ಬೆಳ್ತಂಗಡಿ: ಶಿಶಿಲ – ಬೈರಾಪುರ ರಸ್ತೆ ಅಭಿವೃದ್ಧಿಪಡಿಸುವ ಕುರಿತು ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ ಕೊಕ್ಕಡ ಗ್ರಾಮದ ಜನರ ಬಹಳ ವರ್ಷದ ಬೇಡಿಕೆ ಈ ಬಗ್ಗೆ ಸರಕಾರದ ಗಮನ ಸೆಳೆಯಲು ಅರಸಿನಮಕ್ಕಿಯಲ್ಲಿ ದಿನಾಂಕ 02/11/2026 ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಕೆಜಿ ಗೋಖಲೆ ವಹಿಸಿದ್ದರು. ಬೈರಾಪುರ ಶಿಶಿಲ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷರಾದ ಜೆ ಹೆಚ್ ಹಾಲಪ್ಪರ ಗೌಡ್ರು, ನಿವೃತ್ತ ಇಂಜಿನಿಯರ್ ಶಿವಪ್ರಕಾಶ್, ರಾಜ್ಯ ಜೆಡಿಎಸ್ ಕಾರ್ಯದರ್ಶಿ ನಿಡ್ವಾಳೆ ಚಂದ್ರಣ್ಣ, ಮೊಯ್ದೀನ್, ಅರಸಿನಮಕ್ಕಿ, ಸಿಎ ಬ್ಯಾಂಕ್ ನಿರ್ದೇಶಕರಾದ ಧರ್ಮರಾಜ ಅಡ್ಕಾಡಿ, ಶಿಶಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಎ.ಎಸ್. ಶಿಶಿಲೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ, ಚಾಮುಂಡೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ ರಾಮಚಂದ್ರ, ಶಿಶಿಲೇಶ್ವರ ದೇವಸ್ಥಾನ ಆಡಳಿತ ಸಮಿತಿ ಸದಸ್ಯ ಶ್ರೀಧರ್ ರಾವ್, ನಿಡ್ಲೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಧನಂಜಯ ಗೌಡ, ಉದ್ಯಮಿ ಕೆ ನರಸಿಂಹ ಗೌಡ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಹಕ್ಕೊತ್ತಾಯ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ರಾಘವೇಂದ್ರ ನಾಯಕ್, ಕಾರ್ಯದರ್ಶಿಯಾಗಿ ಧರ್ಮರಾಜ ಅಡ್ಕಾಡಿ ಇವರನ್ನು ಆಯ್ಕೆ ಮಾಡಲಾಯಿತು. ಉಳಿದಂತೆ ಶಿಶಿಲ, ಶಿಬಾಜೆ, ಹತ್ಯಡ್ಕ, ಕಳೆಂಜ, ರೇಕ್ಯಾ ಕೊಕ್ಕಡ ಗ್ರಾಮಗಳಿಂದ ಸಂಚಾಲರನ್ನು ಆಯ್ಕೆ ಮಾಡಲಾಯಿತು.












