33.4 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಅ. 16 ಕೊನೆಯ ದಿನ; ಮೊಬೈಲ್ ಆಪ್ ಮೂಲಕ ಸಮೀಕ್ಷೆಗೆ ರೈತರಿಗೆ ಸೂಚನೆ

ಬೆಳ್ತಂಗಡಿ: 2026-27ನೆಯ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಅ. 16ರಂದು ಅಂತಿಮ ದಿನವಾಗಿದ್ದು, ರೈತರು ಈಗಾಗಲೇ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿರುವುದನ್ನು ಬೆಳೆ ದರ್ಶಕ ಮೊಬೈಲ್ ತಂತ್ರಾಂಶದ ಮೂಲಕ ಪರೀಕ್ಷಿಸಿಕೊಂಡು ಖಚಿತಪಡಿಸಿಕೊಳ್ಳುವಂತೆ ಕೋರಿದೆ.

ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ನ ಗೂಗಲ್ ಪ್ಲೇ ಸ್ಟೋರ್ ನಿಂದ ಅಥವಾ https://play.google.com/store/apps/details?id=com.crop.offcskharif_2021
ಈ ಮೇಲಿನ ಲಿಂಕ್ ಬಳಸಿ ಬೆಳೆ ದರ್ಶಕ ತಂತ್ರಾಂಶ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಬೆಳೆ ದರ್ಶಕ ತಂತ್ರಾಂಶದಲ್ಲಿ ರೈತರು ತಮ್ಮ ಎಲ್ಲಾ ಸರ್ವೇ ನಂಬರ್ ಗಳಲ್ಲಿ ದಾಖಲಾಗಿರುವ ಬೆಳೆ ವಿವರ ಪೋಟೊ ಸಹಿತ ವೀಕ್ಷಿಸಬಹುದು. ಹಾಗೂ ಚಾಲ್ತಿ ಸಾಲಿನ ಬೆಳೆ ಸಮೀಕ್ಷೆಯಲ್ಲಿ ತಪ್ಪುಗಳಿದ್ದರೆ, ಆಕ್ಷೇಪಣೆ ಸಲ್ಲಿಸಬಹುದು. ಅಥವಾ ಲಿಖಿತವಾಗಿಯೂ ತಹಶೀಲ್ದಾರ್ ಅವರ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದು.

ಈಗಾಗಲೇ ಬೆಳ್ತಂಗಡಿ ತಾಲ್ಲೂಕನ್ನು ಸಾಧಾರಣ ಬರ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಿದ್ದು, ತಾಲ್ಲೂಕಿನಲ್ಲಿ ಭತ್ತವನ್ನು ಬೆಳೆದ ಎಲ್ಲಾ ರೈತರೂ ಸಹ ಸರ್ಕಾರದಿಂದ ಯಾವುದೇ ಪರಿಹಾರ ಮೊತ್ತವನ್ನು ಪಡೆಯಲು ಬೆಳೆ ಸಮೀಕ್ಷೆ ಅಂಕಿ ಅಂಶವು ಖಡ್ಡಾಯವಾಗಿರುವ ಕಾರಣ, ತಪ್ಪದೆ ನಿಮ್ಮ ಗ್ರಾಮಕ್ಕೆ ನೇಮಿಸಿರುವ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಿ ಬೆಳೆ ಸಮೀಕ್ಷೆ ಕೈಗೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರುತ್ತಾರೆ.

Related posts

ಬೆಳಾಲು ಶ್ರೀಧ.ಮ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಮೇಲಂತಬೆಟ್ಟು ಯುವಕ ಜಾಂಡೀಸ್ ನಿಂದ ನಿಧನ

Suddi Udaya

ಜೈನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಜೈನ ಜಾತಿ ಮತ್ತು ಧರ್ಮಕ್ಕೆ ಅಪಮಾನ ಆರೋಪ ಮಹೇಶ್ ಶೆಟ್ಟಿ ತಿಮರೋಡಿ ಹಾಗೂರಾಜು ಶೆಟ್ಟಿ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya

ಮೊಗ್ರು : ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಮೊಸಳೆ ಪತ್ತೆ

Suddi Udaya

ಮಹಿಳೆಯೊಂದಿಗೆ ಅನುಚಿತ ವರ್ತನೆ ಹಾಗೂ ಹಲ್ಲೆ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya
error: Content is protected !!