July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುದುವೆಟ್ಟು : ನೂತನ ಬಸದಿಯ ಪಂಚಕಲ್ಯಾಣ ಮತ್ತು ನೂತನ ಬಿಂಬದ ಪ್ರತಿಷ್ಠಾ ಮಹೋತ್ಸವ

ಪುದುವೆಟ್ಟು: ಪುದುವೆಟ್ಟು ಗ್ರಾಮದಲ್ಲಿ ಸುಮಾರು 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ನಿಡ್ವಾಳ ಭ | 1008 ಶ್ರೀಪಾರ್ಶ್ವನಾಥ ಸ್ವಾಮಿಯ ನೂತನ ಬಸದಿಯು ನಿರ್ಮಾಣಗೊಂಡಿದ್ದು, ಪಂಚಕಲ್ಯಾಣ ಮತ್ತು ನೂತನ ಬಿಂಬದ ಪ್ರತಿಷ್ಠಾ ಮಹೋತ್ಸವವು ಆರಂಭವಾಗಿದೆ.

ಈ ಜಿನ ಮಂದಿರವು ಕಳೆದ 100 ವರ್ಷಗಳ ಹಿಂದೆ ಸಂಪೂರ್ಣ ನೆಲಸಮಗೊಂಡು ಅವಶೇಷಗಳಿಂದ ಕೂಡಿ ಅಜೀರ್ಣವಸ್ಥೆಯನ್ನು ತಲುಪಿತ್ತು. ಇದರ ಮೂಲ ಬಿಂಬ ಶ್ರೀಪಾರ್ಶ್ವನಾಥ ಸ್ವಾಮಿಯ ಅಮೃತ ಶಿಲೆಯ ಮೂರ್ತಿಯು ಕಡಬ ತಾಲೂಕಿನ ಕುಳವಳಿಕೆ ಬಸದಿಯಲ್ಲಿದ್ದುದ್ದರಿಂದ, ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೋಕ್ಷಣಾ ಪೂರ್ವಕ ನೂತನ ಬಿಂಬ ಪ್ರತಿಷ್ಠಾ ಮಹೋತ್ಸದ ನಿಮಿತ್ತ ನೂತನ ಬಸದಿಗೆ ಮೂಲಸ್ವಾಮಿ ಮೂರ್ತಿಯನ್ನು ಪೂಜೆವಿಧಿ ವಿಧಾನದ ನೆರವೇರಿಸಿ ಕುಳವಳಿಕೆ ಕುಟುಂಬದವರು ಬೀಳ್ಕೊಟ್ಟರು.

ಮೂಲಸ್ವಾಮಿಯ ವಿಗ್ರಹವನ್ನು ಹಾಗೂ ಬಸದಿಯ ಸಹಸ್ರಫಣಿ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ನೂತನ ವಿಗ್ರಹವನ್ನು ಕುತ್ಲೂರು ನಿಂದ ಭವ್ಯ ಮೆರವಣಿಗೆ ಮೂಲಕ ತರಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದಾಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರು ದರ್ಶನ ಪಡೆದರು. ನಂತರ ನೂತನ ಮೂರ್ತಿ ಯನ್ನು ಜಲ ಸ್ತಂಭನ ಮಾಡಲಾಯಿತು. ಈ ಬಸದಿಯ ಪ್ರದೇಶದಲ್ಲಿ ಬಸದಿಗೆ ಸಂಬಂಧಿಸಿದಂತೆ ಹಿಂದೆ ನೂರಾರು ಜೈನ ಕುಟುಂಬಗಳು ಇದ್ದವೆಂದು ಗುರುತಿಸಲಾಗಿದೆ ಆದರೆ ಪ್ರಸ್ತುತ ಕೇವಲ ನಾಲ್ಕು ಕುಟುಂಬಗಳು ಅಸುಪಾಸಿನಲ್ಲಿ ನೆಲಸಿವೆ.

ಈ ಕುಟುಂಬಗಳು ಒಟ್ಟು ಸೇರಿ ಬಸದಿಯನ್ನು ನಿರ್ಮಾಣ ಮಾಡುವ ಸಾದುದ್ದೇಶ ದಿಂದ ನಿರ್ಧರಿಸಿ, ಪರಮಪೂಜ್ಯ ಎಲಚಾರ್ಯ ಮುನಿಶ್ರೀ 108 ಶ್ರೀ ಪ್ರಸಂಗ ಸಾಗರ ಮಹಾರಾಜರ ಮಾರ್ಗದರ್ಶನ ಹಾಗೂ ಪವನಾ ಸಾನಿದ್ಯ ದೊಂದಿಗೆ ಈ ಸೀಮೆಯ ಗುರುಗಳಾದ ಪರಮಾಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಾಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ರವರು ಶ್ರೀ ಜೈನ ಮಠ, ಕಾರ್ಕಳ ರವರ ಮಾರ್ಗದರ್ಶನ ದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಯವರ ಗೌರವ ಅಧ್ಯಕ್ಷತೆ ಯಲ್ಲಿ, ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಅವರ ಗೌರವ ಸಲಹೆ ಯೊಂದಿಗೆ ಪೂರ್ಣ ನವೀಕರಣಗೊಳಿಸಲಾಗಿದೆ.

ಇದರ ಅಂಗವಾಗಿ ಫೆ.18 ರಿಂದ ಪೂಜಾ ವಿಧಿ ವಿಧಾನಗಳು ಆರಂಭವಾಗಿದ್ದು ಫೆ.22 ರವರೆಗೆ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೂಕ್ಷಣಾ ಪೂರ್ವಕ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ. ಈಗಾಗಲೇ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರು ಪುರಪ್ರವೇಶ ಮಾಡಿದ್ದು, ಅವರ ಉಪಸ್ಥಿತಿಯಲ್ಲಿ ಸಮಾರಂಭಗಳು ನಡೆಯಲಿದೆ.

Related posts

ನಾರಾವಿ: ಮಂಜುನಗರದಲ್ಲಿ ಗೋವುವಿಗೆ ಅಪರಿಚಿತ ವಾಹನ ಡಿಕ್ಕಿ, ಗಾಯಗೊಂಡು ರಸ್ತೆ ಬದಿಯಲ್ಲಿ ನರಳಾಡುತ್ತಿರುವ ಗೋವು

Suddi Udaya

ಬೆಳಾಲು : ಕಾಡoಡ ಬಳಿ ಗೇರು ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

Suddi Udaya

ವೇಣೂರು ಸರ್ಕಾರಿ ಪ್ರೌಢಶಾಲೆ: OSAAT ಸಂಸ್ಥೆಯಿಂದ ರೂ.1.25 ಕೋಟಿ ಅನುದಾನದಲ್ಲಿ ಶಾಲಾ ಕೊಠಡಿಗೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ : ಪ.ಪಂ. ಮತ್ತು ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’

Suddi Udaya

ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ಖರ್ಚಿನ ಬಿಲ್‌ಗಳಲ್ಲಿ ಅವ್ಯವಹಾರ: ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ಮಂಜುನಾಥ್ ಸಾಲ್ಯಾನ್ ಆರೋಪ

Suddi Udaya

ಧರ್ಮಸ್ಥಳದಲ್ಲಿ ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ

Suddi Udaya
error: Content is protected !!