26.1 C
ಪುತ್ತೂರು, ಬೆಳ್ತಂಗಡಿ
October 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆತ್ಮಶಕ್ತಿ ಸಹಕಾರ ಸಂಘದಿಂದ ವಿಶ್ವ ಅಂಚೆ ದಿನಾಚರಣೆ

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ವತಿಯಿಂದ ವಿಶ್ವ ಅಂಚೆ ದಿನಾಚರಣೆ ಪ್ರಯುಕ್ತ ಸಂಘದ ಎಲ್ಲಾ ಶಾಖೆಗಳಲ್ಲಿ ಅಂಚೆ ನೌಕರರಿಗೆ ವಿಶೇಷ ಗೌರವಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸಂಘದ ಪ್ರಧಾನ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಅಂಚೆ ನೌಕರರ ಸೇವೆಯನ್ನು ಶ್ಲಾಘಿಸುತ್ತ, ಅವರನ್ನು ಗೌರವಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಅಂಚೆ ನೌಕರರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಮತ್ತು ಬಿ.ಎಸ್.ಎನ್.ಎಲ್. ನೌಕರರ ಸಹಕಾರ ಸಂಘ (ನಿ.), ಬಳ್ಳಾಲ್‌ಬಾಗ್, ಮಂಗಳೂರು ಇಲ್ಲಿಗೆ ಭೇಟಿ ನೀಡಿ, ಸಂಘದ ಅಧ್ಯಕ್ಷ ಎಸ್. ಶೈಲೇಶ್ ಕುಮಾರ್ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನು ಅಭಿಮಾನಪೂರ್ವಕವಾಗಿ ಗೌರವಿಸುವ ಮೂಲಕ ದಿನಾಚರಣೆಯನ್ನು ಮತ್ತೂ ವಿಶೇಷವಾಗಿ ಆಚರಿಸಲಾಯಿತು.

ಸಂಘದ ಎಲ್ಲಾ ಶಾಖೆಗಳಲ್ಲಿ ಒಟ್ಟು 50ಕ್ಕೂ ಅಧಿಕ ಅಂಚೆ ನೌಕರರನ್ನು ಗೌರವಿಸಿ ಸನ್ಮಾನಿಸಲಾಯಿತು.

ಆತ್ಮಶಕ್ತಿ ಸಹಕಾರ ಸಂಘವು ಆರ್ಥಿಕ ವ್ಯವಹಾರದ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದು, ವಿವಿಧ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬರುತ್ತಿರುವುದು ಸಂಘದ ವಿಶೇಷತೆಯಾಗಿದೆ.

Related posts

ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ: ಪತ್ರಿಕಾ ಕ್ಷೇತ್ರಕ್ಕೆ ಹೊಸ ಸ್ವರೂಪ ನೀಡಿದ ದ.ಕ ಜಿಲ್ಲಾ ಪತ್ರಕರ್ತರ ಸಂಘ- ಕಟೀಲ್

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ-ನಿಟ್ಟಡೆ ಸಂಘಟನೆ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

Suddi Udaya

ಶಿಬಾಜೆ ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ:ಧಾರ್ಮಿಕ ಸಭೆ

Suddi Udaya

ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ : ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ

Suddi Udaya

ಉಜಿರೆ : ಶ್ರೀ ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಗಮಕ ಕಾರ್ಯಕ್ರಮ

Suddi Udaya

ತೆಂಕಕಾರಂದೂರು: ಖಂಡಿಗ ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನದ ಆವರಣ ತಡೆಗೋಡೆ ಕುಸಿತ

Suddi Udaya
error: Content is protected !!