25.5 C
ಪುತ್ತೂರು, ಬೆಳ್ತಂಗಡಿ
October 18, 2026
ಅಪರಾಧ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಸೌತಡ್ಕದಲ್ಲಿ ಅಂಗಡಿ ವ್ಯಾಪಾರ ವಿಚಾರಕ್ಕೆ ಗಲಾಟೆ: ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು

ಕೊಕ್ಕಡ: ಸೌತಡ್ಕ ದೇವಸ್ಥಾನದ ಬಳಿ ಅಂಗಡಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ, ಹಲ್ಲೆ ಹಾಗೂ ಆಸ್ತಿ ಪಾಸ್ತಿ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಒಂದು ಪ್ರಕರಣದಲ್ಲಿ ಅಂಗಡಿಗೆ ನುಗ್ಗಿ ಹಾನಿ, ಹಲ್ಲೆ ಮತ್ತು ಜೀವಬೆದರಿಕೆ ಬಗ್ಗೆ ಕೊಕ್ಕಡ ನಿವಾಸಿ ಕೃಷ್ಣ ಭಟ್ ನೀಡಿದ ದೂರಿನಂತೆ, ಅ. 18, ರಂದು ಬೆಳಿಗ್ಗೆ ಕೊಕ್ಕಡ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್‌ನ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಹಾಗೂ ಅವರ ಕೆಲಸದವರು ವ್ಯಾಪಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಈ ಹಿಂದೆ ಅದೇ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹರೀಶ್‌, ಅವರ ಹೆಂಡತಿ, ಮಕ್ಕಳು ಹಾಗೂ ಇತರರು ಏಕಾಏಕಿ ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿ,ಅಂಗಡಿಯಲ್ಲಿದ್ದ ಸುಮಾರು ₹25,000 ಅಂದಾಜು ಮೌಲ್ಯದ ಸ್ವತ್ತು ಹಾಗೂ ಕಟ್ಟಡಕ್ಕೆ ಹಾನಿ ಉಂಟುಮಾಡಿದ್ದಲ್ಲದೆ, ರಾಘವ ಭಂಡಾರಿ ಮತ್ತು ಅವರ ಕೆಲಸದವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಕಡೆಯವರು ದೂರು ನೀಡಿ, ಸೌತಡ್ಕ ದೇವಸ್ಥಾನದ ಬಳಿ ಹರಿಶ್ಚಂದ್ರ ಎಂಬುವರು ಅಂಗಡಿ ನಡೆಸುತ್ತಿದ್ದಾಗ, ಆರೋಪಿಗಳಾದ ರಾಘವ ಭಂಡಾರಿ, ಲಿಂಗಪ್ಪ, ಕಿಶೋ‌ರ್ ಹಾಗೂ ಚೇತನ್ ಎಂಬುವರು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ,ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆ ಎಸೆದು, ಹರಿಶ್ಚಂದ್ರ, ಅವರ ಪತ್ನಿ ಮತ್ತು ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಹರಿಶ್ಚಂದ್ರ ಅವರ ಪತ್ನಿ ದೂರು ನೀಡಿದ್ದಾರೆ. ಈ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.‌ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಿಸಲಾಗಿ ಈ ದೂರನ್ನು ನೀಡಿದ್ದಾರೆ.

Related posts

ಕನ್ಯಾಡಿ: ಗುರಿಪಳ್ಳ ಪ್ರವೀಣ್ ರೋಡ್ರಿಗಸ್ ರವರ ಮನೆಯ ಮೇಲೆ ಅಬಕಾರಿ ದಾಳಿ: 18 ಲೀ. ಕಳ್ಳಬಟ್ಟಿ ಸಾರಾಯಿ ವಶ

Suddi Udaya

ಭಾರಿ ಮಳೆಯಿಂದಾಗಿ ಕಾರ್ಯತ್ತಡ್ಕ ಕುಲಾಡಿ ಸೇತುವೆಯ ಬಳಿ ಧರೆಕುಸಿತ: ಅಡಿಕೆ ಗಿಡಗಳು ನೀರು ಪಾಲು

Suddi Udaya

ಜೂ.28: ಕಕ್ಕಿಂಜೆಯಲ್ಲಿ ಬ್ರಿಲಿಯಂಟ್ “ಕಿಡ್ಸ್ ವರ್ಲ್ಡ್” ಶುಭಾರಂಭ: ಮುದ್ದು ಕಂದಮ್ಮಗಳ ಆರೈಕೆ, ಬೆಳಿಗ್ಗೆಯಿಂದ-ಸಂಜೆಯ ತನಕ ಆಟ-ಪಾಠ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಾಷ್ಟ್ರೀಯ ಯುವದಿನಾಚರಣೆ

Suddi Udaya

ಕನ್ಯಾಡಿ I ಗ್ರಾಮದ ಚೆನ್ನಲ್ಲಿಕೆ ಮನೆಯ ಸಂಜೀವ ನಾಯ್ಕ್ ನಿಧನ

Suddi Udaya

ನಿಡ್ಲೆ ಪ್ರಾ.ಕೃ.ಪ. ಸ.ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಪ್ತಾಹ ಆಚರಣೆ ಮತ್ತು ಕೊಬ್ಬರಿ ಎಣ್ಣೆಗಿರಣಿ ಉದ್ಘಾಟನೆ

Suddi Udaya
error: Content is protected !!