31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿ ಇದರ 400ನೇ ಕಾರ್ಯಕ್ರಮ ಹಾಸನ ಜಿಲ್ಲೆಗೆ ಪ್ರಯಾಣ

ಬಳಂಜ: ಐದು ವರ್ಷಗಳ ಹಿಂದೆ ಹಳ್ಳಿ ಪ್ರದೇಶದಲ್ಲಿ ಪ್ರಾರಂಭವಾದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಇಂದು ಸುಮಾರು 11 ಜಿಲ್ಲೆ, 2 ರಾಜ್ಯಗಳಿಗೆ ಭಕ್ತಿ ಹೆಜ್ಜೆ ಕಾಲಿಟ್ಟು 400 ನೇ ಕಾರ್ಯಕ್ರಮದ ವರೆಗೆ ಸಾಗಿ ಬಂದು ರಾಜ್ಯ ಹಾಗೂ ಜಿಲ್ಲೆಯಲ್ಲಿ ಅತ್ಯಂತ ಉತ್ತಮ ತಂಡ ಎಂದು ಹೆಸರು ಪಡೆದುಕೊಂಡಿದೆ, ಭಜನೆ ಮಾತ್ರ ಅಲ್ಲದೆ ಸಮಾಜಮುಖಿ ಕೆಲಸದೊಂದಿಗೆ ಕೈಜೋಡಿಸಿ, ಅಶಕ್ತ ಕುಟುಂಬಗಳಿಗೆ ವೈದ್ಯಕೀಯ ನೆರವು, ವಿದ್ಯಾನಿಧಿಯ ಸಹಾಯಧನ, ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಈ ದಿನ ಹಾಸನ ಜಿಲ್ಲೆಯ ಅರಕಲಗೂಡು, ಹುಲಿಕಲ್ಲು ಇಲ್ಲಿ ನಡೆಯುವ ಗರುಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಲ್ಲಲು ಹಾಸನ ಜಿಲ್ಲೆಗೆ 4ನೇ ಬಾರಿ ಕಾರ್ಯಕ್ರಮ ನೀಡಲು ಪ್ರಯಾಣಿಸುತ್ತಿದೆ.

ಬ್ರಹ್ಮಶ್ರೀ 400 ನೇ, ಕಾರ್ಯಕ್ರಮಕ್ಕೆ ಇಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಬಳಂಜ ಇದರ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿಯವರು ತೆಂಗಿನಕಾಯಿ ಹೊಡೆದು ಮಕ್ಕಳ ಭಕ್ತಿ ಹೆಜ್ಜೆ ಪ್ರಯಾಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಪ್ರಧಾನ ಸಂಚಾಲಕರಾದ ಹರೀಶ್ ವೈ ಚಂದ್ರಮ ಸೇರಿದಂತೆ ಮಂಡಳಿಯ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು.

Related posts

ಎಸ್‌ಎಸ್‌ಎಲ್‌ಸಿ ಫಲಿತಾಂಶ: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.100 ಫಲಿತಾಂಶ

Suddi Udaya

ಇಂದಬೆಟ್ಟು ಸ. ಹಿ. ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆ ಅನುಗ್ರಹ ಶಾಲಾ ಬಸ್ ಚಾಲಕ ಖಾಸಿಂ ಹೃದಯಾಘಾತದಿಂದ ನಿಧನ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ಭವ್ಯ ರಂಗಮಂಟಪದಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ಮುಗಳಿ ಬ್ರಹ್ಮ ಕ್ಷೇತ್ರ ದೇವರ ಸನ್ನಿಧಿ ಬಸದಿ ಒಳಗೆ ನುಗ್ಗಿದ್ದ ನೀರು

Suddi Udaya

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!