ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ 2022 – 2025 ರ ತನಕ ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಉಪ್ಪಿನಂಗಡಿ ಕೆ ಎಂ ಎಫ್ ನಿಂದ ಬೆಳ್ತಂಗಡಿ ಕೆ ಎಂ ಎಫ್ ಗೆ ವರ್ಗಾವಣೆಗೊಂಡ ರಾಜೇಶ್ ಕಾಮತ್ ರವರಿಗೆ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸಂಘದ ವತಿಯಿಂದ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಉಮೇಶ್ ಗೌಡ, ನಿರ್ದೇಕರಾದ ಸದಾಶಿವ ಶೆಟ್ಟಿ, ಶೀನಪ್ಪ ಗೌಡ, ಪುರುಶೋತ್ತಮ ಗೌಡ ದಾಸರಕೋಡಿ, ರಮಾನಂದ ಎಂ , ಶಾರದಾ ಆರ್ ಗೌಡ, ಪ್ರತಿಮಾ, ಸುನಿಲ್ ಕುಮಾರ್, ಸಿಬ್ಬಂದಿ ಹೇಮಲತಾ ಉಪಸ್ಥಿತರಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಶ್ ಕಾಮತ್ ರವರು ಪದ್ಮುಂಜ ಹಾಲು ಸೊಸೈಟಿಯ ವಿಸ್ತರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಂತೋಷವಾಗಿತ್ತು ಬಹಳ ಬಲಿಷ್ಠವಾದ ಸಂಘ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಸಂಘ ಇನ್ನಷ್ಟು ಬಲಿಷ್ಠವಾಗಿಲಿ ಎಂದರು. ಸಂಘದ ಕಾರ್ಯದರ್ಶಿ ಯಂ ಸತೀಶ್ ಕುಮಾರ್ ಸ್ವಾಗತಿಸಿದರು. ನಿರ್ದೇಶಕ ರಮಾನಂದ ಎಂ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಧನ್ಯವಾದ ಸಲ್ಲಿಸಿದರು.












