31 C
ಪುತ್ತೂರು, ಬೆಳ್ತಂಗಡಿ
October 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ ಪತಂಜಲಿ ಯೋಗ ಶಾಖೆಯಲ್ಲಿ ನವರಾತ್ರಿ ಆಚರಣೆ

ಕಳಿಯ : ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಮಂಗಳೂರು ವಲಯಡ ಕಳಿಯ ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ನವರಾತ್ರಿಯ ಆಚರಣೆ ವಿಶಿಷ್ಟವಾಗಿ ನಡೆಯಿತು.
ನವರಾತ್ರಿಯ ಆರಂಭದಿಂದ ಮಹಾನವಮಿಯ ವರೆಗೆ ದುರ್ಗಾದೇವಿಯ ವಿವಿಧ ರೂಪಗಳ ವಿಶೇಷತೆಗಳ ಬಗ್ಗೆ ಪ್ರತಿದಿನ ಯೋಗಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ವ್ಯಾಖ್ಯಾನ ನೀಡಿದರು.

ವಿಶೇಷ ಯೋಗ ಪ್ರಾತ್ಯಕ್ಷಿಕೆಯನ್ನು ಶಿಕ್ಷಕಿ ಪ್ರೇಮಲತಾ ನಡೆಸಿಕೊಟ್ಟರು. ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನ ರಿ.ಉಪ್ಪಿನಂಗಡಿ ಇದರ ಮಹಾಭಾರತ ಸರಣಿಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಯೋಗ ಬಂಧುಗಳಿಗೆ ನವದುರ್ಗ ಪುಸ್ತಕವನ್ನು ವಿತರಿಸಲಾಯಿತು.

ಸಹಶಿಕ್ಷಕ ಸುಕೇಶ, ಸಂಚಾಲಕ ವಿಜಯ, ಪಕ್ತಾರ ಕೇಶವ, ಶಿವಣ್ಣ ಅಶೋಕ, ಸತೀಶ, ಭಾರತಿ ಪದ್ಮಲತಾ ಅರುಣ ಉಪಸ್ಥಿತರಿದ್ದರು.

Related posts

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಜಾಗೃತಿ ಕಾರ್ಯಕ್ರಮ

Suddi Udaya

ಜೇಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ

Suddi Udaya

ವಾಣಿ ಕಾಲೇಜು: ರೋವರ್‍ಸ್-ರೇಂಜರ್‍ಸ್ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪುರಸ್ಕಾರ

Suddi Udaya

ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ಕೈಯಿಂದ ಕಾರಿನ ಗಾಜು ಒಡೆದ ವಿವಾದ – ಐವರ‌ ವಿಚಾರಣೆ ಪರಸ್ಪರ ಪ್ರಕರಣ ದಾಖಲು

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ತೆನೆ ಹಬ್ಬ

Suddi Udaya

ವಿ.ಹಿಂ.ಪ. ಬಜರಂಗದಳ ಗ್ರಾಮ ಸಮಿತಿ ಕಾಯರ್ತಡ್ಕ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!