಿ ಮೊದಲಾದ ಕೋಚಿಂಗ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ, ಸಿ ಎ,ಸಿ ಎಸ್, ಕ್ಲಾಟ್ ಕೋಚಿಂಗ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅತ್ಯುತ್ಕೃಷ್ಟ ಮಟ್ಟದಲ್ಲಿ ದೊರಕುತ್ತಿದ್ದು ಪ್ರತಿ ಪರೀಕ್ಷೆಗಳಲ್ಲಿ ಹತ್ತಾರು ರಾಂಕ್ ಗಳು ಎಕ್ಸೆಲ್ ನ ವಿದ್ಯಾರ್ಥಿಗಳ ಪಾಲಾಗುತ್ತಿದೆ. ಶ್ರೇಷ್ಠ ಗುಣ ಮಟ್ಟದ ವಿದ್ಯಾದಾನದ ಜೊತೆಗೆ ಆಸುವಾಸಿನ ದೇವಸ್ಥಾನ,ದೈವಸ್ಥಾನ, ಬಸದಿಗಳ ಅಭಿವೃದ್ಧಿಗೆ ನಿರಂತರ ಬೆಂಬಲ ನೀಡುತ್ತಾ ಬಂದವರು ಸುಮಂತ್ ಕುಮಾರ್ ಜೈನ್ .


ಎಕ್ಸೆಲ್ ಬೆಳಕು ಯೋಜನೆಯಡಿ ಪ್ರತಿ ವರ್ಷ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದ ಹಿರಿಮೆ ಸುಮಂತ್ ಕುಮಾರ್ ಜೈನ್ ಅವರದು.
ಯಕ್ಷಗಾನ, ನಾಟಕ, ಲಲಿತಕಲೆಗಳು, ಸಾಹಿತ್ಯ, ಸಂಗೀತ , ಕ್ರೀಡೆ , ಕಂಬಳ , ಹುಲಿ ವೇಷ ಸೇರಿ ವಿವಿಧ ಸಮಾಜಮುಖಿ ಚಟುವಟಿಗೆಗಳಿಗೆ ಮಹಾ ಪೋಷಕರಾಗಿ ನಿಂತವರು ಶ್ರೀಯುತರು . ಇಂಥ ಶ್ರೇಷ್ಠ ಸಾಧಕನಿಗೆ ರೋಟರಿ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಿದೆ.

ನೇಷನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾಗತ ಭಾಷಣ ಮಾಡಿದ ರೋಟರಿ ಅಧ್ಯಕ್ಷ ರೋ. ಶ್ರೀಧರ್ ಕೆ. ವಿ. ಅವರು, “ಸಮಾಜವನ್ನು ಮತ್ತು ಯುವ ಪೀಳಿಗೆಯನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಹಾಗೂ ಸಾಧಕರ ಪಾತ್ರ ಅನನ್ಯವಾದುದು. ಅಂತಹ ಸದ್ದಿಲ್ಲದ ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವುದು ರೋಟರಿ ಸಂಸ್ಥೆಯ ಹೆಮ್ಮೆಯಾಗಿದೆ” ಎಂದರು. ರೋಟರಿ ಸಹಾಯಕ ಗವರ್ನರ್ ರೋ. ಡಾ. ಶಶಿಧರ್ ದೊಂಗ್ರೆ, ಮಾಜಿ ಅಧ್ಯಕ್ಷರುಗಳಾದ ರೋ. ಪ್ರತಾಪ್ ಸಿಂಹ ನಾಯಕ್, ರೋ. ಪ್ರಕಾಶ್ ಪ್ರಭು ಹಾಗೂ ಮೇಜರ್ ಎಂ. ವಿ. ಭಟ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿಗಳಾದ ರೋ. ಡಾ. ರಾಘವೇಂದ್ರ ಪಿಡಮಲೆ ಧನ್ಯವಾದ ಸಮರ್ಪಿಸಿದರು. ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಕಡಿರುದ್ಯಾವರ: ರಸ್ತೆಗೆ ಬಿದ್ದ ಮರ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya

ಅಳದಂಗಡಿ: ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಹಿರಿಯ ಪಶುವೈದ್ಯಕೀಯ ಪರೀವೀಕ್ಷಕ ಡಾ| ರಮೇಶ ರಿಗೆ ಅಧಿಕಾರ ಹಸ್ತಾಂತರ

Suddi Udaya

ಧರ್ಮಸ್ಥಳದಲ್ಲಿ ಪುರಾಣ ಪ್ರವಚನ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಸಂಸದ ನಳಿನ್ ಕುಮಾರ್ ಕಟೀಲ್

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya
error: Content is protected !!