September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೆನ್ಲಾಕ್‌ ರಕ್ಷಾ ಸಮಿತಿ ಸಭೆಯಲ್ಲಿ ಕರೀಂ ಗೇರುಕಟ್ಟೆ, ಜಯರಾಮ ಭಾಗಿ

ಬೆಳ್ತಂಗಡಿ: ವೆನ್ಲಾಕ್ ರಕ್ಷಾ ಸಮಿತಿಯ ಸಭೆಯು ವೈದ್ಯಕೀಯ ಅಧೀಕ್ಷಕರ ಕಛೇರಿಯಲ್ಲಿ ನ.18 ರಂದು ನಡೆಯಿತು. ಈ ಸಭೆಯಲ್ಲಿ ರಕ್ಷಾ ಸಮಿತಿಗೆ ಬೆಳ್ತಂಗಡಿ ತಾಲೂಕಿನಿಂದ ನಾಮನಿರ್ದೇಶಿತರಾಗಿರುವ ಕಳಿಯ ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಮತ್ತು ತಾ.ಪಂ ಮಾಜಿ ಸದಸ್ಯ ಜಯರಾಮ ಭಾಗಿಯಾದರು.

ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಗಳು ಜನಸ್ನೇಹಿಯಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಲು ಮತ್ತು ಹೊರ ಜಿಲ್ಲೆಗಳಿಂದ ಅತೀ ಹೆಚ್ಚು ರೋಗಿಗಳು ತುರ್ತು ಚಿಕಿತ್ಸೆಗಾಗಿ ಬರುವುದರಿಂದ ನಮ್ಮ ಜಿಲ್ಲೆಯ ರೋಗಿಗಳಿಗೆ ತುರ್ತು ಐ ಸಿ ಯು ಲಭ್ಯ ಇಲ್ಲದೇ ಬಡವರು ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಂದಿದೆ. ಆದ್ದರಿಂದ ಹೆಚ್ಚುವರಿ ಐ ಸಿ ಯು ವ್ಯವಸ್ಥೆ ಮಾಡಲು ಕ್ರಮವಹಿಸುವಂತೆ ಆಗ್ರಹಿಸಿದರು.

ಆಸ್ಪತ್ರೆಯ ಆವರಣದ ಒಳಗೆ ಖಾಸಗಿ ಆಂಬುಲೆನ್ಸ್ ಗಳ ನಿಲುಗಡೆಗೆ ಕಡಿವಾಣ ಹಾಕುವಂತೆ ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್., ಸಮಿತಿಯ ಇತರ ಸದಸ್ಯರಾದ ಪದ್ಮನಾಭ ಅಮೀನ್, ಶ್ರೀಮತಿ ಪ್ರಮೀಳಾ ಈಶ್ವರ್, ಅನಿಲ್ ರಸ್ಕಿನ್ಹಾ, ಅಬ್ದುಲ್ ಸಲೀಮ್, ಶಶಿಧರ ಬಜಾಲ್, ದಾಮೋದರ ಪುತ್ತೂರು ಹಾಜರಿದ್ದರು.

Related posts

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯ ದಸ್ತಗಿರಿ

Suddi Udaya

ಅ.2 ರಂದು “ಪುರ್ಸ ಕಟ್ಟುನ ಇನಿ- ಕೋಡೆ – ಎಲ್ಲೆ” ಸಾಕ್ಷ ಚಿತ್ರ ಬಿಡುಗಡೆ

Suddi Udaya

ಜಿಲ್ಲಾ ಮಟ್ಟದ ಭಾವೈಕ್ಯತೆ ಮಕ್ಕಳ ಮೇಳ: ಕುಂಭಶ್ರೀ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪೊಲೀಸರ ನಿಯೋಜನೆ: ಪ್ರವಾಸಿಗರ ಮೋಜು ಮಸ್ತಿಗೆ ತಡೆ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಸಹಸಂಸ್ಥೆ ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನಲ್ಲಿ ಉದ್ಘಾಟನೆ

Suddi Udaya

ಮಿತ್ತಬಾಗಿಲು ಸ.ಹಿ.ಪ್ರಾ. ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!