ಬೆಳ್ತಂಗಡಿ : ರಾಜ್ಯ ಸರಕಾರದ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರದ ಯೋಜನೆಯ ಮೇಲಂತಬೆಟ್ಟು ಗ್ರಾಮ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ಅ.17 ರಂದು ಮೇಲಂತಬೆಟ್ಟು ಸಮುದಾಯ ಭವನದಲ್ಲಿ ನಡೆಯಿತು.

ತಹಶೀಲ್ದಾರ್ ಎಸ್. ಎನ್. ನರಗುಂದ ಸಭೆಯನ್ನು ಉದ್ಘಾಟಿಸಿದರು. ತಾ. ಪಂ. ಇಓ ಭವಾನಿಶಂಕರ್ ಸಭೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು.
ತಾಲೂಕು ಕೆಡಿಪಿ ಸದಸ್ಯರಾದ ಜಗದೀಶ್ ಡಿ., ಬೇಬಿ ಸುವರ್ಣ ಮಾಲಾಡಿ, ಸುಮತಿ ಶೆಟ್ಟಿ, ಭೂ ನ್ಯಾಯ ಮಂಡಳಿ ಸದಸ್ಯ ಬಾಬು, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಾರ್ವಜನಿಕರು ಸಮಸ್ಯೆಗಳ, ಸವಲತ್ತುಗಳು ಅಹವಾಲು ಸಲ್ಲಿಸಿದರು. ಕಂದಾಯ ಇಲಾಖೆಯ ಹೇಮಾ ಕಾರ್ಯಕ್ರಮ ನಿರ್ವಹಿಸಿದರು.












