30.1 C
ಪುತ್ತೂರು, ಬೆಳ್ತಂಗಡಿ
October 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮೆ। ಬಿ. ಪುಂಡಲೀಕ ಬಾಳಿಗಾ ಜುವೆಲ್ಲರ್ಸ್ ನವೀಕೃತ ವಿನ್ಯಾಸದೊಂದಿಗೆ ಸ್ಥಳಾಂತರಗೊಂಡು ಶುಭಾರಂಭ

ಬೆಳ್ತಂಗಡಿ: 37 ವರ್ಷಗಳಿಂದ ಚಿನ್ನ, ಬೆಳ್ಳಿ ಆಭರಣಗಳ ಮೂಲಕ ಗ್ರಾಹಕರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸಿರುವ ಬೆಳ್ತಂಗಡಿ ನಗರದ ಮೆ। ಬಿ.ಪುಂಡಲೀಕ ಬಾಳಿಗಾ ಜುವೆಲ್ಲರ್ಸ್ ಚಿನ್ನಾಭರಣ ಮಳಿಗೆ ಇದೀಗ ನವೀಕೃತ ವಿನ್ಯಾಸದೊಂದಿಗೆ ಮೂರು ಮಾರ್ಗದ ಬಳಿ ಸುವರ್ಣ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡು, ಅ.19ರಂದು ಶುಭಾರಂಭ ಗೊಂಡಿತ್ತು.

ಉದ್ಘಾಟನೆಯನ್ನು ಬಿ. ಪುರುಷೋತ್ತಮ ಬಾಳಿಗಾ ಪುಂಜಾಲಕಟ್ಟೆ ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್, ಮ್ಯಾನೇಜರ್ ಬಿ. ಜಗದೀಶ್ ಬಾಳಿಗಾ ಬೆಳ್ತಂಗಡಿ, ವರ್ತಕರ ಸಂಘದ ಅಧ್ಯಕ್ಷರಾದ ಶಶಿಧರ್ ಪೈ, ಕಾಂಪ್ಲೆಕ್ಸ್ ಮಾಲಕ ಭಾನುಪ್ರಸನ್ನ, ಅರ್ಚಕ ಶ್ರೀನಿವಾಸ ಭಟ್ ಲಾಯಿಲ, ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಶುಭಾರಂಭದ ಪ್ರಯುಕ್ತ ಚಿನ್ನಾಭರಣ ವೇಸ್ಟೇಜ್ ಮೇಲೆ ನಿಯಮಿತ ರಿಯಾಯಿತಿ , 4 ಗ್ರಾಂ ಮೇಲ್ಪಟ್ಟ ಪ್ಲೈನ್ ಆಭರಣಗಳ ಮೇಲೆ ವೇಸ್ಟೇಜ್ ಶೇ. 9 (ಪುನಃ ಮಂಜೂರಿ ಇಲ್ಲ) , ನಾಣ್ಯಗಳ ಮೇಲೆ ವೇಸ್ಟೇಜ್ 8 ಗ್ರಾಂ. 1%, 4ಗ್ರಾಂ. 2% , 2ಗ್ರಾಂ. 2%, 1 ಗ್ರಾಂ. 2% ಸಿಗಲಿದೆ. ಈ ಕೊಡುಗೆ ಆರ್ಡರ್ ಮಾಡಿದ ಆಭರಣ ಹಾಗೂ ಹರಳುಗಳಿರುವ ಆಭರಣಗಳಿಗೆ ಅನ್ವಯಿಸುವುದಿಲ್ಲ ಹಾಗೂ ಇದು ಅ.19 ರಿಂದ ಅ. 26 ರ ವರೆಗೆ ಮಾತ್ರ ಅನ್ವಯಿಸುತ್ತದೆ.

Related posts

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಘಟಕ : ಮಹಿಳಾ ಪ್ರಕಾರದ ವತಿಯಿಂದ ಮಹಿಳಾ ದಿನಾಚರಣೆಯ ಕಾರ್ಯಕ್ರಮ

Suddi Udaya

ಗರ್ಡಾಡಿ ಸೌಭಾಗ್ಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ

Suddi Udaya

ಬೆಳಾಲು ಶ್ರೀ ಧ‌. ಮ. ಅ. ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ‘ಶೌರ್ಯ’ ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸಭೆ

Suddi Udaya
error: Content is protected !!