September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಕುರಿಯ ಪ್ರತಿಷ್ಠಾನದಿಂದ ಬಲಿಪ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಭಾಗವತಿಕೆ ಸ್ಪರ್ಧೆಗೆ ಆಹ್ವಾನ

ಉಜಿರೆ : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ರಜತ ಪರ್ವ ಸರಣಿಯ ಸಮಾಪನ ಪ್ರಯುಕ್ತ, ಬಲಿಪ ನಾರಾಯಣ ಭಾಗವತರ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಸ್ಪರ್ಧೆ ಆಯೋಜಿಸಲಾಗಿದೆ. ರಜತಪರ್ವ ಸರಣಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 150 ತಾಳಮದ್ದಳೆಗಳನ್ನು ಸಂಘಟಿಸಲಾಗಿದ್ದು ಸಮಾರೋಪ ಸಮಾರಂಭದ ಪ್ರಯುಕ್ತ, ತೆಂಕುತಿಟ್ಟು ಭಾಗವತಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಪದವಿ ಪೂರ್ವ ಕಾಲೇಜು ವಿಭಾಗ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.

ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಎಲ್ಲ ಸ್ಪರ್ಧಾಳುಗಳಿಗೆ ಪ್ರಯಾಣ ವೆಚ್ಚ ಭರಿಸಲಾಗುವುದು. ಒಬ್ಬ ಸ್ಪರ್ಧಾಳುವಿಗೆ 10 ನಿಮಿಷಗಳ ಕಾಲಾವಕಾಶ ಇದ್ದು, ಹಿಮ್ಮೇಳ ಪರಿಕರ ಹಾಗೂ ನುರಿತ ಹಿಮ್ಮೇಳ ವಾದಕರನ್ನು ಪ್ರತಿಷ್ಠಾನದ ವತಿಯಿಂದ ಒದಗಿಸಲಾಗುವುದು. ಒಡ್ಡೋಲಗದ ಪದ್ಯ, ಶೃಂಗಾರ, ವೀರರಸದ ಹಾಡುಗಳನ್ನು ಆಯ್ಕೆ ಮಾಡುವುದು ಕಡ್ಡಾಯ. ಕೊಟ್ಟ ಸಮಯದ ಮಿತಿಯಲ್ಲಿ ಎಷ್ಟು ಹಾಡುಗಳನ್ನಾದರೂ ಹಾಡಬಹುದು. ಪೌರಾಣಿಕ ಪ್ರಸಂಗಗಳ ಹಾಡುಗಳನ್ನೇ ಆಯ್ದುಕೊಳ್ಳಬೇಕು. ಸ್ಪರ್ಧಾಳುಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುರಿತು ಪ್ರಾಂಶುಪಾಲರಿಂದ ದೃಢೀಕರಣ ಮಾಡಿರಬೇಕು.

ಜ.30ರ ಒಳಗೆ ಆಸಕ್ತರು ಸಂಪರ್ಕಿಸಬೇಕಾದ ವಿಳಾಸ: ಉಜಿರೆ ಅಶೋಕ ಭಟ್, ಚಿನ್ಮಯ, ಅಜಿತ ನಗರ, ಉಜಿರೆ 574240 ದ.ಕ., ದೂ: 9449510666, 9449255666.

Related posts

ಕೊಕ್ಕಡ: ‘ಕೆಸರ್ದ ಕಂಡೊಡು ಒಂಜಿ ದಿನ’ ಕ್ರೀಡಾಕೂಟದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಿಂದ ವೀಲ್ ಚೆಯರ್ ವಿತರಣೆ

Suddi Udaya

ಯುವಕರಿಬ್ಬರ ನಡುವೆ ಗಲಾಟೆ: ಮೂಗಿಗೆ ಕಚ್ಚಿ ಗಾಯಗೊಳಿಸಿದ ಸ್ನೇಹಿತ

Suddi Udaya

ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಉಜಿರೆ: ಎಸ್ ಡಿಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಖ್ಯಾತ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಉಜಿರೆಯ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ

Suddi Udaya

ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳ ಬೇಲಿ ತೆರವು: ಸಂರಕ್ಷಿಸಲಾಗಿದ್ದ ಗಿಡಗಳನ್ನು ಸಾಕು ಪ್ರಾಣಿಗಳು ತಿಂದು ನಾಶ

Suddi Udaya
error: Content is protected !!