September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಮಹಾಸಭೆ: ಆಡಳಿತ ಮಂಡಳಿಗೆ ಮತದಾನ; 11 ಮಂದಿ ನಿರ್ದೇಶಕರ ಆಯ್ಕೆ

ಬೆಳ್ತಂಗಡಿ; ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಹೊಂದಿರುವ ನಾಡಿನ ಆಧರಣೀಯ ಕ್ಷೇತ್ರವಾದ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ 2025-28 ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯು ಸೆ. 9 ರಂದು ವಕ್ಫ್ ಅಧಿಕಾರಿಗಳ ಸುಪರ್ದಿಯಲ್ಲಿ ಚುನಾವಣೆ ನಡೆಯಿತು.

ವಕ್ಫ್ ಬೋರ್ಡ್ ನಿಗದಿಗೊಳಿಸಿದ್ದ 11 ಸ್ಥಾನಗಳಿಗೆ 21ಮಂದಿ ಉಮೇದ್ವಾರಿಕೆ ಸಲ್ಲಿಸಿದ್ದರಿಂದ ಪ್ರಜಾಪ್ರಭುತ್ವ ಆಧರಿತವಾಗಿ ಗುಪ್ತ ಮತದಾನದ ಮೂಲಕ ಕ್ರಮವಾಗಿ ಅತೀ ಹೆಚ್ಚು ಮತಗಳನ್ನು ಪಡೆದ 11 ಮಂದಿ ಮುಂದಿನ ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಘೋಷಿಸಿದರು.

ಚುನಾವಣೆಯಲ್ಲಿ ಮುಹಮ್ಮದ್ ಬಶೀರ್ ಅಹ್ಸನಿ, ಡಿ.ವೈ ಉಮರ್, ಅಬ್ದುಲ್ ಸಲೀಂ, ಅಬೂಬಕ್ಕರ್ ಸಿದ್ದೀಕ್ ಜೆ.ಹೆಚ್, ಕೆ.ಯು ಇಬ್ರಾಹಿಂ, ಕೆ.ಯು ಹನೀಫ್, ಬದ್ರುದ್ದೀನ್ ಹೆಚ್, ಅಬ್ದುಲ್ ಹಕೀಂ ಕೆ.ಕೆ, ಕೆ.ಯು ಮುಹಮ್ಮದ್ ಸಖಾಫಿ, ಶರೀಫ್ ಸ‌ಅದಿ ಮತ್ತು
ಯಾಕೂಬ್ ಎನ್ ಎಂ ನಿರ್ದೇಶಕರಾಗಿ ಚುನಾಯಿತರಾದರು.

ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿದ್ದರು.

ಮಹಾಸಭೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಸಯ್ಯಿದ್ ಕಾಜೂರು ತಂಙಳ್, ವಕ್ಫ್ ಇಲಾಖೆಯ ಸಿಬ್ಬಂದಿಗಳು ಸಹಕರಿಸಿದರು.
ಮುಂಜಾಗ್ರತಾ ಕ್ರಮವಾಗಿ ಮೀಸಲು ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಮಹಾಸಭೆಯಲ್ಲಿ ಹಿಂದಿನ ಮೂರು ವರುಷಗಳ ಲೆಕ್ಕ ಪತ್ರ ಹಾಗೂ ತ್ರೈ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಹೆಚ್ ಮಂಡಿಸಿದರು. ಸಂಸ್ಥೆಯ ಅಧ್ಯಕ್ಷ ಕೆ ಯು ಇಬ್ರಾಹಿಂ ಸ್ವಾಗತಿಸಿದರು.

Related posts

ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ

Suddi Udaya

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ : ಎಸ್.ಡಿ ಎಂ ಕಾಲೇಜಿನ ಬಾಲಕರ ತಂಡ ರಾಜ್ಯ ಮಟಕ್ಕೆ ಆಯ್ಕೆ

Suddi Udaya

ಪುಂಜಾಲಕಟ್ಟೆ ಸ.ಪ್ರ.ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವೀನ್ ಮತ್ತು ಹರಿಣಾಕ್ಷಿ ನವ ದಂಪತಿಗಳಿಂದ ನಂದಗೋಕುಲ ಗೋಶಾಲೆಗೆ ರೂ 1.47 ಲಕ್ಷ ಗೋ ನಿಧಿ ಹಸ್ತಾಂತರ

Suddi Udaya

ಧರ್ಮಸ್ಥಳ: ಸಂತಾನಪ್ರದ ನಾಗಕ್ಷೇತ್ರದಲ್ಲಿ ಶ್ರೀ ನಾಗದೇವರ ಬಿಂಬ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠೆ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವ: ಹೊರೆಕಾಣಿಕೆ ಸಮರ್ಪಣೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: ಗುರುತಿಸಿದ ಹೊಸ ಸ್ಥಳದಲ್ಲಿ ಅವಶೇಷಗಳು ಪತ್ತೆ

Suddi Udaya
error: Content is protected !!