27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವರ : 23ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ನಾವರ ವತಿಯಿಂದ ಆ.16ರಂದು ಶಾರದಾ ಮಂಟಪ ನಾವರ ಪಿಲ್ಯ, ಕುದ್ಯಾಡಿ ಇಲ್ಲಿ 23ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ನಡೆಯಿತು.

ಬೆಳಿಗ್ಗೆ ಪ್ರಾರ್ಥನೆ, ಪುಣ್ಯಾಹ ಸಹಿತ ಗಣಹೋಮ, ದೇವರ ವಿಗ್ರಹ ಪ್ರತಿಷ್ಠೆ, ಭಜನಾ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಗಳು, ಮಧ್ಯಾಹ್ನ ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಪ್ರಕಾಶ್ ಶೆಟ್ಟಿ ನೊಚ್ಚ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು .


ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಸದಾನಂದ ನಾವರ, ಉದ್ಯಮಿ ಗಂಗಾಧರ ಮಿತ್ತಮಾರು, ಸಭೆ ಅಧ್ಯಕ್ಷರಾದ ಅಳದಂಗಡಿ ಸತ್ಯ ದೇವತೆ ದೇವಸ್ಥಾನದ ಆಡಳಿತ ಮೊಕ್ತೇಸರಾದ ಶಿವಪ್ರಸಾದ ಅಜಿಲ, ಬದ್ಯಾರು ಲೋಕನಾಥೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಧರ್ ಪೂಜಾರಿ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಜಯಪೂಜಾರಿ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಶುಭಕರ ಸ್ವಾಗತಿಸಿ, ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿ. ಲ.ನಿತ್ಯಾನಂದ ನಾವರ ವಂದಿಸಿದರು.

ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು., ಸಂಜೆ ಗಂಟೆ 3 ರಿಂದ ಸಂಧ್ಯಾಪೂಜೆ, ವಿಸರ್ಜನಾ ಪೂಜೆ, ಸಂಜೆ ಗಂಟೆ 3.30 ರಿಂದ ವಿಜೃಂಭಣೆಯ 23ನೇ ವರ್ಷದ ಶಾರದಾ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.

ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆ: ವಿವಿಧ ಭಜನಾ ಮಂಡಳಿಗಳಿಂದ ಏಕಕಾಲದಲ್ಲಿ ಕುಣಿತ ಭಜನೆ ನಡೆಯಿದೆ. ರಾತ್ರಿ 7ರಿಂದ ಶ್ರೀ ದುರ್ಗಾ ಕಲಾ ತಂಡ “ಪುಗರ್ತೆ” ಇವರಿಂದ ತುಳು ಪೌರಾಣಿಕ ನಾಟಕ ‘ಕಲ್ಲಿಗದ ಕಾಳಿ ಮಂತ್ರದೇವತೆ” ಪ್ರದರ್ಶನ ನಡೆಯಲಿದೆ.

Related posts

ಧೀಮತಿ ಜೈನ ಮಹಿಳಾ ಸಮಾಜದ ವತಿಯಿಂದ ಧಾರ್ಮಿಕ ಸಂವಾದ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

Suddi Udaya

ಶಿಬಾಜೆ: ರಸ್ತೆಗೆ ಅಡ್ಡಲಾಗಿ ಇಟ್ಟಿಗೆ ಇಟ್ಟ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕನಿಗೆ ಗಾಯ ಆರೋಪಿ ವಿರುದ್ಧ ಪ್ರಕರಣ ದಾಖಲು

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಮದ್ದಡ್ಕ ಕಿನ್ನಿಗೋಳಿ ವರಕಬೆಯ ಬಳಿ ಹೂತು ಹೋದ ರಾಜ್ಯ ಹೆದ್ದಾರಿ ರಸ್ತೆ

Suddi Udaya
error: Content is protected !!