ಮಂಗಳೂರು: ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಇದರ ಅಂಗ ಸಂಸ್ಥೆ ಯಾಗಿರುವ ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಮಹೇಶ್ ಪ್ರಸನ್ನ ಕೆ. ಅ 15ರಂದು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಯೋಗೇಶ್ ಕಾಮತ್, ಕಾಲೇಜಿನ ಸಂಚಾಲಕ ಎಂ. ರಂಗನಾಥ ಭಟ್ ಸಹಿತ ಕಾಲೇಜಿನ ಡೀನ್ ಅಕಾಡೆಮಿಕ್ಸ್ ಹಾಗೂ ಉಪ ಪ್ರಾಂಶುಪಾಲ ಡಾ. ಡೇಮಿಯನ್ ಆಂಟನಿ ಡಿ ಮೆಲ್ಲೋ, ಡೀನ್ ಅಕ್ರೆಡಿಟೇಶನ್ ಡಾ. ವೆಂಕಟೇಶ್ ಎನ್, ಡೀನ್ ಅಡ್ಮಿನಿಸ್ಟ್ರೇಶನ್ ಡಾ. ಹೆಚ್. ನಾಗೇಶ್ ಶೆಣೈ, ಡೀನ್ ಸ್ಟೂಡೆಂಟ್ ವೆಲ್ ಫೇರ್ ಡಾ. ಪ್ರಿಯಾ ವಿ. ಫ್ರ್ಯಾಂಕ್, ಹಾಗೂ ಡೀನ್ ಪ್ಲೇಸ್ ಮೆಂಟ್ ವಂದನಾ ಶಂಕರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ನೂತನ ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ ಕೆ ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲ ಸೌಲಭ್ಯಗಳ ಹೊರತಾಗಿಯೂ ದಾಖಲಾತಿ ಮತ್ತು ಉದ್ಯೋಗಾವಕಾಶಗಳು ಮಹತ್ವದ್ದಾಗಿವೆ. ಈ ನಿಟ್ಟಿನಲ್ಲಿ ಬದ್ದತೆಯಿಂದ ಕಾಲೇಜಿನ ಉನ್ನತಿಗೆ ಜತೆಗೂಡಿ ಶ್ರಮಿಸುವಲ್ಲಿ ಎಲ್ಲರ ಸಹಕಾರ ಕೋರಿದರು.
ಕಾರ್ಯದರ್ಶಿ ಯೋಗೇಶ್ ಕಾಮತ್ ಮಾತನಾಡಿ ವಿದ್ಯಾರ್ಥಿಗಳೇ ಶಿಕ್ಷಣ ಸಂಸ್ಥೆಯ ರಾಯಭಾರಿಗಳಾಗಿದ್ದಾರೆ. ಅವರಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ನಮ್ಮ ಬದ್ಧತೆಯಾಗಿದೆ. ಶಿಕ್ಷಕರು ಈ ಪವಿತ್ರ ವೃತ್ತಿಯ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಶ್ರಮಿಸಬೇಕಾಗಿದೆ ಎಂದರು.
ಸಂಚಾಲಕ ಎಂ. ರಂಗನಾಥ ಭಟ್ ಮಾತನಾಡಿ ಕಾಲೇಜಿನಲ್ಲಿ ಸೌಲಭ್ಯಗಳ ನಿರಂತರ ಉನ್ನತೀಕರಣ ನಡೆದಿದ್ದು ನೂತನವಾಗಿ ರಜತ ಮಹೋತ್ಸವ ಬ್ಲಾಕ್ , ಹೊಸ ಸ್ಕಿಲ್ ಲ್ಯಾಬ್ ಗಳು ಪೂರ್ಣಗೊಂಡಿದೆ. ಕಾಲೇಜು ತನ್ನ ಸಾಧನೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿಕೊಂಡು ಅಗ್ರ ಸ್ಥಾನದ ಸಂಸ್ಥೆಗಳ ಪೈಕಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.
ಪ್ರಭಾರ ಪ್ರಾಂಶುಪಾಲರಾಗಿದ್ದ ಡೀನ್ ಅಕಾಡೆಮಿಕ್ಸ್ ಡಾ. ಡೇಮಿಯನ್ ಆಂಟನಿ ಡಿ ಮೆಲ್ಲೋ ಕಾಲೇಜಿನ ವ್ಯವಸ್ಥಿತ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಎಲ್ಲರೂ ನೂತನ ಪ್ರಾಂಶುಪಾಲರ ನಾಯಕತ್ವದಲ್ಲಿ ಪ್ರಗತಿಯನ್ನು ಬೆಂಬಲಿಸಲಿದ್ಧಾರೆ ಎಂದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾರೆಲ್ ಡಿ ಮೆಲ್ಲೋ ಕಾರ್ಯಕ್ರಮ ನಿರ್ವಹಿಸಿದರು.












