27.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೆಳೆಯರ ಬಳಗ ಗುರುವಾಯನಕೆರೆ: 36ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವದ ಕಾರ್ಯಕ್ರಮಗಳ ಉದ್ಘಾಟನೆ

ಗುರುವಾಯನಕೆರೆ: ಗೆಳೆಯರ ಬಳಗ ಗುರುವಾಯನಕೆರೆ ಇದರ ವತಿಯಿಂದ ಗುರುವಾಯನಕೆರೆ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆಯಲಿರುವ 36ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಅ.17 ರಂದು ಆರಂಭಗೊಂಡಿತು.

ಬೆಳಿಗ್ಗೆ ಪಂಚಗವ್ಯ ಪೂಣ್ಯಾಹ ಸಹಿತ ಗಣಹೋಮ ಗುರುವಾಯನಕೆರೆ ಶ್ರೀಮತಿ ಶಶಿಕಲಾ ಎನ್.ಕಾಮತ್ ಮತ್ತು ಮನೆಯವರ ಸೇವಾರ್ಥವಾಗಿ ನಡೆಯಿತು. ನಂತರ ಶ್ರೀ ಶಾರದಾ ದೇವಿಯ ಪ್ರತಿಷ್ಠಾಪನೆ ನೆರವೇರಿತು. ಬಳಿಕ ಯರ್ಡೂರು ಲಕ್ಷ್ಮೀನಿವಾಸದ ತಂಬಾನ್ ಯು. ಹಾಗೂ ಶ್ರೀಮತಿ ಶ್ರೀಜಾ ಅವರು ದೀಪ ಪ್ರಜ್ವಲಿಸಿ, ಅ.17ರಿಂದ ಅ.20ರವರೆಗೆ ನಾಲ್ಕುದಿನಗಳ ಕಾಲ ಶಾರದೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸುದ್ದಿ ಉದಯ ಪ್ರತಿಕೆಯ ಸಂಪಾದಕ ಬಿ.ಎಸ್ ಕುಲಾಲ್, ವಿಜಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಮನೋಹರ ಬಳಂಜ, ಗೆಳೆಯರ ಬಳಗದ ಅಧ್ಯಕ್ಷ ತಿಲಕ್‌ರಾಜ್ ಕೋಡಿಬೈಲು, ಗೌರವಾಧ್ಯಕ್ಷ ಕೃಷ್ಣಾನಂದ ಜಿ.ಕುಲಾಲ್,

ಕಾರ್ಯದರ್ಶಿ ಮಂಜುನಾಥ ಕುಂಬ್ಲೆ, ಉಪಾಧ್ಯಕ್ಷ ದಾಮೋದರ ಕೆ, ಜೊತೆ ಕಾರ್ಯದರ್ಶಿ ಕಾರ್ತಿಕ್ ನಾಯಕ್, ಕೋಶಾಧಿಕಾರಿ ಗೋಪಿನಾಥ ನಾಯಕ್, ಸಮಿತಿ ಸದಸ್ಯರಾದ ಕೃಷ್ಣಪ್ಪ ಟೈಲರ್, ಅಶೋಕ್ ಎಸ್, ವೇಣುಗೋಪಾಲ್ ಕಂಚಿಂಜೆ, ಹಾಗೂ ಅಶಾಲತಾ, ರಮಾನಂದ ಸಾಲಿಯಾನ್, ಶ್ರೀಮತಿ ಸುಧಾ, ಶ್ರೀಮತಿ ಸುಜಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಆನಂದ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಲಾಯಿಲ ಗ್ರಾ.ಪಂ.ನಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ರೈನ್ ಕೋಟ್ ಹಾಗೂ ಕೊಡೆ ವಿತರಣೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ “ನ್ಯೂ ಏಜ್ ಕೆರಿಯರ್ ಆಪರ್ಚುನಿಟಿಸ್” ವಿಷಯದ ಮೇಲೆ ಉಪನ್ಯಾಸ

Suddi Udaya

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

Suddi Udaya

ಬಡಗಕಾರಂದೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಬಂದಾರುವಿನಲ್ಲಿ ಸರಿಯಾಗಿ ಬಸ್ಸು ವ್ಯವಸ್ಥೆಯಿಲ್ಲದೆ ಪ್ರಯಾಣಿಕರ ಪರದಾಟ: ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರ ಮನವಿ

Suddi Udaya

ನಾಲ್ಕೂರು: ಬೊಳ್ಳಾಜೆ ನಿವಾಸಿ ಸೀತು ನಿಧನ

Suddi Udaya
error: Content is protected !!