25.4 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅ. 18: ತೋಟತ್ತಾಡಿ 10ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮ

ತೋಟತ್ತಾಡಿ: ಧರ್ಮರಕ್ಷಾ ವೇದಿಕೆ, ತೋಟತ್ತಾಡಿ ಇದರ ಆಶ್ರಯದಲ್ಲಿ 10 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮವು ತೋಟತ್ತಾಡಿ ಬೆಂದ್ರಾಳ ಶ್ರೀ ನಾರಾಯಣ ಧರ್ಮಪರಿಪರಿಣಾ ಯೋಗಂ (ಎಸ್ ಎನ್ ಡಿ ಪಿ) ಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ,

ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ಸಾಮಾಜಿಕ ಕಾರ್ಯಕರ್ತೆ ಹಾಗೂ ಪ್ರಖರ ವಾಗ್ಮಿ ಶ್ರೀಮತಿ ರಮಿತಾ ಸೂರ್ಯವಂಶಿ ನೀಡಲಿದ್ದಾರೆ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ನಮಿತಾ,ಎಸ್.ಎನ್.ಡಿ ಪಿ ಶಾಖೆ ತೋಟತ್ತಾಡಿ ಇದರ ಅಧ್ಯಕ್ಷ ಸುರೇಶ್ ಪರ್ಲ, ಕಾರ್ಯಕ್ರಮದ ಅಧ್ಯಕ್ಷತೆಯನ್ನು,ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಇದರ ಅಧ್ಯಕ್ಷ ಪ್ರಸಾದ್ ಮಡಿಯೂರು ಇವರು ವಹಿಸಲಿದ್ದಾರೆ.

ಬೆಳಿಗ್ಗೆ ಗಂಟೆ 8 ರಿಂದ ಗಣಹೋಮ ಹಾಗೂ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ, ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ ಶ್ರೀ ಶಾರದಾ ದೇವಿ ಮೂರ್ತಿಯ ವೈಭವಯುತ ಶೋಭಾಯಾತ್ರೆ ನಂತರ ಬೆಂದ್ರಾಳ ನದಿಯಲ್ಲಿ ಶ್ರೀ ಶಾರದಾ ದೇವಿ ಮೂರ್ತಿಯ ಜಲಸ್ತಂಭನ ನಡೆಯಲಿದೆ.

Related posts

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಶಾಂತಿವನಕ್ಕೆ-ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೋಳಿ ಭೇಟಿ

Suddi Udaya

ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ರ ಪ್ರಶಸ್ತಿಗೆ ಭಾಜನರಾದ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ

Suddi Udaya

ಉಜಿರೆ ಗ್ರಾ. ಪಂ. ವಾರ್ಡ್ 4ರ ಉಪಚುನಾವಣೆ: ಅನಿಲ್ ಪ್ರಕಾಶ್ ಡಿ’ ಸೋಜ ಗೆಲುವು

Suddi Udaya

ಕೊಕ್ಕಡ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಖೋ ಖೋ ಕ್ರೀಡಾ ಕೂಟದ ಸಮಾರೋಪ ಸಮಾರಂಭ

Suddi Udaya

ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಸಭೆ: ವಲಯವಾರು ಸಾಧನಾ ವರದಿ ಪ್ರಸ್ತುತಿ: ವಲಯವಾರು ನವಜೀವನೋತ್ಸವಕ್ಕೆ ಸಂಕಲ್ಪ

Suddi Udaya
error: Content is protected !!