26 C
ಪುತ್ತೂರು, ಬೆಳ್ತಂಗಡಿ
October 21, 2026
Uncategorizedಅಪಘಾತಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಿಡ್ಲೆ ಗ್ರಾಮದ ಪಾರ್ಪಿಕಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

ಕೊಕ್ಕಡ : ಸ್ನೇಹಿತರ ಜೊತೆ ಸ್ನಾನಕ್ಕಾಗಿ ಬಂದು ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಅ.೨೦ರಂದು ಮಧ್ಯಾಹ್ನ ನಡೆದಿದೆ.

ಕೌಕ್ರಾಡಿ ಗ್ರಾಮದ ಮೂಡುಬೈಲ್ ಜನಾರ್ದನ್ ಗೌಡ ಎಂಬವರ ಪುತ್ರ ಕೀರ್ತನ್ (೨೧ವ.) ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಮುಳುಗಿ ಮೃತಪಟ್ಟವರಾಗಿದ್ದಾರೆ. ಇಂದು ಮಧ್ಯಾಹ್ನ ಕೀರ್ತನ್ ಹಾಗೂ ಅವರ ಸ್ನೇಹಿತರು ಸೇರಿ ಸ್ನಾನ ಮಾಡಲೇಂದು ನಿಡ್ಲೆ ಗ್ರಾಮದ ಪಾರ್ಪಿಕಲ್ಲಿಗೆ ಬಂದಿದ್ದರು, ಎಲ್ಲರೂ ಸೇರಿ ನದಿಗೆ ಸ್ನಾನಕ್ಕಾಗಿ ಇಳಿಸಿದ್ದು, ನದಿಯಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ನೀರಿನ ಆಲದ ಅರಿವಿಲ್ಲದ ಕೀರ್ತನ್ ನೀರಿನಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ.

ಕೂಡಲೇ ಸ್ಥಳೀಯರು ಸೇರಿ ಮುಳುಗಿದ್ದ ಕೀರ್ತನ್‌ನ ಮೃತದೇಹವನ್ನು ಮೇಲೆತ್ತಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಧಮ೯ಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣದ ತನಿಖೆ ನಡೆಸಿದ್ದಾರೆ

Related posts

ಅ. 18: ಬಳಂಜದಲ್ಲಿ ವಿಜೃಂಭಣೆಯ 4ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

Suddi Udaya

ಲಾಯಿಲ 38 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya

ಕಾಶಿಪಟ್ಣ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ: ಕೋರ್ಟ್ ರಸ್ತೆಯ ನಿವಾಸಿ ಜಯರಾಮ ನಿಧನ

Suddi Udaya

ಮಿದುಳಿನ ರಕ್ತಸ್ರಾವ: ಮಹಿಳೆ ಮೃತ್ಯು

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ

Suddi Udaya
error: Content is protected !!