30.8 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಜೂ. 19-20: ಬೆಂಗಳೂರು ಬಸವ ಅಕ್ಯೂ ಅಕಾಡೆಮಿ ವತಿಯಿಂದ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್ ಮತ್ತು ಮರ್ಮ ಚಿಕಿತ್ಸಾ ಕಾರ್ಯಾಗಾರ

ಬೆಂಗಳೂರು: ಬಸವ ಅಕ್ಯೂ ಅಕಾಡೆಮಿ, ಬೆಂಗಳೂರು ವತಿಯಿಂದ ಎರಡು ದಿನಗಳ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್ ಮತ್ತು ಮರ್ಮ ಚಿಕಿತ್ಸಾ ಕಾರ್ಯಗಾರ ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ ಎಂದು ಬಸವ ಅಕ್ಯೂ ಅಕಾಡೆಮಿ ಸದಸ್ಯ ಸುಕೇಶ್ ಜೈನ್ ಅಳದಂಗಡಿ ತಿಳಿಸಿದ್ದಾರೆ.

ಬಸವ ಅಕ್ಕೂ ಅಕಾಡೆಮಿ ಸಂಸ್ಥಾಪಕರಾದ ಡಾ. ಕೆ. ಬಸವರಾಜುರವರ ನೇತೃತ್ವದಲ್ಲಿ “ಮನೆ ಮನೆಯಲ್ಲೂ ವೈದ್ಯರಾಗುವ ಕನಸಿನೊಂದಿಗೆ” ಜೂ. 19 ಮತ್ತು 20 ರಂದು ಟಿ.ಇ.ಎಂ. ಕಲಿತಿರುವ ವಿದ್ಯಾರ್ಥಿಗಳಿಗಾಗಿ ಆಫ್‌ಲೈನ್‌ನಲ್ಲಿ ಎರಡು ದಿನ ನಡೆಯುವ ನೈಸರ್ಗಿಕ ಚಿಕಿತ್ಸಾ ವಿಧಾನವಾದ ಸಿಂಗಲ್ ಪಾಯಿಂಟ್, ಅಕ್ಯೂಪ್ರೆಜರ್, ಮರ್ಮ ಚಿಕಿತ್ಸೆ, ಸೀಡ್ ಥೆರಪಿ, ದೇಹದ ಪ್ರಮುಖ ಅಕ್ಯೂಪ್ರೆಜರ್ ಪಾಯಿಂಟ್ ಪರಿಚಯ, ಕಲರ್ ಥೆರಪಿ, ದೇಹದಲ್ಲಿ ಎನರ್ಜಿ ಸಮತೋಲನ ಮಾಡುವುದು, ಹೃದಯ ಆರೋಗ್ಯಕ್ಕೆ ನೈಸರ್ಗಿಕ ಪರಿಹಾರಗಳ ಬಗ್ಗೆ ಚಿಕಿತ್ಸಾ ಕಾರ್ಯಗಾರವನ್ನು ಅಂಬೇಡ್ಕರ್ ಭವನ, ಮಿಲ್ಲರ್ ರಸ್ತೆ, ಭಗವಾನ್ ಮಹಾವೀರ್ ಆಸ್ಪತ್ರೆ ಹತ್ತಿರ, ವಸಂತ ನಗರ, ಬೆಂಗಳೂರಿನಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಏರ್ಪಡಿಸಲಾಗಿದೆ

ಕರ್ನಾಟಕಾದ್ಯಂತ ಎಲ್ಲಾ ಜಿಲ್ಲೆಗಳಿಂದ ಆಸಕ್ತಿಯುಳ್ಳ ಟಿ.ಇ.ಎಂ. ವಿದ್ಯಾರ್ಥಿಗಳು ಈ ಕಾರ್ಯಗಾರಕ್ಕೆ ಆಗಮಿಸಿ ಕಾರ್ಯಗಾರದ ಉಪಯೋಗ ಪಡೆಯಲು ಬಸವ ಅಕ್ಯು ಅಕಾಡೆಮಿ ಕೊರುತ್ತಿದೆ. ಹೆಚ್ಚಿನ ಮಾಹಿತಿಗಾಗಿ : 9606496408, 9606496409, 8088139861 ಸಂಪರ್ಕಿಸಿ.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ ಮಹಾಶಿವರಾತ್ರಿಯ ಪ್ರಯುಕ್ತ 1008 ಸೀಯಾಳ ಅಭಿಷೇಕ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ” ಭಿತ್ತಿಪತ್ರಿಕೆ ಅನಾವರಣ “

Suddi Udaya

ನಾವೂರು ಹಿ.ಪ್ರಾ. ಶಾಲೆಯಲ್ಲಿ ಶೈಕ್ಷಣಿಕ ಮಾಹಿತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಅಂಗನವಾಡಿ ಚರ್ಚ್ ನಲ್ಲಿ ಮಕ್ಕಳ ದಿನಾಚರಣೆ

Suddi Udaya

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶೃಂಗೇರಿ ಶಾರದಾ ಮಠಕ್ಕೆ ಭೇಟಿ, ಪುಂಡಿ ಪಣವು ಸಮರ್ಪಣೆ

Suddi Udaya

ತಹಶೀಲ್ದಾರ್ ಆದೇಶದ ಬೆನ್ನಲ್ಲೇ ಅನಧಿಕೃತ ಕಟ್ಟಡ ತೆರವು

Suddi Udaya
error: Content is protected !!